Saturday, February 26, 2011

ತರವಲ್ಲ ಗೆಳತಿ

ಕಾತರದಿ ಕಾಯುತಿಹಳು ನಲ್ಲೆ ನಲ್ಲ ಬರುವನೆಂದು
ಬರಲಿಲ್ಲ ಅವನು... ತುಸು ಬೇಸರ...
ಹಸುಗೂಸ ಹೆರಲು ಸಡಗರದಿಂದಿಹಳು ತಾಯಿ
ಪರಿತಪಿಸುತಿಹಳು ನವ ಮಾಸ ಕಾಯಲಾಗದೆ

ತುಮುಲದಿ ಕಾಯುತಿದೆ  ಕೆಚ್ಚಲ ಕಚ್ಚಲು 
ಹಸುವಿಲ್ಲ... ಕಂಗೆಟ್ಟಿದೆ ಪುಟ್ಟ ಕರು
ಜಲದಾಸೆಯಿಂದ ಜಾಲಾಡುತಿದೆ ಜೀವಜಂತುಗಳು
ನೀರಿಲ್ಲ ಮರುಭೂಮಿಯಲಿ.. ಬರೀ ಮರಳು

ಕಾಯೊ ಮನಸಿನ ತವಕಗಳಿವು ಕಾದವನೇ ಬಲ್ಲ
ನನದೂ ಅದೇ ಕಾತರ... ಸತಾಯಿಸುತಿಹಳು ನಲ್ಲೆ
ಕಾದು ಸೋತಿಹ ನಲ್ಲ ನಾನು ಅವಳ ಸಿಹಿ ಮುತ್ತಿಗಾಗಿ



Friday, February 25, 2011

ಅಂತರವೇತಕೆ ಒಲವೇ...?

ಅಂತರವೇತಕೆ ಒಲವೇ, ಅಂತರ್ಮುಖಿ ನಾ..
ಅಂತರಂಗದಲಿ ಅಳುವಿದೆ ನೀನಿಲ್ಲದೆ 
ಎಲೆಯುದುರಿದ ಬೋಳು ಮರದಂತೆ ನಿರ್ಜೀವಿಯು

ಬರಿದಾದ ಮನಸಿನ ಬರೀ ಆಲಾಪನೆ
ಗಂಟಲುಗಟ್ಟಿ ಅಡುಗಿ ಬರಡಾದ ಭಾವನೆ
ಮೂಕನಾಗಿ ಬಿಕ್ಕಳಿಸುವೆನು ಬರವಣಿಗೆಯಲಿ..

ಅಂತಪುರದಲಿಟ್ಟು ಆರಾಧಿಸುವೆ ನಾ
ಅಂತರಗಂಗೆಯೇ.. ಹೆಚ್ಚಿಸದಿರು ಅಂತರ
ಜೋಮು ಹಿಡಿದ ಜೀವದಂತೆ ನಿಶ್ಚಲನೂ  ..

ಅಂತರವೇತಕೆ ಒಲವೇ ಅಂತರ್ಮುಖಿ ನಾ...

ಸಾವಿನ ದಲ್ಲಾಳಿಗಳು ಯಾರು ಸೋನಿಯಾಜಿ..?

 ಅಂದು ಫೆಬ್ರವರಿ 27 , 2002 ರ ಬುಧವಾರ..ಗುಜರಾತನ ಗೋಧ್ರದಲ್ಲಿ ಸಬರಮತಿ ರೈಲಿನ S6 ಬೋಗಿಯು ಬೆಂಕಿಯ ಕೆನ್ನಾಲಿಗೆಯೊಂದಿಗೆ ಉರಿಯುತ್ತಿತ್ತು. ಒಳಗಡೆಯಿಂದ ಕೆಸರಿಧಾರಿ ಕರಸೇವಕರ ಆರ್ತನಾದ..! ಹೊರಬರದಂತೆ ಎಲ್ಲ ಬಾಗಿಲುಗಳನ್ನು ಮುಚ್ಚಲಾಗಿತ್ತು..! ಬೆಂಕಿ ಹಚ್ಚಿದ 100ಕ್ಕೂ ಹೆಚ್ಚು ನಪುಂಸಕ ಮುಸ್ಲಿಮರು ಬೋಗಿಯ ಸುತ್ತಲು ಕೇಕೆ ಹಾಕಿ ನಗುತ್ತಿದ್ದರು..ಕಿಟಕಿಯಿಂದ ಹಾರಲು ಯತ್ನಿಸಿದವರನ್ನು ಕಲ್ಲು ದೊಣ್ಣೆಗಳಿಂದ ಹೊಡೆಯುವ ಮೂಲಕ ತಡೆಯಲಾಯಿತು..! ಹೊರಬರಲಾರದಂತ ಪರಿಸ್ಥಿತಿ..!ಬೆಂಕಿಯ ತೀವ್ರತೆ ದತ್ತವಾಯಿತು.. ಎಲ್ಲೆಲ್ಲೂ ಆರ್ತನಾದ..! ಚೀರಾಟ..! ಜೀವ ಉಳಿಸಿಕೊಳ್ಳುವ ತವಕ..! ನೋಡ ನೋಡುತ್ತಲೇ 59 ಜನ ಶ್ರೀ ರಾಮನ ಕರಸೇವಕರು ಸಜೀವ ದಹನವಾಗಿ ಹೋದರು..! ಎಂತಹ ಕಲ್ಲು ಮನಸನ್ನೂ  ಕಲಕುವಂತಹ ಹೃದಯ ವಿದ್ರಾವಕ ಘಟನೆ..!
ಈ ಘಟನೆ ನಂತರ ಕಾಂಗ್ರೆಸ್ಸನ ಶಿಖಂಡಿ ರಾಜಕೀಯ ಇವೆಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನಕ್ಕೆ ಕೈ ಹಾಕಿತು.. ಮುಸ್ಲಿಮರ ಓಲೈಕೆಗಾಗಿ ನೇರವಾಗಿ ಮೊದಿಯನ್ನೇ ಅಪರಾಧಿಯನ್ನಾಗಿ ಬಿಂಬಿಸುವ ಪ್ರಯತ್ನ ಆರಂಭವಾಯಿತು. ಇದಕ್ಕೆ  NDTV , HEADLINES TODAY ಯಂತಹ ಇಂಗ್ಲಿಷ್ ವಾಹಿನಿಗಳು ಕೈ ಜೋಡಿಸಿದವು. ಅದರಲ್ಲೂ ಕಳೆದ ಗುಜರಾತನ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಮೋದಿಯವರನ್ನು 'ಸಾವಿನ ದಲ್ಲಾಳಿ' ಎಂದು ವ್ಯಾಖ್ಯಾನಿಸಿದರು..!
  ಗೋಧ್ರ ಹತ್ಯಾಕಾಂಡ ನಡೆದು 9 ವರ್ಷಗಳ ನಂತರ ಸಬರಮತಿ ವಿಶೇಷ ನ್ಯಾಯಾಲಯ ಫೆಬ್ರವರಿ ೨೨ ರಂದು ಮಹತ್ವದ ತೀರ್ಪು ನೀಡಿದೆ. ಗೋಧ್ರ ಘಟನೆ ಪೂರ್ವ ನಿಯೋಜಿತ ಸಂಚು ಎಂದು ಒಪ್ಪಿಕೊಳ್ಳುವುದರ ಜೊತೆಗೆ 31 ಮಂದಿಯನ್ನು ಅಪರಾಧಿಗಳನ್ನಾಗಿ ಪರಿಗಣಿಸಿದೆ..! 
  ಇದುವರೆಗೆ ಗೋಧ್ರ ಹತ್ಯಾಕಾಂಡ ಒಂದು ಆಕಸ್ಮಿಕ ಎಂದು ಅಲ್ಲಲ್ಲಿ ಹೇಳಿಕೊಳ್ಳುತಿದ್ದ ಸೋನಿಯಾ, ದಿಗ್ವಿಜಯ್ ಸಿಂಗ್, ಲಾಲೂ, ರಾಹುಲ್ ಗಾಂಧಿ ಮುಂತಾದ ಗೋಮುಖ ವ್ಯಾಘ್ರಗಳಿಗೆ ಈ ತೀರ್ಪು ಸ್ವರ ಎತ್ತದಂತೆ ಮಾಡಿದೆ..!

 ಈಗಲಾದರೂ ಹೇಳಿ ಸೋನಿಯಾಜಿ.. ಸಾವಿನ ದಲ್ಲಾಳಿಗಳು ಯಾರು..? ಮುಸ್ಲಿಮರೋ ಅಥವಾ ಅವರ ಚಾಕರಿಗೆಂದೇ ಪಕ್ಷ ಸ್ಥಾಪಿಸಿದಂತಿರುವ ಕಾಂಗ್ರೆಸ್ಸಿಗರೋ..?

Wednesday, February 16, 2011

ಹುತಾತ್ಮನಿಗೆ ನಮನ


ಭಾರತದ ಸ್ವಾತಂತ್ರ್ಯ ಇತಿಹಾಸ ಕಂಡ ಅಪ್ರತಿಮ ದೇಶಭಕ್ತ, ತನ್ನ ಬಾಲ್ಯದಿಂದಲೇ ತನ್ನನ್ನು ತಾನು ಭಾರತ ಮಾತೆಗಾಗಿ ಸಮರ್ಪಿಸಿಕೊಂಡ ತೀವ್ರವಾದಿ, ದೇಶಕ್ಕಾಗಿ ಮಿಡಿಯುವ ಪ್ರತಿಯೊಬ್ಬ ಬಿಸಿ ರಕ್ತದ ಯುವಕರ ಸ್ಫೂರ್ತಿ.. ನನಗೂ ಕೂಡ.. ಆ ಚಿಲುಮೆಯೇ ಚಂದ್ರಶೇಕರ್ಅಜಾದ್...! ಸ್ವಾತಂತ್ರ ಸಂಗ್ರಾಮದಲ್ಲಿ ಕ್ರಾಂತಿಕಾರಿ ಹೋರಾಟಕ್ಕೆ ಹೊಸ ರೂಪು ನೀಡಿದ ಧೀಮಂತ... ತನ್ನ ಅತಿ ಬುದ್ದಿವಂತಿಕೆಯಿಂದ ಆಂಗ್ಲರಲ್ಲಿ ನಡುಕ ಹುಟ್ಟಿಸಿದ ಕಲಿ.. ಇಂದು ನಾವೆಲ್ಲಾ ನೆನಪಿಸುವ ಭಗತ್ ಸಿಂಗ್, ರಾಜಗುರು, ಸುಖದೇವ್, ಜತಿನ್ ದಾಸ್ ಮುಂತಾದ ಕ್ರಾಂತಿಕಾರಿಗಳೆಲ್ಲ ಆಜಾದರ ಗರಡಿಯಲ್ಲಿ ಪಳಗಿದವರೇ.. ಆದರೆ ಬ್ರಿಟಿಷರಿಗೆ ಆಜಾದರ ಮೇಲಿದ್ದ ಭಯ ಅಜಾದರನ್ನು ಹೆಚ್ಚು ಸಮಯ ಬದುಕುವಂತೆ ಮಾಡಲಿಲ್ಲ..  ಅನೇಕ ಬಾರಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಅವರನ್ನು ಭಯದ ಬೇಗುದಿಯಲ್ಲಿ ಬೇಯುವಂತೆ ಮಾಡಿದ್ದ ಅಜಾದ್ ೧೯೩೧ ಫೆಬ್ರವರಿ ೨೭ ರಂದು ತೀವ್ರ ಹೋರಾಟದ ನಂತರ ಕೊನೆಯುಸಿರೆಳೆಯಬೇಕಾಯಿತು..!ತನ್ನನ್ನು ಸುತ್ತುವರಿದ ಆಂಗ್ಲ ಪೊಲೀಸರೊಂದಿಗೆ ಒಂದೇ ಒಂದು ಮರವನ್ನು ಆಸರೆಯನ್ನಾಗಿಸಿಕೊಂಡು ಒಂದೇ ಒಂದು ರಿವಾಲ್ವಾರ್ ನಿಂದ, ಅಂತಹ ಸನ್ನಿವೇಶದಲ್ಲೂ ಗುಂಡುಗಳನ್ನು ತಾನಾಗಿಯೇ ತುಂಬಿಸಿಕೊಳ್ಳುತ್ತ, ಸತತ ಒಂದು ಗಂಟೆಗಳ ಕಾಲ  ಹೋರಾಡಿದ ಆ ಹೋರಾಟ ಅವಿಸ್ಮರಣೀಯ.. ತಾನು ಯಾವಾಗಲೂ ಸ್ವತಂತ್ರನಾಗಿಯೆ ಇರಬೇಕೆಂದು ಪ್ರತಿಜ್ಞೆ ಮಾಡಿದ್ದ ಅಜಾದ್ ಆ ಹೋರಾಟದ ನಡುವೆಯೂ ತನ್ನಲ್ಲಿದ್ದ ಗುಂಡುಗಳನ್ನು ಲೆಕ್ಕವಿತ್ತುಕೊಂಡು ಕೊನೆಯಲಿದ್ದ ಒಂದೇ ಒಂದು ಗುಂಡನ್ನು ತನ್ನ ತಲೆಗೆ ಗುರಿಯಿಟ್ಟು "मैं आजाद हूँ..! आजाद ही रहेगा" ಎಂದು ಭಾರತ ಮಾತೆಯ ಮಣ್ಣಿಂದ ದೂರವಾದರು... ಆದರೆ ಭಾರತೀಯರ ಹೃದಯದಿಂದಲ್ಲ..! 





















ಆಜಾದ್ ನಿಮಗಿದೋ ವಂದನೆ...!

Friday, February 11, 2011

ಹೃದಯದೇಗುಲದ ಒಡತಿ

ಮೊದಲ ಬೇಟಿಗೆ ಮೊದಲ ನೋಟಕೆ ಒಲವಾಗಿದೆ ಇಂದು
ನೀನ್ಯಾರೆ ಹುಡುಗಿ ಚಂದನದ ಗೊಂಬೆ..
ಮುತ್ತಿನಂತಹ ಗುಣದವಳು
ನನ ಹೃದಯ ದೇಗುಲದ ಒಡತಿ
ಚೂಪುಕಂಗಳ ಕಾಂತೆ.. ನನ್ನ ದೇವತೆ

ಕೆನೆಹಾಲ ಲೇಪದ ಕಾಣದ ಲೋಪದ ನನ್ನ ಚೆಲುವೇ..
ಒಲವಲಿ ಬಿದ್ದಿರುವೆ ನಾ, ನಿನ್ನ ಪ್ರೇಮದ ದಾಸನು..
ಬಿಸಿಲೋ ಬೆಳದಿಂಗಳೋ ತಿಳಿಯದಾಗಿದೆ ಇಂದು
ಪ್ರೀತಿಯಲಿ ತೇಲುತಿಹ ಹುಚ್ಚು ಮನಸಿನಲಿ, ನೀನೇ ಬರೀ ನೀನೇ..

ಪ್ರತಿ ಉಸಿರ ಏರಿಳಿತದಲೂ ನಿನ್ನದೇ ಕನವರಿಕೆ,
ನನ್ನ ಸನಿಹದಲೇ ನೀನಿರಬೇಕೆಂಬ ಬಯಕೆ
ನಿನ್ನ ಬಿಟ್ಟು ಬೇರೆ ನೋಡದ, ನಾ ಕಣ್ಣಿರುವ ಕುರುಡನು..

ನಿನ್ನ ಪ್ರತಿ ನಡೆಯಲ್ಲೂ ನಾ ಹಾಸುಗಂಬಳಿಯಾಗಿರುವೆ
ನನ್ನ ಕಡೆ ಉಸಿರಿನವರೆಗೂ ಕಣ್ಣಿಟ್ಟು ಕಾಯುವೆ
ನಾ ಮಲ್ಲಿಗೆ ನಿನ್ನ ಪಾದದಡಿ , ಕಡೆಯವರೆಗೂ ಜೊತೆಯಾಗುವೆ ಹುಡುಗಿ

ಪ್ರೀತಿಸುವೆ ನಿನ್ನ, ನನ್ನ ಮರಣದಾಚೆಗೂ...

Thursday, February 10, 2011

ಕಳವು

ಕದ್ದೆಯಲ್ಲೇ ಹೃದಯವ ನನಗರಿಯದೇನೆ..
ದೂರ ನೀಡುವೆನು ನಾ ಈ ಕಳವಿಗೆ..
ಏನೀ ಮಾಯೆಯೋ.. ಜಾಲವೋ...
ಯಾಕೋ ಹಿತವಾದ ಯಾತನೆ..

ಪ್ರೇಮದ ಹಂಬಲಿಕೆಯಲ್ಲಿರೋ ಹೃದಯವದು
ಮೋಸದ ಗಂಧವಿಲ್ಲದ ಮುಗ್ದ ಪ್ರಾಮಾಣಿಕ..
ನಿಮಿಷದ ಹಿಂದೆ ಧರೆಗಿಳಿದ ಎಳೆ ಶಿಶುವಿನಂತೆ.

ನಿಸ್ವಾರ್ಥಿ ಆದರೂ ನಿನ್ನ ಮೋಹಿತ..
ತಪ್ಪಲ್ಲ ಬಿಡು ನಿನ್ನ ಸೆಳೆತ
ಶಿಶುವಿಗೆ ಚಂದಿರನ ಮೋಹದಂತೆ..

ನನಗಿಂತ ನಿನ್ನನೇ ಜಪಿಸುತಿಹುದು ನಿನ್ನ ಮೋಡಿಗೆ ಸಿಲುಕಿ
ಪರವ್ಯಾಮೋಹಿ ಹೃದಯ, ಮರಳಿ ಬೇಕಿಲ್ಲವದು ನನಗೆ
ಹರಿಯಗೊಡು ನಿನ್ ಹೃದಯವ ನನ್ನೆಡೆಗೆ..

Tuesday, February 8, 2011

ಹೃದಯದಲಿ ಇದೇನಿದು
















ಸಾಗರದಿ ಉಕ್ಕುವ ಅಲೆಗಳಂತೆ,
ಶಾಂತ ಹೃದಯದಲಿಂದು ಕಲರವ..
ಭೋರ್ಗರೆಯುತಿಹುದು ಒಲವು, ಒಲವಿಗಾಗಿ

ಉರಿ ಬಿಸಿಲಲೇಕೋ ತಣ್ಣಗಾದಂತೆ,
ಹುಚ್ಚು ಕಾಲದ ಅನುಭವ..
ಎದೆಗೂಡ ದೇಗುಲ, ಮಿಡಿಯುತಿಹುದು ಹಿತವಾಗಿ

ಬೆಳ್ಳಕ್ಕಿಗಳ ಹಿಂಡಂತೆ, ಸಿಹಿಗನಸಿನ ಸಂತೆ,
ಮನದ ತುಂಬಾ ನಿನದೆ ಮೌನ ಹೆಜ್ಜೆ..
ಶರಣಾಗಿಹೆ ನಿನಗೆ ನನ್ನೊಲವೆ, ಕಡೆಯುಸಿರವರೆಗೂ

Tuesday, February 1, 2011

ರಶ್ಮಿ

ವಸಂತಕಾಲದ ತಣ್ಣನೆ ಮುಂಜಾವಲಿ ಭೂಮಿಗೆ ಬಿದ್ದ ಮಂಜೇನು ನೀ
ಜಲಧಾರೆಯ ಸುತ್ತ ಚಿಲಿಪಿಲಿಗುಟ್ಟುವ ಹಿಂಡುಹಕ್ಕಿಗಳ ಕಲರವವೇ ನೀ

ತಾಯಮಡಿಲಲಿ ಕಾಲಲೊದೆಯುವ ಹಸುಗಂದನ ನಗುವೇ ನೀ
ನೀನಾಗಿ ಹೇಳಲೇಕೆ ಸಂಕೋಚ, ನನ್ನ ವರ್ಣನೆಯೇ ಬೇಕೇನು..?

ಪ್ರತಿ ಸಂತೋಷವು, ಪ್ರತಿ ಸೌಂದರ್ಯವು ನೀನಾಗಿ ಕಾಣುತಿಹುದು
ಭ್ರಮೆಯೇನು.... ತಿಳಿಯೆ ನಾ.... ಹೇಳಬಾರದೆ ನೀನು

ಇರುಳುಗವಿದ, ಮಂಜು ಮುಸುಕಿದ, ಕಗ್ಗತ್ತಲ ಈ ಬಾಳಲಿ
ಬೆಳಕಾಗಿ ಬಂದ ಸೂರ್ಯ ರಶ್ಮಿ ನೀನೆ ಏನು....

My Beloved friends.

I am a simple Guy with lots of dreams and hopes in my life. Along with my Job and Business i like to give little time to my society and my great Country..

Love you all...!