
ಭಾರತದ ಸ್ವಾತಂತ್ರ್ಯ ಇತಿಹಾಸ ಕಂಡ ಅಪ್ರತಿಮ ದೇಶಭಕ್ತ, ತನ್ನ ಬಾಲ್ಯದಿಂದಲೇ ತನ್ನನ್ನು ತಾನು ಭಾರತ ಮಾತೆಗಾಗಿ ಸಮರ್ಪಿಸಿಕೊಂಡ ತೀವ್ರವಾದಿ, ದೇಶಕ್ಕಾಗಿ ಮಿಡಿಯುವ ಪ್ರತಿಯೊಬ್ಬ ಬಿಸಿ ರಕ್ತದ ಯುವಕರ ಸ್ಫೂರ್ತಿ.. ನನಗೂ ಕೂಡ.. ಆ ಚಿಲುಮೆಯೇ ಚಂದ್ರಶೇಕರ್ಅಜಾದ್...! ಸ್ವಾತಂತ್ರ ಸಂಗ್ರಾಮದಲ್ಲಿ ಕ್ರಾಂತಿಕಾರಿ ಹೋರಾಟಕ್ಕೆ ಹೊಸ ರೂಪು ನೀಡಿದ ಧೀಮಂತ... ತನ್ನ ಅತಿ ಬುದ್ದಿವಂತಿಕೆಯಿಂದ ಆಂಗ್ಲರಲ್ಲಿ ನಡುಕ ಹುಟ್ಟಿಸಿದ ಕಲಿ.. ಇಂದು ನಾವೆಲ್ಲಾ ನೆನಪಿಸುವ ಭಗತ್ ಸಿಂಗ್, ರಾಜಗುರು, ಸುಖದೇವ್, ಜತಿನ್ ದಾಸ್ ಮುಂತಾದ ಕ್ರಾಂತಿಕಾರಿಗಳೆಲ್ಲ ಆಜಾದರ ಗರಡಿಯಲ್ಲಿ ಪಳಗಿದವರೇ.. ಆದರೆ ಬ್ರಿಟಿಷರಿಗೆ ಆಜಾದರ ಮೇಲಿದ್ದ ಭಯ ಅಜಾದರನ್ನು ಹೆಚ್ಚು ಸಮಯ ಬದುಕುವಂತೆ ಮಾಡಲಿಲ್ಲ.. ಅನೇಕ ಬಾರಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಅವರನ್ನು ಭಯದ ಬೇಗುದಿಯಲ್ಲಿ ಬೇಯುವಂತೆ ಮಾಡಿದ್ದ ಅಜಾದ್ ೧೯೩೧ ಫೆಬ್ರವರಿ ೨೭ ರಂದು ತೀವ್ರ ಹೋರಾಟದ ನಂತರ ಕೊನೆಯುಸಿರೆಳೆಯಬೇಕಾಯಿತು..!ತನ್ನನ್ನು ಸುತ್ತುವರಿದ ಆಂಗ್ಲ ಪೊಲೀಸರೊಂದಿಗೆ ಒಂದೇ ಒಂದು ಮರವನ್ನು ಆಸರೆಯನ್ನಾಗಿಸಿಕೊಂಡು ಒಂದೇ ಒಂದು ರಿವಾಲ್ವಾರ್ ನಿಂದ, ಅಂತಹ ಸನ್ನಿವೇಶದಲ್ಲೂ ಗುಂಡುಗಳನ್ನು ತಾನಾಗಿಯೇ ತುಂಬಿಸಿಕೊಳ್ಳುತ್ತ, ಸತತ ಒಂದು ಗಂಟೆಗಳ ಕಾಲ ಹೋರಾಡಿದ ಆ ಹೋರಾಟ ಅವಿಸ್ಮರಣೀಯ.. ತಾನು ಯಾವಾಗಲೂ ಸ್ವತಂತ್ರನಾಗಿಯೆ ಇರಬೇಕೆಂದು ಪ್ರತಿಜ್ಞೆ ಮಾಡಿದ್ದ ಅಜಾದ್ ಆ ಹೋರಾಟದ ನಡುವೆಯೂ ತನ್ನಲ್ಲಿದ್ದ ಗುಂಡುಗಳನ್ನು ಲೆಕ್ಕವಿತ್ತುಕೊಂಡು ಕೊನೆಯಲಿದ್ದ ಒಂದೇ ಒಂದು ಗುಂಡನ್ನು ತನ್ನ ತಲೆಗೆ ಗುರಿಯಿಟ್ಟು "मैं आजाद हूँ..! आजाद ही रहेगा" ಎಂದು ಭಾರತ ಮಾತೆಯ ಮಣ್ಣಿಂದ ದೂರವಾದರು... ಆದರೆ ಭಾರತೀಯರ ಹೃದಯದಿಂದಲ್ಲ..!
No comments:
Post a Comment