Monday, July 4, 2011

ಪಾಪುಲರ್ ಫ್ರಂಟ್ ಆಫ್ ಇಂಡಿಯಾ ದೇಶದೊಳಗಿನ ವಿಷವ್ಯೂಹ.."ಅಮ್ಮಾ ಭಾರತಾಂಬೆ, ನಿನ್ನ ಉದರದಲ್ಲಿ ಜನಿಸಿದ ನಾನು ನಿನಗೆ ನನ್ನ ರಕ್ತದರ್ಪಣವನ್ನಲ್ಲದೆ ಇನ್ನೇನು ತಾನೇ ಕೊಡಲು ಸಾಧ್ಯ.."
ಒಬ್ಬ ದೇಶಭಕ್ತನ ಈ ಮಾತುಗಳು ಎಂತಹ ರೋಮಾಂಚನವನ್ನುಟ್ಟಿಸುತ್ತವೆ.!!
ದೇಶಕ್ಕಾಗಿ ತನ್ನ ರಕ್ತಧಾರೆಯನ್ನರಿಸಲು ಸಿದ್ಧವಾಗಿರುವ ಇಂತಹ ಅದೆಷ್ಟೋ ದೇಶಭಕ್ತ ಭಾರತೀಯರ ನಡುವೆ ಕೆಲ ವಿಷ ಜಂತುಗಳು ಹುಟ್ಟಿರುವುದು ಅಚ್ಚರಿಯನ್ನುಂಟುಮಾಡುತ್ತದೆ. ದೇಶದ ಹೊರಗಿನ ಶತ್ರುಗಳಿಗಿಂತ ಇವರು ಅತ್ಯಂತ ಅಪಾಯಕಾರಿ.! ಅಂತಹ ಹಲವು ವಿಷಜಂತುಗಳ ನಡುವೆ ನಾನು ಹೇಳಹೊರಟಿರುವ ದ್ರೋಹಿಕೂಟವೇ 'ಪಾಪುಲರ್ ಫ್ರಂಟ್ ಆಫ್ ಇಂಡಿಯಾ'!!
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತನ್ನ ಹೆಸರಲ್ಲಿ 'ಇಂಡಿಯಾ'ವನ್ನು ಸೇರಿಸಿಕೊಂಡು 'ಇಂಡಿಯಾ'ಗೆ ಮಾರಕವಾಗುವತ್ತ ಬೆಳೆಯುತ್ತಿರುವ ಒಂದು ವಿಷ ವ್ಯೂಹ! ಸಮಾಜ ಸೇವೆಯ ಪೊಳ್ಳು ಮುಖವಾಡ ಧರಿಸಿರುವ ಇದರ ಮೂಲ ಉದ್ದೇಶ ಭಾರತದ ಇಸ್ಲಾಮೀಕರಣ ಹಾಗು ಕೇವಲ ಇಸ್ಲಾಮೀಕರಣ..! 

ಕರ್ನಾಟಕದಲ್ಲಿ ಕೋಮುಗಲಭೆಗಳ ಮೂಲಕ ಸಾಮರಸ್ಯ ಕದಡಿ ಈಗ ಹುಣಸೂರು ಅವಳಿ ವಿದ್ಯಾರ್ಥಿ ಹತ್ಯೆಯ ನಂತರ ಹೆಚ್ಚಿನ ಸುದ್ದಿಯಲ್ಲಿರುವ ಕರ್ನಾಟಕದ 'ಕರ್ನಾಟಕ ಫೋರಂ ಫಾರ್ ಡಿಗ್ನಿಟಿ' (KFD), ಕೇರಳದಲ್ಲಿ ಹಿಂದೂ ಹತ್ಯಾ ಕಾಂಡಗಳ ಹಾಗು ದೇಶ ವಿರೋಧಿ ಚಟುವಟಿಕೆಗಳ ಮೂಲಕ ಭಾರತೀಯರ ಎದೆ ನಡುಗಿಸಿದ್ದ 'ನ್ಯಾಷನಲ್ ಡೆವಲಪ್ಮೆಂಟ್ ಫ್ರಂಟ್' (NDF), ಹಾಗು ತಮಿಳುನಾಡಿನಲ್ಲಿ ಇಸ್ಲಾಮಿಕರಣದ ಕೆಲಸದಲ್ಲಿ ನಿರತವಾಗಿದ್ದ 'ಮನಿತ ನೀತಿ ಪಸರೈ' (MNP) ಹಾಗು ನಿಷೆಧಕ್ಕೊಳಗಾಗಿ ಹರಿದು ಹಂಚಿ ಹೋಗಿದ್ದ 'ಸಿಮಿ'ಯ ಸಂಯೋಗದಿಂದಾಗಿ 2006 ರ ನವೆಂಬರ್ 22  ರಂದು 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' ಅಧಿಕೃತವಾಗಿ ಚಾಲನೆ ಪಡೆಯಿತು. ಪ್ರಾರಂಭ ಪಡೆದ ಮೂರೇ ತಿಂಗಳಿಗೆ ಅಂದರೆ 2007  ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ 30000 ಜನರನ್ನು ಸೇರಿಸಿ  'Empower India Conference ' ನಡೆಸುವ ಮೂಲಕ ತನ್ನ ಶಕ್ತಿ ಪ್ರದರ್ಶನದ ಜೊತೆಗೆ ತಾನು ಪ್ರಗತಿಪರ ಚಿಂತಕ ಎಂಬುದನ್ನು ಸಾಬೀತುಪಡಿಸುವ ಪ್ರಯತ್ನವನ್ನೂ ಮಾಡಿತು. ಅರ್ಥಾತ್ ಜನರನ್ನು ಮೂರ್ಖರನ್ನಾಗಿಸಿತು..

ಆದರೆ ಇದರ ಸಹಸಂಘಟನೆಗಳ ಪೂರ್ವಾಪರಗಳ ಅರಿವಿದ್ದವರು ಇದನ್ನು ನಂಬಲು ಸಾದ್ಯವೇ?
ಕೇರಳದ National Devolopment Front ! ಇದರ ಮೂಲ ಕಂಡುಬರುವುದು ISS ನಿಂದ. ಈಗ ಬೆಂಗಳೂರು ಸರಣಿ ಸ್ಪೋಟದ ಆರೋಪದಡಿಯಲ್ಲಿ ಬಂಧಿತನಾಗಿ (ಭಯೋತ್ಪಾದಕ ಕೈದಿಯಾಗಿದ್ದರೂ ರಾಜಾತಿಥ್ಯದ ಡಿಲಕ್ಸ್ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿರುವ) ಜೈಲು ಸೇರಿರುವ ಅಬ್ದುಲ್ ನಾಸೆರ್ ಮದನಿ 1989 ರಲ್ಲಿ ಹಿಂದೂಗಳ ದಮನಕ್ಕಾಗಿ ಪ್ರಾರಂಭಿಸಿದ ಮುಸ್ಲಿಂ ಮತಾಂಧವಾದಿಗಳ ಕೂಟವೇ 'ಇಸ್ಲಾಮಿಕ್ ಸೇವಕ್ ಸಂಗ್' (ISS ). ಆದರೆ 1992 ರ ಅಯೋದ್ಯೆ ಘಟನೆ ಹಿನ್ನಲೆಯ ಗಲಭೆಯ ನಂತರ ISS ಅನ್ನು ನಿಷೇಧಿಸಲಾಯಿತು. ನಿಷೇಧಗೊಂಡ ಕೆಲವೇ ತಿಂಗಳ ಅಂತರದಲ್ಲಿ ISS ಹೊಸ ಹೆಸರಿನೊಂದಿಗೆ ಮತ್ತೊಮ್ಮೆ ಅರ್ಭಟಿಸಲು ಸಜ್ಜಾಯಿತು. ಅದರ ಫಲವೇ 1993 ರಲ್ಲಿ ಅಸ್ತಿತ್ವಕ್ಕೆ ಬಂದ National Devolopment Front (NDF). NDF ಅಸ್ತಿತ್ವಕ್ಕೆ ಬಂದ ನಂತರ ಕೇರಳದಾದ್ಯಂತ ಹಿಂದೂ ವಿರೋಧಿ ಹಿಂಸೆ, ಗಲಭೆಗಳು ಹೆಚ್ಚಾದವು. 2003 ಮೇ 2 ರಂದು ಕೋಳಿಕ್ಕೋಡು ಜಿಲ್ಲೆಯ ಮರಾಡ್ ಬೀಚ್ ಹತ್ಯಾ ಕಾಂಡ ಎಲ್ಲರನ್ನು ಬೆಚ್ಚಿ ಬೀಳಿಸುವ ಜೊತೆಗೆ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಅಂದು 8  ಜನ ಮುಗ್ಧ ಹಿಂದೂ ಮೀನುಗಾರರನ್ನು ಕೊಚ್ಚಿ ಹಾಕಲಾಗಿತ್ತು! ಇದರ ಬೆನ್ನಲ್ಲೇ ಕೋಮುಗಲಭೆ ಸ್ಪೋಟಗೊಂಡು ನೂರಾರು ಹಿಂದೂ ಕುಟುಂಬಗಳು NDF ದಾಳಿಗೆ ಗುರಿಯಾಗಿದ್ದವು. ಆ ನಂತರದ ಪೋಲಿಸ್ ಧಾಳಿಯಲ್ಲಿ ಮರಾಡ್ ಬೀಚ್ ಬಳಿಯ ಜುಮ್ಮಾ ಮಸೀದಿಯಲ್ಲಿ NDF  ಗೆ ಸೇರಿದ ಸ್ಪೋಟಕಗಳು ಹಾಗು ಹತ್ಯಾರಗಳು ಪತ್ತೆಯಾದವು. ಅದೇ ಸಮಯದಲ್ಲಿ NDF  ನ ಹಾಗು ಪಾಕಿಸ್ತಾನದ ISI  ನಡುವಿನ ಸಂಬಂಧ ಬೆಳಕಿಗೆ ಬಂದಿತ್ತು. ಹಾಗು NDF  ನ ಚಟುವಟಿಕೆಗಳಿಗೆ ISI  ಮತ್ತು ಇರಾನ್ ಹಣವನ್ನೊದಗಿಸುತ್ತಿರುವುದರ ಬಗ್ಗೆ ಬಲವಾದ ಶಂಕೆಗಳೆದ್ದವು. ಆದರೆ ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳುವಲ್ಲಿ ಪೊಲೀಸರು ವಿಫಲರಾದರು. 2003  ರ ಮುಂಬೈ ಸರಣಿ ಸ್ಪೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಬಷೀರ್ ಮೂಲತಃ ಕೇರಳದ NDF ನವನೇ. ಆಶ್ಚರ್ಯದ ವಿಷಯವೆಂದರೆ 2007 ರ ಏಪ್ರಿಲ್ 29  ರಂದು ಪಾಕಿನ ಆಗಿನ ಪಾರ್ಲಿಮೆಂಟ್ ಸದಸ್ಯನಾಗಿದ್ದ ಮೊಹಮ್ಮದ್ ತಾಹ ಮೊಹಮ್ಮದ್ ಕೇರಳದ ತಳಸ್ಸೆರಿಗೆ ಬಂದು NDF  ನ ಕೆಲ ನಾಯಕರುಗಳನ್ನು ಭೇಟಿ ಮಾಡಿ ಹೋಗಿದ್ದ. !!


ಇನ್ನು ಕರ್ನಾಟಕದಲ್ಲಿ PFI  ಗೆ ಬೆನ್ನೆಲುಬಾಗಿರುವ KFD (ಕರ್ನಾಟಕ ಫಾರಂ ಫಾರ್ ಡಿಗ್ನಿಟಿ). 2001 ರಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಪ್ರಾರಂಭವಾದ ಈ ಸಂಘಟನೆ ಕ್ರಮೇಣ ರಾಜ್ಯವ್ಯಾಪಿ ವ್ಯಾಪಿಸಿತು. ಇಸ್ಲಾಂ ಅಜೆಂಡಾದ KFD  ಕರ್ನಾಟಕದ ಹಲವು ಕಡೆಗಳಲ್ಲಿ ಕೊಮುಗಲಭೆಯನ್ನೆಬಿಸಿ ಕೋಮು ಸಾಮರಸ್ಯ ಕದಡುವಲ್ಲಿ ಯಶಸ್ವಿಯಾಗಿತ್ತು. ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಎದ್ದ ಕೋಮು ಸಂಘರ್ಷ ಹಾಗು ಮೈಸೂರಿನ ಉದಯಗಿರಿ ಕೋಮುಗಲಭೆಗಳಿಗೆ KFD ಯೇ ಸೂತ್ರಧಾರ. ಮಂಗಳೂರಿನ ಹಿಂದೂ ಯುವ ನೇತಾರನಾಗಿದ್ದ ಸುಖಾನಂದ ಶೆಟ್ಟಿ ಮುಲ್ಕಿ ಹಾಗು ಹಿಂದೂ ಸಂಘಟನೆಗಳ ಕ್ರಾಂತಿಕಾರಿ ಕಾರ್ಯಕರ್ತರಾಗಿದ್ದ ಸಂತೋಷ್ ಬಡಕಬೈಲು, ಅನಂತ್ ಪೊಳಲಿ ಮುಂತಾದವರ ಹತ್ಯೆಯ ರೂವಾರಿಯೇ ಈ ಕರ್ನಾಟಕ ಫಾರಂ ಫಾರ್ ಡಿಗ್ನಿಟಿ.! ತೀರಾ ಇತ್ತೀಚೆಗಿನ ಮೈಸೂರು ಜಿಲ್ಲೆಯ ಹುಣಸೂರು ಅವಳಿ ವಿದ್ಯಾರ್ಥಿ ಅಪಹರಣ ಹಾಗು ಮಾರಣಹೋಮ! ಮೈಸೂರಿನಾದ್ಯಂತ ಸರಣಿ ಸ್ಪೋಟ ನಡೆಸುವ ಸಲುವಾಗಿ ಹಣ ಕೂಡಿಸಲು ಮಾಡಿದ ಘೋರ ಕೃತ್ಯ! ಒಂದು ವೇಳೆ ಅವರಿಗೆ ಹಣ ದೊರೆತು ಮೈಸೂರಿನ ಸರಣಿ ಸ್ಪೋಟದ ಸಂಚು ಯಶಸ್ವಿಯಾಗಿದ್ದರೆ?! ಊಹಿಸಲೂ ನಡುಕವೆನಿಸುತ್ತದೆ..! ಇಂತಹ ದೇಶ ವಿರೋಧಿ ಸಂಘಟನೆಗಳ ಸಂಯೋಗದಿಂದ ಪ್ರಾರಂಭವಾದ PFI  ದೇಶಪ್ರೇಮಿಯಾಗಳು ಸಾಧ್ಯವೇ..?

NDF , KFD , MNP  ಗಳಲ್ಲದೆ ಮಣಿಪುರದ Lilong  Social Forum , ಆಂಧ್ರದ Andhra Pradesh Association for  Social Justice . ರಾಜಸ್ತಾನದ Community Social & Educational Society, ಪಶ್ಚಿಮ ಬಂಗಾಳದ Nagarik Adhikaar Suraksha Samiti, ಹಾಗು ಗೋವಾದ Goa Citizens Forum ಜೊತೆಗೆ PFI  ಸಹಯೋಗ ಹೊಂದಿದ್ದು ಅವರವರ ರಾಜ್ಯಗಳಲ್ಲಿ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ. ಅಷ್ಟು ಮಾತ್ರವಲ್ಲದೆ PFI  ಇತ್ತೇಚೆಗೆ SDPI (SOCIAL DEMOCRATIC PARTY OF INDIA ) ಎಂಬ ರಾಜಕೀಯ ಪಕ್ಷವನ್ನು ಕೂಡ ಸ್ಥಾಪಿಸಿದ್ದು ರಾಜಕೀಯವಾಗಿ ನೆಲೆಯೂರಲು ಹವಣಿಸುತ್ತಿದೆ. ತನ್ನ ಪ್ರಚಾರಕ್ಕಾಗಿ PFI  ಪತ್ರಿಕೆಗಳನ್ನು ಕೂಡ ನಡೆಸುತ್ತಿದ್ದು ಮಲಯಾಳಂ ನಲ್ಲಿ 'ತೇಜಸ್', ಕನ್ನಡದಲ್ಲಿ 'ಪ್ರಸ್ತುತ' ಹಾಗು ತಮಿಳಿನಲ್ಲಿ 'ವಿದಿಯಾಲ್ ವೆಲ್ಲಿ' (ಎಲ್ಲವು ಪಾಕ್ಷಿಕ) ಪಾಪುಲರ್ ಫ್ರಂಟ್ ಆಫ್ ಇಂಡಿಯಾ ದ ಮುಖವಾಣಿಗಳು.


2006 ರಲ್ಲಿ ಚಾಲನೆ ಪಡೆದ ಪಾಪುಲರ್ ಫ್ರಂಟ್ ತನ್ನ ರಹಸ್ಯ ಅಜೆಂಡಾವಾದ ಇಸ್ಲಾಮಿಕರಣದ ಅನುಷ್ಠಾನಕ್ಕಿಳಿಯಿತು. ಅದರ ಮೊದಲ ಹೆಜ್ಜೆಯೇ 'ಲವ್ ಜಿಹಾದ್'!!!! ಅನ್ಯ ಧರ್ಮೀಯ (ಹಿಂದೂ, ಕ್ರಿಶ್ಚಿಯನ್) ಹದಿಹರೆಯದ ಹುಡುಗಿಯರನ್ನು ಪ್ರೇಮದ ಬಲೆಗೆ ಬೀಳಿಸಿ, ಲೈಂಗಿಕವಾಗಿ ಬಳಸಿಕೊಂಡು, ಮದುವೆಯಾಗಿ ನಂತರ ಮುಸ್ಲಿಂ ಆಗಿ ಮತಾಂತರಿಸುವ ಜಾಲವೇ ಈ ಲವ್ ಜಿಹಾದ್. ಈ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟ ಮುಸ್ಲಿಂ ಯುವಕರಿಗೆ ಉಚಿತ ಮೊಬೈಲ್,  ಬೈಕ್, ಫ್ಯಾಶನೆಬಲ್ ಉಡುಗೆ ಹಾಗು ಖರ್ಚಿಗಾಗಿ ಹಣವನ್ನು ಕೊಡಲಾಗುತ್ತದೆ. ಮಿಶನ್ ಯಶಸ್ವಿಯಾಗಿ ಮುಕ್ತಾಯವಾದ ನಂತರ ಒಬ್ಬೊಬ್ಬನಿಗೆ  ೧ ಲಕ್ಷ ನಗದು ಹಾಗು ವ್ಯವಹಾರ ಪ್ರಾರಂಭಿಸಲು ಇತರೆ ನೆರವನ್ನು ಒದಗಿಸಲಾಗುತ್ತದೆ. ಈ ಜಾಲದಲ್ಲಿ ಸಿಲುಕಿದ ಅದೆಷ್ಟೋ ಹಿಂದೂ ಕ್ರಿಶ್ಚಿಯನ್ ಹುಡುಗಿಯರು ಅತೀ ಹೀನ ಸ್ಥಿತಿಯ ಕತ್ತಲ ಬದುಕು ನಡೆಸುತ್ತಿದ್ದಾರೆ. ಇನ್ನು ಹಲವರು ಆತ್ಮಹತ್ಯೆಯಲ್ಲಿ ತಮ್ಮ ಬದುಕನ್ನು ಅಂತ್ಯಗೊಳಿಸಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ ಈವರೆಗೆ 6000 ಕ್ಕೂ ಹೆಚ್ಚು ಲವ್ ಜಿಹಾದ್ ಪ್ರಕರಣಗಳು ಪತ್ತೆಯಾಗಿದ್ದು ಇದರ ಬಹುಪಾಲು ಕೇರಳದಲ್ಲೇ ನಡೆದಿವೆ. ಇನ್ನು ಲೆಕ್ಕಕ್ಕೆ ಸಿಗದ ಪ್ರಕರಣಗಳೆಷ್ಟೋ...

2009 ರಲ್ಲಿ ದೇಶದ ಭದ್ರತೆಗೆ ಸವಾಲಾಗುವ ಮಾಹಿತಿಯೊಂದು ಹೊರಬಿತ್ತು. ಪಾಪುಲರ್ ಫ್ರಂಟ್ ಪ್ರಬಲವಾಗಿರುವ ಕೇರಳದ ಕಣ್ಣೂರು ಹಾಗು ಎರ್ನಾಕುಲಂ ಜಿಲ್ಲೆಗಳ 185 ಕ್ಕೂ ಹೆಚ್ಚು ಮುಸ್ಲಿಂ ಯುವಕರಿಗೆ ಲಷ್ಕರ್ ಎ ತೊಯ್ಬಾದಿಂದ ಜಿಹಾದ್ ತರಬೇತಿ ನೀಡಲಾಗಿದೆ ಎಂದು. ಪೋಲಿಸ್ ಬಲೆಯಲ್ಲಿದ್ದ ಕಾಶ್ಮೀರದ ಮೂರು ಜನ ಯುವ ಭಯೋತ್ಪಾದಕರಾದ ಫಿಯಾಜ್ ಅಹಮದ್, ಸಾಜದ್ ಅಹಮದ್ ರೇಷಿ ಮತ್ತು ಶಬ್ಬೀರ್ ಅಹಮದ್ ಈ ಸ್ಪೋಟಕ ಸತ್ಯವನ್ನು (2009  ಮಾರ್ಚ್ 17 ) ಬಾಯ್ಬಿಟ್ಟಿದ್ದರು. ಈ ಮೂವರು 2008 ರ ಅಕ್ಟೋಬರ್ ನಲ್ಲಿ ಕಾಶ್ಮೀರದ ಕುಪ್ವಾರ ಅರಣ್ಯ ಪ್ರದೇಶದಲ್ಲಿ ಲಷ್ಕರ್ ಎ ತೊಯ್ಬ ಆಯೋಜಿಸಿದ್ದ ಜಿಹಾದ್ ತರಬೇತಿಯ ಮುಖ್ಯಸ್ಥರಾಗಿದ್ದರು. 

ಜುಲೈ 4 , 2010 ರಂದು ಕೇರಳದ ಕೊಟ್ಟಾಯಂ ನಲ್ಲಿ ಪಾಪುಲರ್ ಫ್ರಂಟ್ ನ ತಾಲಿಬಾನ್ ಮಾದರಿ ನ್ಯಾಯಾಲಯದ ಆದೇಶಾನುಸಾರ ಟಿ.ಜೆ.ಜೋಸೆಫ್ ಎಂಬ ಕಾಲೇಜು ಉಪನ್ಯಾಸಕನ ಕೈ ಕಡಿದು ಹಾಕಲಾಯಿತು. ಇದು ಪಾಪುಲರ್ ಫ್ರಂಟ್ ರಹಸ್ಯವಾಗಿ ನಡೆಸಿಕೊಂಡು ಬರುತ್ತಿದ್ದ ತಾಲಿಬಾನ್ ಮಾದರಿ ನ್ಯಾಯಾಲಯಗಳನ್ನು ಹೊರಜಗತ್ತಿಗೆ ತೋರಿಸಿಕೊಟ್ಟಿತು. ಇದರ ಬೆನ್ನಲ್ಲೇ ಜುಲೈ 12 ರಂದು ಉತ್ತರ ಕೇರಳದ ಎಡಕ್ಕಾಡ್ ಬಳಿಯ ಪಾಪುಲರ್ ಫ್ರಂಟ್ ನ ಕಚೇರಿಗೆ ಪೊಲೀಸರು ಧಾಳಿ ನಡೆಸಿದರು. ಅಲ್ಲಿ ಪತ್ತೆಯಾಗಿದ್ದು ಹಲವು ನಾಡಬಾಂಬ್ ಗಳು, ಇತರ ಸ್ಪೋಟಕಗಳು, ತಲವಾರುಗಳು, ರಾಡ್, ಸೈಕಲ್ ಚೈನ್...!!! ಪ್ರಗತಿಪರ ಸುಧಾರಕ ಎಂದು ಹೇಳಿಕೊಳ್ಳುತ್ತಿದ್ದ ಪಾಪುಲರ್ ಫ್ರಂಟ್ ಇಷ್ಟೊಂದು ಪ್ರಗತಿಪರ ಎಂದು ತಿಳಿದದ್ದು ಆವಾಗಲೇ..! ನಂತರದ ಧಾಳಿಗಳಲ್ಲಿ 'ಜಿಹಾದ್' ಅನ್ನು ಉತ್ತೇಜಿಸುವ  ಹಲವು ಕರಪತ್ರಗಳು, ಹೊತ್ತಿಗೆಗಳನ್ನು ಪಾಪುಲರ್ ಫ್ರಂಟ್ ನ ಕಚೇರಿಗಳಿಂದ ವಶಪಡಿಸಿಕೊಳ್ಳಲಾಯಿತು. 2010  ರ ಆಗಸ್ಟ್ ನಲ್ಲಿ ಕೇರಳ ಸರಕಾರ ಪಾಪುಲರ್ ಫ್ರಂಟ್ ನ  ಲಷ್ಕರ್ ಎ ತೊಯ್ಬ ಹಾಗು ಹಿಜ್ಬುಲ್ ಮುಜಾಹಿದ್ದೀನ್ ಸಂಬಂಧದ ಬಗ್ಗೆ ಕೇರಳ ನ್ಯಾಯಾಲಯಕ್ಕೆ ಲಿಖಿತ ವರದಿ ನೀಡಿತು.


ಈ ವರ್ಷದ ಆರಂಭದಲ್ಲಿ (2011 ಫೆಬ್ರವರಿ 26 ) ಕೇರಳದ ಕೋಳಿಕ್ಕೋಡ್ ಬಳಿ ಪಾಪುಲರ್ ಫ್ರಂಟ್ ಗೆ ಸೇರಿದ ಅಡಗುತಾಣದಲ್ಲಿ ಬಾಂಬ್ ತಯಾರಿಸುವಾಗ ಅದು ಸ್ಪೋಟಗೊಂಡು PFI ನ 5  ಜನ ಯಮನ ಪಾದ ಸೇರಿದ್ದರು. ಇತ್ತೀಚಿಗೆ ಮೇ ತಿಂಗಳ ಕೊನೆಯಲ್ಲಿ ಪಾಪುಲರ್ ಫ್ರಂಟ್ ನ ಕೇರಳದ ಮಹಮ್ಮದ್ ನಿಯಾಜ್ ಅನ್ನು ಫ್ರಾನ್ಸ್ ನಲ್ಲಿ ಅಲ್ಲಿನ ಪೊಲೀಸರು ಬಂಧಿಸಿದರು. ಈತ ಫ್ರಾನ್ಸ್ ನಲ್ಲಿ ಅಲ್-ಕೈದಾದ ಸಂಪರ್ಕ ಸಾಧಿಸಿ 'ಪಾಪುಲರ್ ಫ್ರಂಟ್ ಆಫ್ ಫ್ರಾನ್ಸ್' ಸ್ಥಾಪನೆಗೆ ಸಿದ್ದತೆ ನಡೆಸಿದ್ದ. ಒಟ್ಟಾರೆಯಾಗಿ ಒಂದೊಂದೇ ಪ್ರದೇಶವನ್ನು ಇಸ್ಲಾಮೀಕರಣಗೊಳಿಸುತ್ತ ಸಾಗುವುದು ಪಾಪುಲರ್ ಫ್ರಂಟ್ ನ ಧ್ಯೇಯ.! 2010  ರ ಜುಲೈನಲ್ಲಿ ಕೇರಳದ ಕಮುನಿಸ್ಟ್ ಸರಕಾರದ ಮುಖ್ಯಮಂತ್ರಿಯಾಗಿದ್ದ ವಿ.ಎಸ್.ಅಚ್ಚುತಾನಂದನ್ ಅವರು ಪಾಪುಲರ್ ಫ್ರಂಟ್ ಅನ್ನು ಉಲ್ಲೇಖಿಸಿ ನೀಡಿದ "ಇನ್ನು 20  ವರ್ಷದಲ್ಲಿ ಕೇರಳವನ್ನು ಮುಸ್ಲಿಂ ಪ್ರಧಾನ ರಾಜ್ಯವನ್ನಾಗಿಸುವ ಹುನ್ನಾರ ನಡೆಯುತ್ತಿದೆ" ಎಂಬ ಬಹಿರಂಗ ಹೇಳಿಕೆ ಇಲ್ಲಿ ಪ್ರಸ್ತುತವೆನಿಸುತ್ತದೆ. 

ಇಷ್ಟೆಲ್ಲಾ ದೇಶವಿರೋಧದ ಚಟುವಟಿಕೆಗಳ ಮಧ್ಯೆಯೂ ಪಾಪುಲರ್ ಫ್ರಂಟ್ ರಾಜಾರೋಷವಾಗಿ ಕಾರ್ಯಾಚರಿಸುತ್ತಿದೆ. ಕಾರಣ ತಮ್ಮನ್ನು ತಾವು ಸೆಕ್ಯುಲರ್ ವಾದಿಗಳೆಂದು ಕರೆಸಿಕೊಳ್ಳುವವರ ಷಂಡ ರಾಜಕಾರಣ! ಒಂದು ಚಿಕ್ಕ ಸ್ಪೋಟದ ಆರೋಪದಡಿ, ಅದು ಸಾಬೀತಾಗದಿದ್ದರು ಕೂಡ 'ಸನಾತನ ಸಂಸ್ಥೆ' ಎಂಬ ಹಿಂದೂ ದೇಶಪ್ರೇಮಿ ಸಂಸ್ಥೆಯನ್ನು ನಿಷೇಧಿಸುವ ಬಗ್ಗೆ ಒತ್ತಡಗಳು ಬರುತ್ತವೆ.. ಹಿಂದೂ ನಾಯಕರುಗಳನ್ನು ಇಲ್ಲದ ಕೇಸುಗಳಲ್ಲಿ ಸಿಲುಕಿಸಿ ಅವರನ್ನು ದಮನಿಸಲಾಗುತ್ತದೆ.. ತನ್ನ ರಕ್ತದ ಕಣ ಕಣದಲ್ಲೂ ಉತ್ಕಟ ದೇಶಪ್ರೇಮವನ್ನು ಹೊಂದಿರುವ, ತನ್ನ ಪ್ರತಿ ಉಸಿರಲ್ಲೂ ವಂದೇ ಮಾತರಂ ಅನ್ನು ಸ್ತುತಿಸುತ್ತಿರುವ ಭಾರತ ಮಾತೆಯ ಹೆಮ್ಮೆಯ ಆರೆಸೆಸ್ (RSS ) ಅನ್ನು ನಿಷೇಧಿಸಲು ಇಲ್ಯಾಸ್ ಮಹಮ್ಮದ್ ತುಂಬೆಯಂತಹ (ರಾಜ್ಯಾಧ್ಯಕ್ಷ, PFI ಕರ್ನಾಟಕ) ದೇಶದ್ರೋಹಿಗಳು ಬೊಬ್ಬೆ ಹಾಕುತ್ತಾರೆ.! ಇಲ್ಯಾಸ್ ಮಹಮ್ಮದ್ ಅವರೇ,  ಭಾರತದ ಎದೆ ಭಗೆಯುವ ನಿಮ್ಮಂತವರಿಗೆ RSS ನ ಹೆಸರು ಎತ್ತುವ ಅರ್ಹತೆಯೂ ಇಲ್ಲ..! 

ಪುಣ್ಯ ಭರತ ಭೂಮಿಯ ಮಣ್ಣಲ್ಲೇ ಬೆಳೆದು ಭರತ ಮಾತೆಗೆ ದ್ರೋಹವೆಸಗುತ್ತಿರುವ ಇಂತಹ ಮತಾಂಧ ಶಕ್ತಿಗಳನ್ನು ಹೀಗೆಯೇ ಬೆಳೆಯಲು ಬಿಟ್ಟರಾಗುವುದೇ..?! ಒಂದು ರಾಷ್ಟ್ರವೆಂದ ಮೇಲೆ ದೇಶ ವಿರೋಧಿ ಚಟುವಟಿಕೆಗಳು ಕೂಡ ಇದ್ದೇ ಇರುತ್ತದೆ. ಆದರೆ ಅದನ್ನು ಮಟ್ಟ ಹಾಕಲು ದೇಶಪ್ರೇಮಿಗಳು ತಯಾರಾಗಬೇಕಷ್ಟೇ.. 'ದುಷ್ಟ ಶಿಕ್ಷಣ - ಶಿಷ್ಟ ರಕ್ಷಣ'ವನ್ನು ಅದಲು ಬದಲು ಮಾಡಿ ಆಡಳಿತ ನಡೆಸುತ್ತಿರುವ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರಕಾರದಿಂದ ಇದು ಮೊದಲ್ಗೊಳ್ಳಬೇಕು..!

ಧರ್ಮೋ ರಕ್ಷತಿ ರಕ್ಷಿತಃ

3 comments:

  1. good work ashwin...continue...vande matharam

    ReplyDelete
  2. our people wont understand these things n they wont think abt this.............really.........

    ReplyDelete
  3. ಬೀಜೇಪಿ ೫ ವರ್ಷ ಅಧಿಕಾರದಲ್ಲಿತ್ತು. ಇಂಥಹ ದೇಶದ್ರೋಹಿ ಸಂಘಟನೆಗಳನ್ನು ಬುಡಸಮೇತ ಕೀಳಬಹುದಿತ್ತು. ಆದರೆ ಬೀಜೇಪಿ ಅಧಿಕಾರದಲ್ಲಿದ್ದಾಗಲೇ ಇವೆಲ್ಲ ಆಳವಾಗಿ ಬೇರೂರಿದ್ದಕ್ಕೆ ಏನು ಹೇಳೋಣ.. ಗುಜರಾತ್ ಮಾದರಿ ಎಂದು ಹೇಳುತ್ತಲೇ ದೇಶದ ಭದ್ರತೆ ಬಗ್ಗೆ ರಾಜಿ ಮಾಡಿಕೊಂಡ ಕರ್ನಾಟಕದ ಬೀಜೇಪಿ ಗೆ ಯಾವಾಗ ಬುಧ್ಧಿ ಬರುತ್ತದೋ?

    ReplyDelete