Friday, April 15, 2011

ಸನಾತನ ಹಿಂದೂ ಧರ್ಮದಿಂದ ಬೇರೆಯಾಗಲು ಅವರಿಗೆ ಮನಸಾದರೂ ಹೇಗೆ ಬಂತು.?!

ಕ್ರಿಶ್ಚಿಯನೀಕರಣ...!! ಭಾರತ ಅದರಲ್ಲೂ ಸನಾತನ ಹಿಂದೂ ಧರ್ಮ ಎದುರಿಸುತಿರುವ ಅತೀ ಗಂಭೀರ ಹಾಗು ಅಷ್ಟೇ ಮಾರಕ ಪೆಡಂಭೂತಗಳಲ್ಲೊಂದು. 
ಸದ್ದಿಲ್ಲದೇ ನಡೆಯುವ ಈ ಪ್ರಕ್ರಿಯೆಗಳು ಹೆಚ್ಚು ಕಡಿಮೆ ಹೊರಗಿನ ಪ್ರಪಂಚಕ್ಕೆ ತಿಳಿಯುವುದಿಲ್ಲ. ಕೆಲ ಕ್ರಿಶ್ಚಿಯನ್ ಮತಾಂತರ ಕೇಂದ್ರಗಳಿಗೆ ಆಗಾಗ್ಗೆ ಅಲ್ಲಲ್ಲಿ ಧಾಳಿ ನಡೆದರೂ ಇದು ಇಂದಿಗೂ ನಿಂತಿಲ್ಲ.. ನಿಲ್ಲುವ ಲಕ್ಷಣಗಳೂ ಕಾಣುತ್ತಿಲ್ಲ. ನಾಗಾಲ್ಯಾಂಡ್, ಒರಿಸ್ಸಾ, ತಮಿಳ್ನಾಡು, ಮಿಜೋರಾಂ, ಅಸ್ಸಾಂ, ಮೆಘಾಲಯ, ಆಂಧ್ರದ ನಂತರ ಇದೀಗ ಕರ್ನಾಟಕದಲ್ಲಿ ಅತೀ ಹೆಚ್ಚಿನ ಮಿಷನರಿ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಇದು ನಮ್ಮವರಿಗೆ ತಿಳಿಯುವಾಗ ಕಾಲ ಮಿಂಚಿ ಹೋಗಿರುತ್ತದೆ.
ಇತ್ತೇಚೆಗೆ ಬೆಂಗಳೂರಿನ HAL ಹಳೇ ವಿಮಾನ ನಿಲ್ದಾಣ ರಸ್ತೆಯ ಪಕ್ಕವಿರುವ ವಾಸುಕಿ ಸುಬ್ರಮಣ್ಯ ದೇವಸ್ಥಾನದ ಆವರಣದಲ್ಲಿ ಹಿಂದೂ ದೇವತೆಗಳ ಚಿತ್ರಪಟಗಳು ದಿನೇ ದಿನೇ ಬಂದು ಬೀಳುತ್ತಿದ್ದವು..! ಅಲ್ಲಿನ ಅರ್ಚಕರಿಗೆ ಆಶ್ಚರ್ಯವಾಯಿತು. ಇಷ್ಟರವರೆಗೆ ಅಷ್ಟೊಂದು ಪ್ರಮಾಣದಲ್ಲಿ ಚಿತ್ರಪಟಗಳು ಅಲ್ಲಿ ರಾಶಿ ಬಿದ್ದದ್ದಿಲ್ಲ. ಇದೇನು ಒಮ್ಮೆಲೇ ಇಂತಹ ಬದಲಾವಣೆ..?! ಒಂದು ದಿವಸ ಯಾರೋ ಒಬ್ಬರು ಹಿಂದೂ ದೇವತೆಯ ಚಿತ್ರಪಟವನ್ನು ತಂದು ಅಲ್ಲಿ ಹಾಕುವಾಗ ಅರ್ಚಕರು ನೋಡಿದರು.. ಆ ವ್ಯಕ್ತಿ ಈ ಮೊದಲು ದೇಗುಲಕ್ಕೆ ಬರುತ್ತಿದ್ದ ಭಕ್ತನೇ.. ಆದರೆ ಈ ಸಲ ಆ ವ್ಯಕ್ತಿ ದೇಗುಲದೊಳಕ್ಕೆ ಬರಲಿಲ್ಲ..! ತುಸು ತೀಕ್ಷ್ಣವಾಗಿ ಗಮನಿಸಿದಾಗ ಅರ್ಚಕರಿಗೆ ಕಂಡು ಬಂದಿದ್ದು ಆತನ ಕೊರಳಲ್ಲಿ ರಾರಾಜಿಸುತ್ತಿದ್ದ 'ಶಿಲುಬೆ'ಯ ಪೆಂಡೆಂಟ್..!! ಆತನೊಬ್ಬನೇ ಅಲ್ಲ , ಇತರರೂ ಯಾರ್ಯಾರು ಚಿತ್ರಪಟವನ್ನು ದೇಗುಲದ ಆವರಣದಲ್ಲಿ ತಂದು ಹಾಕುತ್ತಿದ್ದರೋ ಅವರೆಲ್ಲರ ಕೊರಳಲ್ಲಿ ಶಿಲುಬೆಯ ಸರವಿತ್ತು...!
ಈ ಬಗ್ಗೆ ಮುಂದುವರೆದಾಗ ತಿಳಿದು ಬಂದಿದ್ದು ಅವರೆಲ್ಲ ತಾನು ಹುಟ್ಟಿನಿಂದ ಅನುಸರಿಸಿಕೊಂಡು ಬಂದಿದ್ದ ಸನಾತನ, ಪವಿತ್ರ, ಹೆಮ್ಮೆಯ ಹಿಂದೂ ಧರ್ಮವನ್ನು ಬಿಟ್ಟು ಕ್ರಿಶ್ಚಿಯನ್ ಆಗಿ ಪರಿವರ್ತಿತರಾಗಿದ್ದರು. . .! ತಾನಾಗಿ ಪೂಜಿಸಿ ಆರಾಧಿಸಿದ ಹಿಂದೂ ದೇವತೆಗಳನ್ನು ದೇಗುಲದ ಆವರಣದಲ್ಲಿ ತಂದು ಬಿಸಾಕುವಷ್ಟರ ಮಟ್ಟಿಗೆ ಬದಲಾಗಿ ಹೋಗಿದ್ದರು.
ನಾನು ಸಂಪರ್ಕಿಸಿದ ವ್ಯಕ್ತಿಯೊಬ್ಬರ ಪ್ರಕಾರ, ಮತಾಂತರ ಪ್ರಕ್ರಿಯೆ ನಡೆಸುವ ಮಿಷನರಿಗಳ ಏಜೆಂಟರು ಸ್ವಲ್ಪ ಹಿಂದುಳಿದ ಬಡ ಹಿಂದೂ ಕುಟುಂಬವನ್ನು ಗುರುತಿಸಿ ಅವರ ಕುಶಲೋಪರಿ ವಿಚಾರಿಸುವ ನೆಪದಲ್ಲಿ ಸ್ವಲ್ಪಮಟ್ಟಿನ ಹಣ ನೀಡಿ ಜೊತೆಗೆ ಒಂದು 'ಯೇಸುವಿನ' ಚಿಕ್ಕದಾದ ಚಿತ್ರಪಟವನ್ನು ನೀಡಿ ತೆರಳುತ್ತಾರೆ. ಸ್ವಲ್ಪ ದಿನದ ನಂತರ ಮತ್ತದೇ ಏಜೆಂಟ್ ಆ ಮನೆಗೆ ಬಂದು ಒಂದು 'ಸ್ವೀಟ್ ಬಾಕ್ಸ್' ಹಾಗು ಚೌಕಟ್ಟು ಇರುವ ದೊಡ್ಡದಾದ ಯೇಸುವಿನ ಫೋಟೋವನ್ನು ನೀಡಿ, ಜೊತೆಗೆ ಆ ಫೋಟೋವನ್ನು ಗೋಡೆಯಲ್ಲಿ ಪ್ರದರ್ಶಿಸಲು ಸ್ವಲ್ಪ ಮಟ್ಟಿನ ಹಣ ನೀಡಿ ತೆರಳುತ್ತಾನೆ. ಹಣದ ಸಹಾಯ ಪಡೆದ ಆ ಕುಟುಂಬ ಆತನ ಸಲಹೆಯನ್ನು ಚಾಚು ತಪ್ಪದೆ ಪಾಲಿಸುತ್ತದೆ.. ಮದ್ಯೆ ಮದ್ಯೆ ಕುಶಲೋಪರಿ ವಿಚಾರಣೆಗಳು ನಡೆಯುತ್ತಿರುತ್ತವೆ. ಅದಾಗಿ ವಾರದ ನಂತರ ಯೇಸುವಿನ ಫೋಟೋವನ್ನು ಹಿಂದೂ ದೇವರ ಫೋಟೋಗಳಿಗಿಂತ ಮೇಲ್ಬಾಗದಲ್ಲಿ ಪ್ರದರ್ಶಿಸಲು ಸೂಚಿಸಲಾಗುತ್ತದೆ. ಅದಕ್ಕೆ ಮತ್ತೊಂದು ಕಂತಿನ ಹಣ!. ಅದೇ ದಿನ ಅವರ ಪ್ರಾರ್ಥನಾ ಸಭೆಗೆ ಕರೆದುಕೊಂಡು ಹೋಗಿ ಅವರಿಗಾಗಿ ಪ್ರಾರ್ಥಿಸಲಾಗುತ್ತದೆ. ಅವರಿಗಿರುವ ಯಾವುದೇ ಕಾಯಿಲೆಯನ್ನು ಪ್ರಾರ್ಥನೆ ಮೂಲಕ ವಾಸಿ ಮಾಡುವ ಬೋಗಸ್ ಭರವಸೆಯಿಕ್ಕುತ್ತಾರೆ!! ಈ ಎಲ್ಲ ಹಂತ ದಾಟಿದ ಮೇಲೆ ಅದೇ ಏಜೆಂಟ್ ದೊಡ್ಡ ಮೊತ್ತದ ಹಣದೊಂದಿಗೆ ಆ ಮನೆಗೆ ಬಂದು ಹಿಂದೂ ದೇವರ ಫೋಟೋಗಳನ್ನು ತೆಗೆಯಲು ಸೂಚಿಸುತ್ತಾನೆ. ಆ ಹೊತ್ತಿಗಾಗಲೇ ಆ ಕುಟುಂಬ ಮಾನಸಿಕವಾಗಿ ಇವರೊಂದಿಗೆ ಬೆರೆತು ಹೋಗಿರುತ್ತದೆ. ಆದರೆ ಹಿಂದೂ ದೇವರ ಫೋಟೋವನ್ನು ಅಲ್ಲಲ್ಲಿ ಬಿಸಾಕಿದರೆ ಏನಾಗಬಹುದೋ ಎಂಬ ಭಯದಿಂದ ಆ ಕುಟುಂಬದವರು ಅದನ್ನು ದೇವಸ್ಥಾನದ ಆವರಣದಲ್ಲೋ ಅಥವಾ ಬಾವಿಯಲ್ಲೋ ಬಿಸಾಕಿ ಹೋಗುತ್ತಿದ್ದರು!..
ಹೆಚ್ಚು ಕಡಿಮೆ ಎಲ್ಲ ಕಡೆ ಇದೆ ರೀತಿಯ ತಂತ್ರವನ್ನೇ ಬಳಸಲಾಗುತ್ತದೆ. ಆದರೆ ನಮ್ಮ ಸುತ್ತ ಮುತ್ತಲ ಸಮಾಜಕ್ಕೆ ಇದರ ಅರಿವಿರುವುದಿಲ್ಲ. ನಮ್ಮ ಪಕ್ಕದ ಮನೆಯ ಹಿಂದೂವಿನ ಕೊರಳಲ್ಲಿ ಶಿಲುಬೆ ಸರ ನೋಡಿದ ಮೇಲೆಯೇ ನಮಗೆ ಅರಿವಾಗುವುದು ನೆರೆಯ ಕುಟುಂಬ ಈಗ ಹಿಂದೂವಾಗಿ ಉಳಿದಿಲ್ಲ ಎಂದು...!
ಇದೆ ತಂತ್ರದ ಮೇಲೆ ಭಾರತದಾದ್ಯಂತ ನಮ್ಮ ಎಷ್ಟೋ ಹಿಂದೂ ಕುಟುಂಬಗಳು ಸನಾತನ ಧರ್ಮದಿಂದ ಅಗಲಿ ಹೋಗಿವೆ. ಎಲ್ಲೂ ಇಲ್ಲದ ಭವ್ಯ, ಮಹೋನ್ನತ ಸಂಸ್ಕ್ರತಿಯಿರುವ, ಸಹಸ್ರಾರು ವರ್ಷಗಳ ಇತಿಹಾಸದ, ರಾಮ-ಕೃಷ್ಣರಂತಹ ಮಹಾಪುರುಷರು ಜನಿಸಿ ದಾರಿ ತೋರಿಸಿದಂತಹ, ಯಾವ ಧರ್ಮದಲ್ಲೂ ಇಲ್ಲದ ಪೂರ್ಣ ಸ್ವಾತಂತ್ರ್ಯ ಇರುವ, ಪವಿತ್ರವಾದ ಸನಾತನ ಹಿಂದೂ ಧರ್ಮದಿಂದ ಬೇರೆಯಾಗಲು ಅವರಿಗೆ ಮನಸಾದರೂ ಹೇಗೆ ಬಂತು.?! ಇದರ ಹೊಣೆ ಹೊರಬೇಕಾದವರು ಯಾರು..? ಬೇರೆ ಯಾರು ಅಲ್ಲ ನಾವೇ..! ಹಿಂದೂಗಳೇ..!! ಅಲ್ಲಲ್ಲಿ ಹಿಂದೂ ಸಮಾಜೋತ್ಸವ, ಮೆರವಣಿಗೆ ಎಂದು ಉತ್ಸಾಹ ತೋರಿಸುವ ಹಿಂದೂ ಸಂಘಟನೆಗಳು ನಮ್ಮದೇ ಜನರಿಗೆ ನಮ್ಮ ಧರ್ಮದ ಬಗ್ಗೆ ತಿಳಿ ಹೇಳುವ, ಧರ್ಮದಲ್ಲಿ ಆಸಕ್ತಿ ಹುಟ್ಟಿಸುವ, ತುಸು ಹಿಂದುಳಿದವರಿಗೆ ಆರ್ಥಿಕವಾಗಿ ನೆರವಾಗುವ ಕಾರ್ಯಕ್ಕೆ ಯಾಕೆ ಮುಂದಾಗಬಾರದು.. ಸಂಘಟನೆಯಲ್ಲಿ ಸ್ವಲ್ಪ ಹಣ ಕೂಡಿದರೆ ಸಾಕು ಆ ಉತ್ಸವ ಈ ಉತ್ಸವ ಎಂದು ನೆಗದಾಡಿ ಪೋಲು ಮಾಡುವ ಬದಲು ಅದೇ ಹಣವನ್ನು ಹಿಂದೂ ಬಡಬಗ್ಗರನ್ನು ಗುರುತಿಸಿ ಅವರ ಕಷ್ಟಕ್ಕೆ ನೆರವಾದರೆ ನಮ್ಮ ಅದೆಷ್ಟೋ ಹಿಂದೂ ಕುಟುಂಬಗಳನ್ನು ಹಿಂದೂ ಧರ್ಮದಲ್ಲಿಯೇ ಉಳಿಸಿಕೊಳ್ಳಬಹುದಲ್ಲವೇ?.. ಉತ್ಸವಗಳು ನಮ್ಮ ಸಂಸ್ಕ್ರತಿ ಪಸರಿಸಲು ಅವಶ್ಯ ನಿಜ, ಆದರೆ ಇದು ಅದಕ್ಕಿಂತಲೂ ಪುಣ್ಯದ ಕೆಲಸವಾಗದೇ..
ಅಥವಾ ಅದೇ ಹಿಂದೂ ಪುರುಷ ಯಾ ಮಹಿಳೆಯ ಕೊರಳಲ್ಲಿ ಶಿಲುಬೆಯನ್ನು ನೋಡುವಾಸೆಯೇ...
 

3 comments:

  1. naam hindugalu naavu melu jaati avaru keelu jaati anta hodedaadtaare...ade avarugalige plus point... naavu badavaru srimantaru, melu jaati kelu jaati annodella bittu naavella onde anta bhaavisidre kandita kraista dharmakke yaaru ee reetiyaagi dharmavannu bittu hogalla......chandavaagi barediddeeri

    ReplyDelete
  2. This comment has been removed by the author.

    ReplyDelete