Monday, March 28, 2011

ನಿನ್ನರಮನೆಯಲ್ಲಿ...

ನೀ ಮೊದಲ ಮಳೆಯ ಸಿಹಿ ಘಮವೇನೆ 
ಚೆಲುವಾಗಿ ಚಿಮ್ಮುವ ಕಾರಂಜಿಯೇ
ದುಂಬಿ ಮೆಚ್ಚಿದ ಹೂವೇನು ನೀ ಬಹುವಾಗಿ ಕಾಡುತ್ತಿರುವೆ
ಮೂಕವಿಸ್ಮಿತ ನಿನ್ನ ಚೆಲುವಿಗೆ ಹೇಳಲಾರೆ ಹೆಚ್ಚೇನನೂ..

ಕಣ್ಣಲಿ ಒಲವನು ಸೂಸುವ ಪರಿಗೆ
ಪ್ರೀತಿಯುಕ್ಕುವ ಮೊಗದ ಮಾಟಕೆ
ಏನೆಂದು ಕರೆಯಲಿ ನಾ ಪ್ರೇಮದ ಗಣಿಯೇ
ತುಸು ವಿಚಲಿತ ತುಸು ಚಂಚಲ ನಾ ನಿನ್ನ ಮೋಹಿತ..

ತಲ್ಲಣಿಸುತ್ತಿಹುದು ಹಿತವಾಗಿ ದಮನಿ 
ಉಕ್ಕಿ ಹರಿಯೋ ಪ್ರೀತಿಯಲಿ 
ನೆಲವ ಬಿಟ್ಟು ಮೇಲೇರಿವೆ ಚರಣಗಳು
ಓಲಾಡುತ ಖುಷಿಯಲಿ..

ನಿನ್ನಂತರಂಗದ ಅರಮನೆಯಲ್ಲಿ 
ಎಲ್ಲೆ ಮೀರಿದ ಪ್ರೇಮಿ ನಾನು 
ಒಂದಿನಿತೂ ಬದುಕೆನು ನಿನ್ನ ವಿನಹ
ನೀನೆ ನನ್ನ ಸಂಜೀವಿನಿಯು..

ಹೇಳೇ ನೀ ಮೊದಲ ಮಳೆಯ ಸಿಹಿ ಘಮವೇನೆ....

Friday, March 25, 2011

ನಿಷೇಧದ ಸುಳಿಯಲ್ಲಿ ದೇಶಪ್ರೇಮಿ ಸಂಘಟನೆ..!

೨೦೦೯ ರ ಅಕ್ಟೋಬರ್ ೧೬ ರಂದು ಗೋವಾದಲ್ಲಿ ಯಾರೋ (ಸನಾತನ ಸಂಸ್ಥೆಯವರೆಂದು ಊಹಿಸಿರುವ) ಇಬ್ಬರು ಯುವಕರು ಅಷ್ಟೇನೂ ಪ್ರಭಾವಶಾಲಿಯಲ್ಲದ ಸ್ಪೋಟಕಗಳನ್ನು ಹೊತ್ತೊಯ್ಯುವಾಗ ದಾರಿ ಮದ್ಯೆ ಸಿಡಿದು ಮೃತ ಪಟ್ಟರು.. ಸತ್ತವರು ಸನಾತನ ಸಂಸ್ಥೆಯವರೆಂಬ ಕಾರಣಕ್ಕೆ ಆ ಸ್ಪೋಟದ ಹೊಣೆಯನ್ನು 'ಸನಾತನ'ದ ಮೇಲೆ ಹೇರಲಾಯಿತು...! 

ಇದಕ್ಕಾಗಿಯೇ ಕಾದು ನಿಂತಂತಿದ್ದ ಪೊಳ್ಳು ಜಾತ್ಯತೀತ 'ರಾಜಕೀಯ ಪಕ್ಷಗಳು' ಹಿಂದೂ ಸಂಘಟನೆಗಳನ್ನು ಹತ್ತಿಕ್ಕಲು ಆರಂಬಿಸಿದವು.. ಯಾರು ಯಾರೋ ಮಾಡಿದ ಸ್ಪೋಟಗಳನ್ನು ಹಿಂದೂ ಸಂಘಟನೆಗಳ ಮೇಲೆ, ಹಿಂದೂ ನಾಯಕರ ಮೇಲೆ ಕಟ್ಟುವ ಕೆಲಸಗಳು ಜೋರಾಗಿ ನಡೆದವು..! ಅದು ಎಷ್ಟರ ಮಟ್ಟಿಗೆ ಮುಂದುವರಿದಿದೆ ಎಂದರೆ ದೇಶಕ್ಕಾಗಿ, ಧರ್ಮಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದ 'ಸನಾತನ ಸಂಸ್ಥೆ'ಯನ್ನು ನಿಷೇಧಿಸುವಷ್ಟರ ಮಟ್ಟಿಗೆ..! ಇನ್ನು ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ 'ಸನಾತನ ಸಂಸ್ಥೆ' ನಿಷೇದಿಸಲ್ಪಡುತ್ತದೆ.. ಅ ನಂತರ ರಾಷ್ಟ್ರೀಯವಾಗಿ ನಿಷೇಧಿಸುವ ಬಗ್ಗೆ ಚರ್ಚೆಗಳಾಗುತ್ತಿವೆ.. ನಿಜಕ್ಕೂ ಆಶ್ಚರ್ಯವೆನಿಸುತ್ತದೆ ಬಾಂಧವರೇ..!
ಕೇರಳದಾದ್ಯಂತ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ 'Popular Front Of  India 'ನಂತಹ ಇನ್ನು ಹಲವಾರು ಮುಸ್ಲಿಂ ಮತಾಂಧ ದೇಶ ವಿರೋಧಿ ಸಂಘಟನೆಗಳು ರಾಜಾರೋಷವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ದೇಶಪ್ರೇಮಿ ಸಂಘಟನೆಯೊಂದು ನಿಷೇದಿಸಲ್ಪಡುತ್ತದೆ..!

ಒಂದು ಚಿಕ್ಕ ಸ್ಪೋಟಕವನ್ನು ಹೊತ್ತೊಯ್ದಿದ್ದಕ್ಕೆ ನಿಷೇದಿಸುವುದಾದರೆ ಕಳೆದವಾರವಷ್ಟೇ ಭಾರಿ ಪ್ರಮಾಣದಲ್ಲಿ ಬಾಂಬ್ ತಯಾರಿಸುವಾಗ ಸ್ಪೋಟಗೊಂಡು ಕೇರಳದ ಪಾಪುಲರ್ ಫ್ರಂಟ್ ನ 5 ಜನ ಸತ್ತರಲ್ಲವೇ.. ಅದಕ್ಕಿಂತ ನಾಲ್ಕು ತಿಂಗಳು ಮುಂಚೆ ಶಿಕ್ಷಕನ ಕೈ ಕಡಿದ ಕೇಸಿನ ಸಂಬಂಧ ಪೊಲೀಸರು ಪಾಪುಲರ್ ಫ್ರಂಟ್ ನ ಕಚೇರಿ ಜಾಲಾಡಿದಾಗ ಭಾರಿ ಪ್ರಮಾಣದಲ್ಲಿ ಸ್ಪೋಟಕಗಳು ಪತ್ತೆಯಾದವಲ್ಲ..! ಆಗ ಯಾಕೆ ನಿಷೇಧದ ಮಾತು ಬರಲಿಲ್ಲ..?? ಹೇಳಿ ಪೊಳ್ಳು ಜಾತ್ಯತೀತವಾದಿಗಳೇ ನಿಮಗೆ ಬರೀ ರಾಜಕೀಯ ಮುಖ್ಯವೇ ಅಥವಾ ದೇಶದ ಭಧ್ರತೆ ಮುಖ್ಯವೇ..?

ಪಾಪುಲರ್ ಫ್ರಂಟ್ ಬೆಳೆದು ನಿಂತ ಇತಿಹಾಸವನ್ನು ಗಮನಿಸಿದರೆ ಇದನ್ನೆಂದೋ ನಿಷೇಧಿಸಬೇಕಿತ್ತು. ೧೯೯೮ ಫೆಬ್ರುವರಿಯ ಕೊಯಮತ್ತೂರು ಬಾಂಬ್ ಸ್ಪೋಟದ ರೂವಾರಿ ಅಬ್ದುಲ್ ನಾಸಿರ್ ಮದನಿಯ 'ಇಸ್ಲಾಮಿಕ್ ಸೇವಕ್ ಸಂಘ (ISS ), ಅಲ್-ಉಮ್ಮ, ಕೇರಳದಾದ್ಯಂತ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ NDF , ಕರ್ನಾಟಕದ KFD ಹಾಗು ನಿಷೇಧಿತ SIMI ಯ ಸಮ್ಮಿಲನವೇ 'ಪಾಪುಲರ್ ಫ್ರಂಟ್ ಆಫ್ ಇಂಡಿಯಾ'. 2003 ರ ಮುಂಬೈ ಸರಣಿ ಸ್ಪೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಬಷೀರ್ ಮೂಲತಃ ಕೇರಳದ NDF ನವನೇ.. ಪಾಪುಲರ್ ಫ್ರಂಟ್ ನ ಕಛೇರಿಗಳ ಮೇಲೆ ಇತ್ತೀಚೆಗೆ ನಡೆದ ದಾಳಿ ಸಂದರ್ಭದಲ್ಲಿ ಭಾರೀ ಪ್ರಮಾಣದ ಸ್ಪೋಟಕಗಳು ಪತ್ತೆಯಾಗಿವೆ. ಇಷ್ಟೆಲ್ಲಾ ಆಗಿದ್ದೂ ಒಂದೇ ಒಂದು ನಿಷೇಧದ ಪ್ರಶ್ನೆ ಬರಲಿಲ್ಲ..! ದೇಶಪ್ರೇಮದ ನರ ಸತ್ತು ಹೋಗಿರುವ ಈ ಜಾತ್ಯಾತೀತ (?) ರಾಜಕೀಯ ಪಕ್ಷಗಳು ಇಂತಹ ದೇಶವಿರೋಧಿ ಗುಂಪುಗಳನ್ನು ನಿಷೇಧಿಸಲು ಮುಂದಾಗುವುದಿಲ್ಲ..! ಬದಲಿಗೆ ಭಾರತ ಮಾತೆಗಾಗಿ ಮಿಡಿಯುತ್ತಿರುವ, ತನ್ನೆಲ್ಲ ಸರ್ವಸ್ವವನ್ನೂ ತಾಯಿ ಭಾರತಿಗೆ ಧಾರೆಯೆರೆದಿರುವ ಹಿಂದೂ ಸಂಘಟನೆಗಳನ್ನು ನಿಷೇಧಿಸಲು ಮುಂದಾಗುತ್ತವೆ... ಭಯೋತ್ಪಾದನೆಯ ನಿಗ್ರಹಕ್ಕೆಂದು ವಾಜಪೇಯೀ ಸರಕಾರ ತಂದಿದ್ದ ಕಟ್ಟು ನಿಟ್ಟಾದ " POTA " ಕಾಯಿದೆಯನ್ನು ವಾಪಾಸು ತೆಗೆದುಕೊಳ್ಳುತ್ತವೆ..! ನಮ್ಮ ಸರ್ವಧರ್ಮ ಸಹಿಷ್ಣು ಪ್ರಜೆಗಳಂತೂ ಅದನ್ನು ಅಷ್ಟೇ ಸಮಾದಾನ ಚಿತ್ತದಿಂದ ನೋಡಿ ಸುಮ್ಮನಾಗುತ್ತಾರೆ..!

"ಧರ್ಮೋ ರಕ್ಷತಿ ರಕ್ಷಿತಃ"

Friday, March 18, 2011

ಜನಪರ ಕಾಳಜಿಯಿಂದ..

ಕರ್ನಾಟಕದ ಕರಾವಳಿ ಪರಿಸರ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಯುಪಿಸಿಎಲ್ (ನಾಗಾರ್ಜುನ) ಉಷ್ಣ ವಿದ್ಯುತ್ ಸ್ಥಾವರಕ್ಕಿದು ಸೂಕ್ತವಲ್ಲ.. 600  ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಮೊದಲ ಹಂತದಲ್ಲೇ ಹಾರು ಬೂದಿ ಹಾಗು ಉಪ್ಪು ನೀರಿನ ಸಮಸ್ಯೆಯಿಂದ ಸುತ್ತಮುತ್ತಲ ವಾಸಿಗಳು ಕಂಗೆಟ್ಟು ಹೋಗಿದ್ದಾರೆ.. ಇದು ನಾಲ್ಕನೇ ಹಂತಕ್ಕೆ ಹೋಗುವಾಗ ಬಹುಶ ನಾಗಾರ್ಜುನದ ಆಸುಪಾಸಲ್ಲಿ ಬರುವ ದಕ್ಷಿಣ ಕನ್ನಡ ಹಾಗು ಉಡುಪಿಯ ಕೆಲ ಪ್ರದೇಶಗಳು ಜನರಿಲ್ಲದೆ  ಬಿಕೋ ಎನ್ನುವುದಂತೂ ದಿಟ..!! ಪರಿಸರ ತಜ್ಞರ ಅಭಿಪ್ರಾಯದಂತೆ ಪಶ್ಷಿಮ ಘಟ್ಟಕ್ಕೂ ಅಪಾಯವಿದ್ದು ಕರ್ನಾಟಕ ತನ್ನ ಅಮುಲ್ಯ ಪ್ರಕೃತಿ ಸಂಪತ್ತನ್ನು ಕಳೆದುಕೊಳ್ಳಲಿದೆ..!
ಜನಪ್ರತಿನಿಧಿಗಳೇ ಒಮ್ಮೆ ಉಡುಪಿಗೆ ಬಂದು ಅಲ್ಲಿನ ಜನರ ಪಾಡನ್ನೊಮ್ಮೆ ಕಣ್ಣಾರೆ ಕಂಡು ಹೋಗಿ..! ಬಜೆಟ್ ನಲ್ಲಿ ಕರಾವಳಿಗರಿಗೆ ಅನುಕೂಲವೆನಿಸುವ ಒಂದೂ ಯೋಜನೆ ಪ್ರಕಟಿಸದ ರಾಜ್ಯ ಸರ್ಕಾರ ಇತರೆಡೆಗಿನ ಉಪಯೋಗಕ್ಕಾಗಿ ಕರಾವಳಿಯನ್ನು ಬಳಸುತ್ತಿರುವುದು ಖಂಡನೀಯವಲ್ಲವೇ..?
ಬನ್ನಿ ಹೋರಾಟದಲ್ಲಿ ಕೈ ಜೋಡಿಸಿ..

Thursday, March 17, 2011

ಒಲವಧಾರೆ

ಮೇಘದಲಿ ಅವಿತ ಮಳೆಹನಿಯಂತೆ 
ನಿನ್ನೆದೆಗೂಡಲಿ ಬಚ್ಚಿಟ್ಟುಕೊಳ್ಳುವೆನು..
ಮೇಘ ಮಳೆಯಾಗಿ ಧರೆಗಿಳಿಯುವಾಗ 
ನಿನ್ನ ಸ್ಪರ್ಶಿಸಲು ಕಾಯುತ್ತಿರುವೆ...


ನಿನ್ನುಸಿರ ಗಾಳಿ ನಾನಾದಂತೆ ಕನಸಾಗಿದೆ 
ನಿನ್ನ ದೇಹ ಸೇರೋ ಆಸೆಯಿಂದ..
ನಿನ್ನ ಹನಿ ಹನಿ ನೆತ್ತರ ಕಣ ಕಣವು ನಾನಾಗುವೆ 
ನಿನ್ನೆದೆಯ ಬಡಿತ ನಾನಾಗಿ ಎಂದೂ ನಿಲ್ಲದೆ...

ಒಲವಧಾರೆಯಲಿ ತೋಯಿಸುವೆ ನಿನ್ನ
ಬೆಳದಿಂಗಳು ಭುವಿಯ ತೋಯಿಸಿದಂತೆ..
ನನ್ನ ಬಿಸಿಯುಸಿರಲೇ ನಿನ್ನ ಬೆಚ್ಚಗಿಡುವೆ ನಾ 
ಒಂದು ಕ್ಷಣವೂ ನಿನ್ನಗಲದೆ...

ನೀನಿಲ್ಲದೆ

ನೀನಿಲ್ಲದ ಈ ಹೃದಯ ದೇವರಿಲ್ಲದ ದೇಗುಲದಂತೆ 
ಏಕಾಂತದಿ ಕಲ್ಲಾಗಿದೆ, ಸುಖಾಂತ್ಯ ನೀಡುವೆಯಾ ಓ ಒಲವೇ..

ಮುಂಜಾವಿನ ನಸುಬೆಳಕಲಿ, ಮುಸ್ಸಂಜೆಯ ಏಕಾಂತದಿ 
ನಿನ್ನದೇ ನಿರೀಕ್ಷೆಯಲಿ ಕನವರಿಸುತ್ತಿದೆ ಈ ಹೃದಯ
ಬಸವಳಿದು ನಿರ್ಜೀವವಾಗಿದೆ ನಿನ್ನ ದಾರಿ ಕಾಣದಾಗಿ 
ನಿನ್ನೆ ನಾಳೆಗಳ ನಡುವೆ ಈ ವರ್ತಮಾನದಿ
ಏಕಾಂಗಿಯಾಗಿರುವೆ, ಜೊತೆಯಾಗು ಬಾ ಪ್ರೇಮಧಾರೆಯ ಸುರಿಸಿ...

ನಿನ್ನ ಪ್ರೇಮಕೈದಿಯಾಗೋ ಭರದಲ್ಲಿ ಪ್ರೆಮರೋಗಿಯಾಗಿಹೆ ನಾ
ಪ್ರೇಮಬಿಕ್ಷೆಯ ನೀಡಿ ಉಳಿಸು ನನ್ನನು....