Wednesday, April 27, 2011

ಒಲವ ಕಣ್ಣಾಮುಚ್ಚಾಲೆ

ಎಲ್ಲಿರುವೆ ಅಡಗಿರುವೆ ಓ ಒಲವೇ ಬಾ ಒಮ್ಮೆ 
ಕೂಗಿ ಕರೆಯುವಾಸೆ ನಿನ್ನ ಮತ್ತೊಮ್ಮೆ ಮಗದೊಮ್ಮೆ 

ತಡವರಿಸಿ ಕನವರಿಸಿ ಕನಸಕಟ್ಟಿ ಕೂತಿರುವೆ
ಎದೆಯಲೊಂದು ಗುಡಿಯ ಮಾಡಿ ನಿನಗಾಗಿ ಕಾದಿರುವೆ

ನನ್ನ ನೆತ್ತರ ಕಣ ಕಣದಲೂ ನಿನದೇ ಕಾತರ 
ನನ್ನೆದೆಯ ಪ್ರತಿ ಬಡಿತದಲೂ ನಿನದೇ ಸರಿಗಮ

ಓ ಒಲವೇ ಬಾ ಒಲವೇ ತುಂಬುಖುಷಿಯಿಂದ
ಕಡೆವರೆಗೂ ಬೆಸೆಯುವೆ ಹೊಸದೊಂದು ಬಂಧ 

ಕಾಡಿಸಿ ಸತಾಯಿಸದಿರು ನನ್ನ ಮನವನ್ನ 
ಮೊಗವ ತೋರು ಬಾ, ನಾ ಉಸಿರು ಬಿಡುವ ಮುನ್ನ

Tuesday, April 26, 2011

ಬತ್ತಿ ಹೋದ ಖಾಲಿ ಕೊಳದಲಿ 'ರಮ್ಯ' ಸ್ನಾನ..

ರಾಜ್ಯ ಕಾಂಗ್ರೆಸ್ ನಲ್ಲಿ 'ರಮ್ಯಾಯಣ' ಆರಂಭ !! ಕನ್ನಡದ ಬಹುಬೇಡಿಕೆಯ ನಟಿಯಾಗಿರುವ ಜಗಳಗಂಟಿ 'ರಮ್ಯ' ಕಳೆದ ವಾರ ರಾಹುಲ್ ಗಾಂಧಿ ರಾಜ್ಯ ಭೇಟಿ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸುವುದರೊಂದಿಗೆ ಕಾಂಗ್ರೆಸ್ ನಲ್ಲಿ ಜಗಳವಾಡಲು ಅಣಿಯಾಗಿದ್ದಾರೆ. ಅದಾಗಲೇ ಸತ್ತು ಮಲಗಿರುವ ರಾಜ್ಯ ಕಾಂಗ್ರೆಸ್ ರಮ್ಯ ಸೇರ್ಪಡೆಯಿಂದ ಒಂದು ಕ್ಷಣ ಜೀವ ಪಡೆದು ಮಗ್ಗುಲು ಬದಲಾಯಿಸಿ ಮತ್ತೆ ಸತ್ತು ಮಲಗಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಕ್ಷರಶಃ ನಾಮಾವಶೇಷದ ಸ್ಥಿತಿಯಲ್ಲಿದೆ. ಅಧ್ಯಕ್ಷರ ಬದಲಾವಣೆ, KPCC ಪುನಾರಚನೆ ಇದ್ಯಾವುದೂ ಕಾಂಗ್ರೆಸ್ ಪುನಶ್ಚೇತನಕ್ಕೆ ನೆರವಾಗಲಿಲ್ಲ. ನಾಯಕರುಗಳು ತಮ್ಮ ತಮ್ಮ ಸ್ವಂತಿಕೆ ಹಾಗು ತಮ್ಮ ಛಾಪನ್ನು ಉಳಿಸಿಕೊಳ್ಳುವ ಹಠಕ್ಕೆ ಬಿದ್ದರೇ ವಿನಃ ಪಕ್ಷದ ಸಂಘಟನೆ ಬಗ್ಗೆ ಒಬ್ಬರೂ ಚಿಂತಿಸುತ್ತಿಲ್ಲ. ರಾಜ್ಯದ ಪ್ರಮುಖ ವಿರೋಧ ಪಕ್ಷವಾಗಿದ್ದರೂ ಒಂದರ ನಂತರ ಒಂದು ಎಂಬಂತೆ ಹೊರಬರುತ್ತಿರುವ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಯಡಿಯೂರಪ್ಪನವರ ಕುಟುಂಬ ರಾಜಕೀಯ, ಶೂನ್ಯದತ್ತ ಸಾಗುತ್ತಿರುವ ಅಭಿವೃದ್ದಿ, ಜನರಿಗೆ ಸರ್ಕಾರದ ಮೇಲಾಗಿರುವ ಭ್ರಮನಿರಸನ ಇದೆಲ್ಲವನ್ನು ಇಟ್ಟುಕೊಂಡು ಹೋರಾಟ ರೂಪಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಡೇ ಪಕ್ಷ ಆ ಪ್ರಯತ್ನಗಳೂ ಕೂಡ ನಡೆಯುತ್ತಿಲ್ಲ. ನಿಜವಾಗಿ ಹೇಳಬೇಕೆಂದರೆ ರಾಜ್ಯದಲ್ಲಿ ದಕ್ಷ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸ್ವತಃ ಬಿಜೆಪಿಯವರೇ..! ಯಡಿಯೂರಪ್ಪನವರ ಆಡಳಿತದ ವಿರುಧ್ದದ ಇತ್ತೀಚೆಗಿನ ಬಂಡಾಯವೇ ಇದಕ್ಕೆ ಸಾಕ್ಷಿ.

ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬಳ್ಳಾರಿ ಪಾದಯಾತ್ರೆ ಪ್ರಚಾರ ಗಿಟ್ಟಿಸಿತೆ ವಿನಃ ಅದರ ಬೆನ್ನಲ್ಲೇ ನಡೆದ ಉಪಚುನಾವಣೆಗಳಲ್ಲಿ ಅದರ ಪಲಿತಾಂಶ ಕಂಡು ಬರಲಿಲ್ಲ. ಬಳ್ಳಾರಿ ಪಾದಯಾತ್ರೆಯಲ್ಲಿ 'ಹೀರೋ' ಆಗಿದ್ದ ಸಿದ್ದರಾಮಯ್ಯ ಈಗ ಎಲ್ಲಿದ್ದಾರೆ ಎಂದು ಹುಡುಕುವಂತಾಗಿದೆ. ಅಷ್ಟರಮಟ್ಟಿಗೆ ಅವರು ಮೂಲೆಗುಂಪಾಗಿ ಹೋಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸಚಿವರು ಹೌದೋ ಅಲ್ಲವೋ ಎಂದು ಸ್ವತಃ ಕಾಂಗ್ರೆಸ್ ನವರೇ ಅನುಮಾನ ಪಡುವಂತಾಗಿದೆ. ಪ್ರಮಾಣ ವಚನ ಸ್ವೀಕರಿಸಿದ್ದು ಬಿಟ್ಟರೆ ಮತ್ತೆಲ್ಲೂ ಅವರು ಸುದ್ದಿಯಾಗಲಿಲ್ಲ. ವೀರಪ್ಪ ಮೊಯ್ಲಿ ಸೋನಿಯಾ ಮನೆ ಕಾದರೇ ವಿನಃ ರಾಜ್ಯ ಕಾಂಗ್ರೆಸ್ ಕಾಯೋ ಕೆಲಸ ಮಾಡಲಿಲ್ಲ. ಪ್ರಾರಭದಲ್ಲಿ ತುಸು ಉತ್ಸಾಹಿಯಾಗಿದ್ದ ಡಿ.ಕೆ. ಶಿವಕುಮಾರ್ ಈಗ ಸ್ವಜನ ರಾಜಕೀಯ ಮಾಡುತ್ತಿದ್ದಾರೆ. KPCC  ಅಧ್ಯಕ್ಷ ಪರಮೇಶ್ವರ್ ಏನು ಮಾಡಿದರೂ ನಡೆಯದ ಸ್ಥಿತಿಯಿದೆ. ಉಳಿದಂತೆ ಬಾಕಿ ನಾಯಕರುಗಳು ಪರಸ್ಪರರ ಮೇಲಿನ ಅಸೂಯೆಯಿಂದ ಪಕ್ಷ ಕಟ್ಟುವ ಕೆಲಸದಿಂದ ದೂರವೇ ಉಳಿದಿದ್ದಾರೆ. ಇನ್ನು ಅವರು ಮುಖ ತೋರಿಸುವುದು ಮುಂದಿನ ಚುನಾವಣೆಗೇನೆ...

ಇಷ್ಟೆಲ್ಲಾ ಪರಿಸ್ಥಿತಿಗಳ ನಡುವೆಯೂ ಭಾರಿ ನಿರೀಕ್ಷೆ ಮೂಡಿಸಿದ್ದ ಇತ್ತೇಚೆಗಿನ ರಾಹುಲ್ ಗಾಂಧಿ ರಾಜ್ಯ ಭೇಟಿಯೂ ಸಪ್ಪೆಯಾಗಿಯೇ ಮುಗಿಯಿತು. ರಾಜ್ಯ ಕಾಂಗ್ರೆಸ್ ನ ಪ್ರಸಕ್ತ ಪರಿಸ್ಥಿತಿ ಬಗ್ಗೆ ರಾಹುಲ್ ಗೆ ಅರಿವಿದ್ದರೂ ಪಕ್ಷದ ಪದಾಧಿಕಾರಿಗಳ ಜತೆ ಚರ್ಚಿಸುವ ಗೋಜಿಗೆ ಹೋಗಲಿಲ್ಲ. KPCC  ಪುನಾರಚನೆ ಗೊಂದಲ ಹಾಗು ನಾಯಕರುಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಏನೂ ಮಾಡದೆ ಒಂದಷ್ಟು ಹೊತ್ತು ಸಂವಾದ ಮಾಡಿ ವಾಪಾಸಾದರು. ಒಂದು ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ರಾಹುಲ್ ಗಾಂಧಿಯ ಕಾರ್ಯವೈಖರಿ ಇದು.! ಕಾಂಗ್ರೆಸ್ಸಿಗರೇ ಜವಾಬ್ದಾರಿಗೆ ಹೆದರಿ ಓಡಿ ಹೋಗುವ ಇಂತಹ ನಾಯಕ ನಿಮಗೆ ಇದ್ದರೆಷ್ಟು ಬಿಟ್ಟರೆಷ್ಟು..

ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮಾನ್ಯ ಪ್ರಜೆಗಳಿಗೆ ಜೆಡಿಎಸ್ ಪರ್ಯಾಯವಾಗಿ ಕಾಣಿಸುವುದರಲ್ಲಿ ತಪ್ಪಿಲ್ಲ. ಇತ್ತೀಚೆಗಿನ ಉಪಚುನಾವಣೆಗಳಲ್ಲಿ ಅದು ಗಳಿಸಿದ ಮತಗಳ ಶೇಕಡವಾರು ಪ್ರಮಾಣದಲ್ಲಿನ ಹೆಚ್ಚಳವೇ ಇದಕ್ಕೆ ಸಾಕ್ಷಿ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟರು ಆಶ್ಚರ್ಯವಿಲ್ಲ. ಯಡಿಯೂರಪ್ಪನವರು ಆಗಾಗ್ಗೆ ಹೇಳುತ್ತಿರುತ್ತಾರೆ, ರಾಜ್ಯದಲ್ಲಿ ಬರೀ ಎರಡೇ ಪಕ್ಷಗಳಿರಬೇಕು ಎಂದು. ಬಹುಶಃ ಅದು ಇಷ್ಟು ಬೇಗ ನಿಜವಾಗುವತ್ತ ಸಾಗುತ್ತದೆ ಎಂದು ಯಾರೂ ಊಹಿಸಿರಲಾರರು..!

Saturday, April 23, 2011

ಇದು ನಿಜವೇ.. ನಾ ಪ್ರೀತಿಸಿರುವೆ..


ಸಾಗರದಾಚೆಯ ಪುಟ್ಟ ದ್ವೀಪದಲಿ
ನನ್ನ ತೋಳಿನಲಿ ನೀ ಬಂಧಿಯಿರೆ
ಭಯವ ಬಿಡು ನಿಶ್ಚಿಂತೆಯಿಂದಲಿ..
ನಿನ್ನಕ್ಷಿಯೊಳು ಅಕ್ಷಿಯಿಟ್ಟು
ಕಾಯುವೆ ನಾ ಅನವರತ..

ಪೀಡಿಸು ನೀ ಸತಾಯಿಸು
ತುಸು ರಂಗಾಗಿ ನೀ ಕೋಪಿಸು
ಮಗುವಾಗು ನೀ ನನ್ನ ಮಡಿಲಲಿ..
ಆನಂದಿಸುವೆ ನಿನ್ನ ಪ್ರತಿ ನಡೆಯ
ನೀ ನನ್ನವಳು ಪ್ರತಿ ಸಮಯ..

ನಾ ಉಸಿರ ಹಿಡಿದಿಡುವೆ
ನೀ ನಿದ್ರಿಸಿರೆ ಸದ್ದು ಬರದಂತೆ..
ಸಿಹಿಗನಸ ಆಯ್ದು ಕಳಿಸುವೆ ನಾ 
ಭಯ ಬೀಳದಂತೆ ನನ್ನ ಮುದ್ದು ಒಲವು..
ಕನಸಲ್ಲ ಇದು ನಿಜವೇ ನಾ ನಿನ್ನೇ ಪ್ರೀತಿಸಿರುವೆ..

Wednesday, April 20, 2011

'Rainy' ಕಾಲ..

ಬಾನಂಚಲಿ ಮೇಘ, ಗುಡುಗುವ ಮೊರೆತ..
ಬಳಿಯಲ್ಲಿಯೇ ಮಿಂಚು, ಕಣ್ಣು ಕೋರೈಸುವ ಸೆಳೆತ
ತುಂತುರು ನೀರ ಧಾರೆ... ಚುಮುಗುಟ್ಟುವ ತಂಗಾಳಿ...
ಆಹಾ..! ಇದು 'rainy' ಕಾಲ.. ಈಗ ತಾನೇ ಶುರುವಾಗಿ..

ಮಳೆಯೊಡೆ ಮಿಲನದ ಖುಷಿಯಿಂದ 
ಹಿತವಾದ ಘಮವ ಸೂಸುತಿಹಳು ಭೂದೇವಿ..
ವಟಗುಟ್ಟುವ ಮಂಡೂಕ.. ಆಸರೆಯುಡುಕುವ ಜೀವರಾಶಿ
ಮಧುರವಿದು ಪ್ರಪಂಚ.. ಕಾಲನ ಹೊಸ ವರಸೆಗೆ..
ಆಹಾ..! ಇದು 'rainy' ಕಾಲ.. ಈಗ ತಾನೇ ಶುರುವಾಗಿ..

Sunday, April 17, 2011

ನೀ ಬರೀ ನೆನಪೆಂದು ನೆನೆದು..

ನಾ ಬಿಕ್ಕಳಿಸುತ್ತಿರುವೆ, ನೀ ನನ್ನ ನೆನಪಲಿ ನಗಲು
ನನ್ನ ಕಂಗಳಲಿ ಕಣ್ಣೀರು ನಿನ್ನ ಕಂಗಳ ಕಾಂತಿಯ ಕಂಡು
ಮೂಕನಾಗಿರುವೆ, ನೀನು ಬರೀ ನೆನಪೆಂದು ನೆನೆದು..

ಖಾಲಿಯಾದಂತಿದೆ ಹೃದಯ
ಪ್ರೀತಿಯನೊದ್ದು ಹೊರಹೋದ ಮೇಲೆ
ಹೇಗೆ ತೆರೆದಿಡಲಿ ನಾ ನನ್ನ ಅಂತರಂಗವನು
ಒಡೆದು ಚೂರಾದ ಬಳಿಕ..

ಯತ್ನ ಸಾಗಿದೆ ಮರಳಿ ಜೋಡಿಸಲು
ಸೋತುಹೊಗಿರುವೆ ಒಂದಾಗಲು ಕೇಳದೆ
ಮರಣಶಯ್ಯೆಯಲಿರುವೆ ಕೊನೆಗಳಿಗೆ ನಿರೀಕ್ಷೆಯಲಿ
ಶ್ರಾದ್ಧವಾಚರಿಸು ಆತ್ಮ ಶಾಂತಿಗೆ..

ನಾ ಬಿಕ್ಕಳಿಸುತ್ತಿರುವೆ..........ನೀ ಬರೀ ನೆನಪೆಂದು ನೆನೆದು


'ಲಘು ಬರಹವಿದು ತುಸು ಗಂಭೀರ..'


ಅಮೂಲ್ ಬೇಬಿ (ರಾಹುಲ್ ಗಾಂಧಿ) ಭಾರತದ ಪ್ರಧಾನಿಯಾದರೆ...;

* ಹಿಂದೆ ಸ್ವತಃ ತಾನೇ ಅಮೇರಿಕಾದ ರಾಯಬಾರಿಗೆ ನೀಡಿದ ಹೇಳಿಕೆಯಂತೆ ಆರ್ಎಸ್ಎಸ್  ಹಾಗು ವಿಶ್ವ ಹಿಂದೂ ಪರಿಷತ್ ಅನ್ನು ಭಯೋತ್ಪಾದಕ ಸಂಘಟನೆಗಳೆಂದು ಪರಿಗಣಿಸಿ ಅದರ ಮೇಲೆ ನಿಷೇಧ..

* 'ಸಿಮಿ' ಮೇಲಿನ ನಿಷೇಧ ರದ್ದು..

* ಆಫ್ಜ್ಯಲ್ ಗುರು ಹಾಗು ಕಸಬ್ ಗೆ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿ ಬಳಿ ಪ್ರಧಾನಿ ನಿಯೋಗ..

* ನಕ್ಸಲರೊಂದಿಗೆ ಕದನ ವಿರಾಮ (ಅವರಿಗೆ ಬಲಗೊಳ್ಳಲು ಅವಕಾಶ.!)..

* ಬಾಂಗ್ಲಾ ಅಕ್ರಮ ವಲಸಿಗರಿಗೆ ಭಾರತೀಯ ಪೌರತ್ವ. ಅವರಿಗೆ ಬಿಪಿಎಲ್ ಕಾರ್ಡ್, ಮತದಾನದ ಹಕ್ಕು..

*  ಹಜ್ ಯಾತ್ರಿಕರಿಗೆ ಪೂರ್ಣ ಸಬ್ಸಿಡಿ, ಅಮರನಾಥ ಯಾತ್ರೆಗೆ ತೆರಿಗೆ ಹೆಚ್ಚಳ..

* ಶಿಕ್ಷೆ ಅನುಭವಿಸುತ್ತಿರುವ ಭಯೋತ್ಪಾದಕರಿಗೆ ಅವರ ನಡವಳಿಕೆ ಆಧಾರದ ಮೇಲೆ ಕ್ಷಮಾದಾನ. ಪ್ರತಿ ವರ್ಷ ಆಗಸ್ಟ್ 15  ರಂದು 10 ಜನ ಕ್ಷಮೆ ಪಡೆದ ಭಯೋತ್ಪಾದಕರ ಬಿಡುಗಡೆ..

* ಮದರಸ ಶಿಕ್ಷಣಕ್ಕೆ ಸರ್ಕಾರಿ ಮಾನ್ಯತೆ, ಸರ್ಟಿಫಿಕೇಟ್! ಮೌಲ್ವಿಗಳಿಗೆ ಸರ್ಕಾರಿ ಸಂಬಳ..

* ಮತಾಂತರವನ್ನು ಕಾನೂನುಬದ್ದಗೊಳಿಸಿ ಆದೇಶ.. ಕ್ರಿಶ್ಚಿಯನ್ ಮಿಶನರಿಗಳಿಗೆ ಉತ್ತೇಜನ..

* ನಮಾಜ್ ಗೆ ತೆರಳುವ ಸರ್ಕಾರಿ ನೌಕರರಿಗೆ (ಮುಸ್ಲಿಂ) ಶುಕ್ರವಾರ ಮಧ್ಯಾಹ್ನ ನಂತರ ಸಂಬಳದೊಂದಿಗೆ ರಜೆ..

* ಅಲ್ಪಸಂಖ್ಯಾತರಿಗೆ ಮೀಸಲಾತಿ ಪ್ರಮಾಣ ಶೇಕಡಾ 30 ಕ್ಕೆ ಏರಿಕೆ..

* ಸರ್ಕಾರದ ಆಡಳಿತಕ್ಕೊಳಪಟ್ಟ ಹಿಂದೂ ದೇಗುಲಗಳ ಆಡಳಿತ ಮಂಡಳಿಯಲ್ಲಿ ಅಲ್ಪಸಂಖ್ಯಾತ ಕೋಟಾ..

* ಬುರ್ಖಾ ಧಾರಣೆಗೆ ಉತ್ತೇಜನ, ಬುರ್ಖಾ ಧರಿಸುವ ಪ್ರತಿ ಸ್ತ್ರೀಗೆ ಗೌರವ ಮಾಸಾಶನ..

* ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿ/ಪಂಗಡದ ಹಿಂದೂಗಳಿಗೆ ಮೀಸಲಾತಿ/ಸರ್ಕಾರಿ ಸೌಲಭ್ಯ ವಿಸ್ತರಣೆ..

* ಪಾಕ್ ಜೊತೆಗಿನ ಸಂಬಂಧ ವೃದ್ದಿಗಾಗಿ ಮಹಮ್ಮದ್ ಆಲಿ ಜಿನ್ನಾ ಜನ್ಮ ದಿನವನ್ನು 'ಸೌಹಾರ್ದ ದಿನ'ವನ್ನಾಗಿ ಘೋಷಿಸಿ ಸರ್ಕಾರಿ ರಜೆ ಹಾಗು ಜಿನ್ನಾ ಚಿತ್ರಪಟವುಳ್ಳ 10 ರೂಪಾಯಿ ಮೌಲ್ಯದ ನಾಣ್ಯ ಬಿಡುಗಡೆ..

* ಪ್ರತ್ಯೇಕ ರೈಲ್ವೆ ಬಜೆಟ್, ಕೃಷಿ ಬಜೆಟ್ ಮಾದರಿಯಲ್ಲಿ ಪ್ರತ್ಯೇಕ 'ಅಲ್ಪಸಂಖ್ಯಾತರ ಕಲ್ಯಾಣ' ಬಜೆಟ್..



Friday, April 15, 2011

ಸನಾತನ ಹಿಂದೂ ಧರ್ಮದಿಂದ ಬೇರೆಯಾಗಲು ಅವರಿಗೆ ಮನಸಾದರೂ ಹೇಗೆ ಬಂತು.?!

ಕ್ರಿಶ್ಚಿಯನೀಕರಣ...!! ಭಾರತ ಅದರಲ್ಲೂ ಸನಾತನ ಹಿಂದೂ ಧರ್ಮ ಎದುರಿಸುತಿರುವ ಅತೀ ಗಂಭೀರ ಹಾಗು ಅಷ್ಟೇ ಮಾರಕ ಪೆಡಂಭೂತಗಳಲ್ಲೊಂದು. 
ಸದ್ದಿಲ್ಲದೇ ನಡೆಯುವ ಈ ಪ್ರಕ್ರಿಯೆಗಳು ಹೆಚ್ಚು ಕಡಿಮೆ ಹೊರಗಿನ ಪ್ರಪಂಚಕ್ಕೆ ತಿಳಿಯುವುದಿಲ್ಲ. ಕೆಲ ಕ್ರಿಶ್ಚಿಯನ್ ಮತಾಂತರ ಕೇಂದ್ರಗಳಿಗೆ ಆಗಾಗ್ಗೆ ಅಲ್ಲಲ್ಲಿ ಧಾಳಿ ನಡೆದರೂ ಇದು ಇಂದಿಗೂ ನಿಂತಿಲ್ಲ.. ನಿಲ್ಲುವ ಲಕ್ಷಣಗಳೂ ಕಾಣುತ್ತಿಲ್ಲ. ನಾಗಾಲ್ಯಾಂಡ್, ಒರಿಸ್ಸಾ, ತಮಿಳ್ನಾಡು, ಮಿಜೋರಾಂ, ಅಸ್ಸಾಂ, ಮೆಘಾಲಯ, ಆಂಧ್ರದ ನಂತರ ಇದೀಗ ಕರ್ನಾಟಕದಲ್ಲಿ ಅತೀ ಹೆಚ್ಚಿನ ಮಿಷನರಿ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಇದು ನಮ್ಮವರಿಗೆ ತಿಳಿಯುವಾಗ ಕಾಲ ಮಿಂಚಿ ಹೋಗಿರುತ್ತದೆ.
ಇತ್ತೇಚೆಗೆ ಬೆಂಗಳೂರಿನ HAL ಹಳೇ ವಿಮಾನ ನಿಲ್ದಾಣ ರಸ್ತೆಯ ಪಕ್ಕವಿರುವ ವಾಸುಕಿ ಸುಬ್ರಮಣ್ಯ ದೇವಸ್ಥಾನದ ಆವರಣದಲ್ಲಿ ಹಿಂದೂ ದೇವತೆಗಳ ಚಿತ್ರಪಟಗಳು ದಿನೇ ದಿನೇ ಬಂದು ಬೀಳುತ್ತಿದ್ದವು..! ಅಲ್ಲಿನ ಅರ್ಚಕರಿಗೆ ಆಶ್ಚರ್ಯವಾಯಿತು. ಇಷ್ಟರವರೆಗೆ ಅಷ್ಟೊಂದು ಪ್ರಮಾಣದಲ್ಲಿ ಚಿತ್ರಪಟಗಳು ಅಲ್ಲಿ ರಾಶಿ ಬಿದ್ದದ್ದಿಲ್ಲ. ಇದೇನು ಒಮ್ಮೆಲೇ ಇಂತಹ ಬದಲಾವಣೆ..?! ಒಂದು ದಿವಸ ಯಾರೋ ಒಬ್ಬರು ಹಿಂದೂ ದೇವತೆಯ ಚಿತ್ರಪಟವನ್ನು ತಂದು ಅಲ್ಲಿ ಹಾಕುವಾಗ ಅರ್ಚಕರು ನೋಡಿದರು.. ಆ ವ್ಯಕ್ತಿ ಈ ಮೊದಲು ದೇಗುಲಕ್ಕೆ ಬರುತ್ತಿದ್ದ ಭಕ್ತನೇ.. ಆದರೆ ಈ ಸಲ ಆ ವ್ಯಕ್ತಿ ದೇಗುಲದೊಳಕ್ಕೆ ಬರಲಿಲ್ಲ..! ತುಸು ತೀಕ್ಷ್ಣವಾಗಿ ಗಮನಿಸಿದಾಗ ಅರ್ಚಕರಿಗೆ ಕಂಡು ಬಂದಿದ್ದು ಆತನ ಕೊರಳಲ್ಲಿ ರಾರಾಜಿಸುತ್ತಿದ್ದ 'ಶಿಲುಬೆ'ಯ ಪೆಂಡೆಂಟ್..!! ಆತನೊಬ್ಬನೇ ಅಲ್ಲ , ಇತರರೂ ಯಾರ್ಯಾರು ಚಿತ್ರಪಟವನ್ನು ದೇಗುಲದ ಆವರಣದಲ್ಲಿ ತಂದು ಹಾಕುತ್ತಿದ್ದರೋ ಅವರೆಲ್ಲರ ಕೊರಳಲ್ಲಿ ಶಿಲುಬೆಯ ಸರವಿತ್ತು...!
ಈ ಬಗ್ಗೆ ಮುಂದುವರೆದಾಗ ತಿಳಿದು ಬಂದಿದ್ದು ಅವರೆಲ್ಲ ತಾನು ಹುಟ್ಟಿನಿಂದ ಅನುಸರಿಸಿಕೊಂಡು ಬಂದಿದ್ದ ಸನಾತನ, ಪವಿತ್ರ, ಹೆಮ್ಮೆಯ ಹಿಂದೂ ಧರ್ಮವನ್ನು ಬಿಟ್ಟು ಕ್ರಿಶ್ಚಿಯನ್ ಆಗಿ ಪರಿವರ್ತಿತರಾಗಿದ್ದರು. . .! ತಾನಾಗಿ ಪೂಜಿಸಿ ಆರಾಧಿಸಿದ ಹಿಂದೂ ದೇವತೆಗಳನ್ನು ದೇಗುಲದ ಆವರಣದಲ್ಲಿ ತಂದು ಬಿಸಾಕುವಷ್ಟರ ಮಟ್ಟಿಗೆ ಬದಲಾಗಿ ಹೋಗಿದ್ದರು.
ನಾನು ಸಂಪರ್ಕಿಸಿದ ವ್ಯಕ್ತಿಯೊಬ್ಬರ ಪ್ರಕಾರ, ಮತಾಂತರ ಪ್ರಕ್ರಿಯೆ ನಡೆಸುವ ಮಿಷನರಿಗಳ ಏಜೆಂಟರು ಸ್ವಲ್ಪ ಹಿಂದುಳಿದ ಬಡ ಹಿಂದೂ ಕುಟುಂಬವನ್ನು ಗುರುತಿಸಿ ಅವರ ಕುಶಲೋಪರಿ ವಿಚಾರಿಸುವ ನೆಪದಲ್ಲಿ ಸ್ವಲ್ಪಮಟ್ಟಿನ ಹಣ ನೀಡಿ ಜೊತೆಗೆ ಒಂದು 'ಯೇಸುವಿನ' ಚಿಕ್ಕದಾದ ಚಿತ್ರಪಟವನ್ನು ನೀಡಿ ತೆರಳುತ್ತಾರೆ. ಸ್ವಲ್ಪ ದಿನದ ನಂತರ ಮತ್ತದೇ ಏಜೆಂಟ್ ಆ ಮನೆಗೆ ಬಂದು ಒಂದು 'ಸ್ವೀಟ್ ಬಾಕ್ಸ್' ಹಾಗು ಚೌಕಟ್ಟು ಇರುವ ದೊಡ್ಡದಾದ ಯೇಸುವಿನ ಫೋಟೋವನ್ನು ನೀಡಿ, ಜೊತೆಗೆ ಆ ಫೋಟೋವನ್ನು ಗೋಡೆಯಲ್ಲಿ ಪ್ರದರ್ಶಿಸಲು ಸ್ವಲ್ಪ ಮಟ್ಟಿನ ಹಣ ನೀಡಿ ತೆರಳುತ್ತಾನೆ. ಹಣದ ಸಹಾಯ ಪಡೆದ ಆ ಕುಟುಂಬ ಆತನ ಸಲಹೆಯನ್ನು ಚಾಚು ತಪ್ಪದೆ ಪಾಲಿಸುತ್ತದೆ.. ಮದ್ಯೆ ಮದ್ಯೆ ಕುಶಲೋಪರಿ ವಿಚಾರಣೆಗಳು ನಡೆಯುತ್ತಿರುತ್ತವೆ. ಅದಾಗಿ ವಾರದ ನಂತರ ಯೇಸುವಿನ ಫೋಟೋವನ್ನು ಹಿಂದೂ ದೇವರ ಫೋಟೋಗಳಿಗಿಂತ ಮೇಲ್ಬಾಗದಲ್ಲಿ ಪ್ರದರ್ಶಿಸಲು ಸೂಚಿಸಲಾಗುತ್ತದೆ. ಅದಕ್ಕೆ ಮತ್ತೊಂದು ಕಂತಿನ ಹಣ!. ಅದೇ ದಿನ ಅವರ ಪ್ರಾರ್ಥನಾ ಸಭೆಗೆ ಕರೆದುಕೊಂಡು ಹೋಗಿ ಅವರಿಗಾಗಿ ಪ್ರಾರ್ಥಿಸಲಾಗುತ್ತದೆ. ಅವರಿಗಿರುವ ಯಾವುದೇ ಕಾಯಿಲೆಯನ್ನು ಪ್ರಾರ್ಥನೆ ಮೂಲಕ ವಾಸಿ ಮಾಡುವ ಬೋಗಸ್ ಭರವಸೆಯಿಕ್ಕುತ್ತಾರೆ!! ಈ ಎಲ್ಲ ಹಂತ ದಾಟಿದ ಮೇಲೆ ಅದೇ ಏಜೆಂಟ್ ದೊಡ್ಡ ಮೊತ್ತದ ಹಣದೊಂದಿಗೆ ಆ ಮನೆಗೆ ಬಂದು ಹಿಂದೂ ದೇವರ ಫೋಟೋಗಳನ್ನು ತೆಗೆಯಲು ಸೂಚಿಸುತ್ತಾನೆ. ಆ ಹೊತ್ತಿಗಾಗಲೇ ಆ ಕುಟುಂಬ ಮಾನಸಿಕವಾಗಿ ಇವರೊಂದಿಗೆ ಬೆರೆತು ಹೋಗಿರುತ್ತದೆ. ಆದರೆ ಹಿಂದೂ ದೇವರ ಫೋಟೋವನ್ನು ಅಲ್ಲಲ್ಲಿ ಬಿಸಾಕಿದರೆ ಏನಾಗಬಹುದೋ ಎಂಬ ಭಯದಿಂದ ಆ ಕುಟುಂಬದವರು ಅದನ್ನು ದೇವಸ್ಥಾನದ ಆವರಣದಲ್ಲೋ ಅಥವಾ ಬಾವಿಯಲ್ಲೋ ಬಿಸಾಕಿ ಹೋಗುತ್ತಿದ್ದರು!..
ಹೆಚ್ಚು ಕಡಿಮೆ ಎಲ್ಲ ಕಡೆ ಇದೆ ರೀತಿಯ ತಂತ್ರವನ್ನೇ ಬಳಸಲಾಗುತ್ತದೆ. ಆದರೆ ನಮ್ಮ ಸುತ್ತ ಮುತ್ತಲ ಸಮಾಜಕ್ಕೆ ಇದರ ಅರಿವಿರುವುದಿಲ್ಲ. ನಮ್ಮ ಪಕ್ಕದ ಮನೆಯ ಹಿಂದೂವಿನ ಕೊರಳಲ್ಲಿ ಶಿಲುಬೆ ಸರ ನೋಡಿದ ಮೇಲೆಯೇ ನಮಗೆ ಅರಿವಾಗುವುದು ನೆರೆಯ ಕುಟುಂಬ ಈಗ ಹಿಂದೂವಾಗಿ ಉಳಿದಿಲ್ಲ ಎಂದು...!
ಇದೆ ತಂತ್ರದ ಮೇಲೆ ಭಾರತದಾದ್ಯಂತ ನಮ್ಮ ಎಷ್ಟೋ ಹಿಂದೂ ಕುಟುಂಬಗಳು ಸನಾತನ ಧರ್ಮದಿಂದ ಅಗಲಿ ಹೋಗಿವೆ. ಎಲ್ಲೂ ಇಲ್ಲದ ಭವ್ಯ, ಮಹೋನ್ನತ ಸಂಸ್ಕ್ರತಿಯಿರುವ, ಸಹಸ್ರಾರು ವರ್ಷಗಳ ಇತಿಹಾಸದ, ರಾಮ-ಕೃಷ್ಣರಂತಹ ಮಹಾಪುರುಷರು ಜನಿಸಿ ದಾರಿ ತೋರಿಸಿದಂತಹ, ಯಾವ ಧರ್ಮದಲ್ಲೂ ಇಲ್ಲದ ಪೂರ್ಣ ಸ್ವಾತಂತ್ರ್ಯ ಇರುವ, ಪವಿತ್ರವಾದ ಸನಾತನ ಹಿಂದೂ ಧರ್ಮದಿಂದ ಬೇರೆಯಾಗಲು ಅವರಿಗೆ ಮನಸಾದರೂ ಹೇಗೆ ಬಂತು.?! ಇದರ ಹೊಣೆ ಹೊರಬೇಕಾದವರು ಯಾರು..? ಬೇರೆ ಯಾರು ಅಲ್ಲ ನಾವೇ..! ಹಿಂದೂಗಳೇ..!! ಅಲ್ಲಲ್ಲಿ ಹಿಂದೂ ಸಮಾಜೋತ್ಸವ, ಮೆರವಣಿಗೆ ಎಂದು ಉತ್ಸಾಹ ತೋರಿಸುವ ಹಿಂದೂ ಸಂಘಟನೆಗಳು ನಮ್ಮದೇ ಜನರಿಗೆ ನಮ್ಮ ಧರ್ಮದ ಬಗ್ಗೆ ತಿಳಿ ಹೇಳುವ, ಧರ್ಮದಲ್ಲಿ ಆಸಕ್ತಿ ಹುಟ್ಟಿಸುವ, ತುಸು ಹಿಂದುಳಿದವರಿಗೆ ಆರ್ಥಿಕವಾಗಿ ನೆರವಾಗುವ ಕಾರ್ಯಕ್ಕೆ ಯಾಕೆ ಮುಂದಾಗಬಾರದು.. ಸಂಘಟನೆಯಲ್ಲಿ ಸ್ವಲ್ಪ ಹಣ ಕೂಡಿದರೆ ಸಾಕು ಆ ಉತ್ಸವ ಈ ಉತ್ಸವ ಎಂದು ನೆಗದಾಡಿ ಪೋಲು ಮಾಡುವ ಬದಲು ಅದೇ ಹಣವನ್ನು ಹಿಂದೂ ಬಡಬಗ್ಗರನ್ನು ಗುರುತಿಸಿ ಅವರ ಕಷ್ಟಕ್ಕೆ ನೆರವಾದರೆ ನಮ್ಮ ಅದೆಷ್ಟೋ ಹಿಂದೂ ಕುಟುಂಬಗಳನ್ನು ಹಿಂದೂ ಧರ್ಮದಲ್ಲಿಯೇ ಉಳಿಸಿಕೊಳ್ಳಬಹುದಲ್ಲವೇ?.. ಉತ್ಸವಗಳು ನಮ್ಮ ಸಂಸ್ಕ್ರತಿ ಪಸರಿಸಲು ಅವಶ್ಯ ನಿಜ, ಆದರೆ ಇದು ಅದಕ್ಕಿಂತಲೂ ಪುಣ್ಯದ ಕೆಲಸವಾಗದೇ..
ಅಥವಾ ಅದೇ ಹಿಂದೂ ಪುರುಷ ಯಾ ಮಹಿಳೆಯ ಕೊರಳಲ್ಲಿ ಶಿಲುಬೆಯನ್ನು ನೋಡುವಾಸೆಯೇ...
 

Sunday, April 10, 2011

ಬಿಳಿ ಚೆಲುವೆ

ನಾನ್ಯಾಕೆ ಬರಲಿ ಜೊತೆಗೆ
ನೀ ದೂರ ನಡೆಯುವಾಗ
ಏಕಾಂತವೆ ನಿನಗೆ ಹಿತವಾದರೆ
ಈ ಕಾಂತನ ಇರವೇಕೆ..

ನಿನದೇ ಲೋಕದಿ ನೀ ಸಂಚರಿಸಲು
ನನ್ನ ಆಸರೆಯೇಕೆ..
ನಿನ್ನಿಯನ ಪಿಸುಮಾತ ನಡುವೆ
ನನ್ನೊಲವಿನ ಮಾತೇಕೆ..

ನೀನಿಲ್ಲದ ನಾ ಒಂಟಿಯಲ್ಲ ಕೇಳೆ

ನಿನ್ನ ಕಪಟ ಜಾಹೀರಾದ ಮೇಲೆ
ನನ್ನೊಲವ ವಂಚಿತೆ ನೀನು, ಬಿಳಿ ಚೆಲುವೆ
ಕರಿ ಹೃದಯದವಳು..

ಹುಚ್ಚು ಅನುರಾಗದಲಿ. . .

ಸದ್ದಿಲ್ಲದೇ ಮರೆಯಾದ 
ಹಳೆಯ ನೋವ ಗೂಡಿನ ಮೇಲೆ
ಎದೆ ಹಿಂಡೋ ಕಹಿ ನೆನಪಿನ
ರಾಶಿ ರಾಶಿ ಅಲೆಗಳ ನಡುವೆ
ಅನುರಾಗದ ನವಕಾವ್ಯ ಕಾಣುತ್ತಿಹುದು
ಸಿಹಿ ನೋವಿದು ಕಹಿಯ ಮರೆಮಾಚುತ 

ವ್ರಕ್ಷಗಳಿಂದು ಬಾಗಿ ನಮಿಸಿ
ಹರಿಯೋ ತೊರೆಯು ಕಾಲಡಿ ಬಂದು 
ಕಾಲ ತೊಳೆದು ಪೂಜಿಸಿದಂತೆ
ಹಾರೋ ಹಕ್ಕಿಗಳು ಪುಷ್ಪಾರ್ಚನೆಗೈಯುತ
ನನ್ನ ಕನಸಲಿ ಹಾರಿ ಹೋಗಿಹುದು
ಅನುರಾಗದ ಪರಮಾವಧಿ ತುಸು ಹೆಚ್ಚಾದಂತೆ 

Wednesday, April 6, 2011

ದೇಶವೆಲ್ಲ ಮಲಗಿರಲು ಅವನೊಬ್ಬನೆದ್ದ ...

ಅಣ್ಣಾ ಹಜಾರೆ ಇಂದು ದೇಶದಾದ್ಯಂತ ಕೇಳಿಬರುತಿರುವ ಹೆಸರು..! ನಮ್ಮ ಕಣ್ಣ ಮುಂದೆಯೇ ಭ್ರಷ್ಟಾಚಾರ ನಡೆದರೂ ಕಂಡೂ ಕಾಣದಂತೆ ಸತ್ತು ಹೋಗಿದ್ದ ಭಾರತೀಯ ಮನಸುಗಳು ಇಂದು ಒಬ್ಬ ವಯೋವೃದ್ದ 72 ವರ್ಷದ ಹಜಾರೆಯಿಂದಾಗಿ ಸೆಟೆದು ನಿಲ್ಲುವಂತಾಗಿದೆ.. ನಾಚಿಕೆಯಾಗಬೇಕು ನಮಗೆ..! ಭ್ರಷ್ಟಾಚಾರ ಬೆಳೆದು ಹೆಮ್ಮರವಾದರೂ ನಾವಿಷ್ಟು ವರ್ಷ ಏನೂ ಮಾಡದ ಶಿಖಂಡಿಗಳಂತೆ ಇದ್ದೆವಲ್ಲ!! ಯಾಕೆ ನಮ್ಮಿಂದ ರಾಷ್ಟ್ರದ ಚಿತ್ರಣವನ್ನು ಬದಲಿಸಲು ಸಾಧ್ಯವಿಲ್ಲವೇ..? 120 ಕೋಟಿ ಭಾರತೀಯರಲ್ಲಿ ಒಬ್ಬನೇ ಒಬ್ಬ ಸಮಾಜ ಸುಧಾರಕ ಸರಕಾರಕ್ಕೆ ನಡುಕ ಹುಟ್ಟಿಸಬಲ್ಲವನಾದರೆ ನಾವೆಲ್ಲಾ ಒಂದಾಗಿ ಹೋರಾಟಕ್ಕೆ ಇಳಿದರೆ ಏನಾಗಬಹುದು ಊಹಿಸಿ.. ಜನಲೋಕಪಾಲ ಮಸೂದೆಗೆ ಒತ್ತಾಯಿಸಿ  ದೆಹಲಿಯ ಜಂತರ್ ಮಂತರ್ ನಲ್ಲಿ ಹಜಾರೆ ಮಾಡುತ್ತಿರುವ ಆಮರಣಾಂತ ಅನ್ನ ಸತ್ಯಾಗ್ರಹ ಮುಂದುವರಿದಿದ್ದು ದೇಶದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸ್ವಾಬಾವಿಕವಾಗಿಯೇ ಕೇಂದ್ರದ ವಿರೋಧ ಪಕ್ಷಗಳು ಸತ್ಯಾಗ್ರಹದ ಲಾಭ ಪಡೆದುಕೊಳ್ಳಲು ಹವಣಿಸುತ್ತಿವೆ.. ಜಾಗ್ರತರಾಗೋಣ ಭಾರತೀಯರೇ, ರಾಜಕೀಯರಹಿತವಾಗಿ ಹೋರಾಟಕ್ಕಿಳಿಯೋಣ! ಸತ್ತು ನಿರ್ಜೀವವಾಗಿರುವ ನಿಮ್ಮ ಮನಸುಗಳನ್ನು ಬಡಿದೆಬ್ಬಿಸಿ ಬನ್ನಿ..