Wednesday, April 6, 2011

ದೇಶವೆಲ್ಲ ಮಲಗಿರಲು ಅವನೊಬ್ಬನೆದ್ದ ...

ಅಣ್ಣಾ ಹಜಾರೆ ಇಂದು ದೇಶದಾದ್ಯಂತ ಕೇಳಿಬರುತಿರುವ ಹೆಸರು..! ನಮ್ಮ ಕಣ್ಣ ಮುಂದೆಯೇ ಭ್ರಷ್ಟಾಚಾರ ನಡೆದರೂ ಕಂಡೂ ಕಾಣದಂತೆ ಸತ್ತು ಹೋಗಿದ್ದ ಭಾರತೀಯ ಮನಸುಗಳು ಇಂದು ಒಬ್ಬ ವಯೋವೃದ್ದ 72 ವರ್ಷದ ಹಜಾರೆಯಿಂದಾಗಿ ಸೆಟೆದು ನಿಲ್ಲುವಂತಾಗಿದೆ.. ನಾಚಿಕೆಯಾಗಬೇಕು ನಮಗೆ..! ಭ್ರಷ್ಟಾಚಾರ ಬೆಳೆದು ಹೆಮ್ಮರವಾದರೂ ನಾವಿಷ್ಟು ವರ್ಷ ಏನೂ ಮಾಡದ ಶಿಖಂಡಿಗಳಂತೆ ಇದ್ದೆವಲ್ಲ!! ಯಾಕೆ ನಮ್ಮಿಂದ ರಾಷ್ಟ್ರದ ಚಿತ್ರಣವನ್ನು ಬದಲಿಸಲು ಸಾಧ್ಯವಿಲ್ಲವೇ..? 120 ಕೋಟಿ ಭಾರತೀಯರಲ್ಲಿ ಒಬ್ಬನೇ ಒಬ್ಬ ಸಮಾಜ ಸುಧಾರಕ ಸರಕಾರಕ್ಕೆ ನಡುಕ ಹುಟ್ಟಿಸಬಲ್ಲವನಾದರೆ ನಾವೆಲ್ಲಾ ಒಂದಾಗಿ ಹೋರಾಟಕ್ಕೆ ಇಳಿದರೆ ಏನಾಗಬಹುದು ಊಹಿಸಿ.. ಜನಲೋಕಪಾಲ ಮಸೂದೆಗೆ ಒತ್ತಾಯಿಸಿ  ದೆಹಲಿಯ ಜಂತರ್ ಮಂತರ್ ನಲ್ಲಿ ಹಜಾರೆ ಮಾಡುತ್ತಿರುವ ಆಮರಣಾಂತ ಅನ್ನ ಸತ್ಯಾಗ್ರಹ ಮುಂದುವರಿದಿದ್ದು ದೇಶದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸ್ವಾಬಾವಿಕವಾಗಿಯೇ ಕೇಂದ್ರದ ವಿರೋಧ ಪಕ್ಷಗಳು ಸತ್ಯಾಗ್ರಹದ ಲಾಭ ಪಡೆದುಕೊಳ್ಳಲು ಹವಣಿಸುತ್ತಿವೆ.. ಜಾಗ್ರತರಾಗೋಣ ಭಾರತೀಯರೇ, ರಾಜಕೀಯರಹಿತವಾಗಿ ಹೋರಾಟಕ್ಕಿಳಿಯೋಣ! ಸತ್ತು ನಿರ್ಜೀವವಾಗಿರುವ ನಿಮ್ಮ ಮನಸುಗಳನ್ನು ಬಡಿದೆಬ್ಬಿಸಿ ಬನ್ನಿ..

1 comment:

  1. 120 ಕೋಟಿ ಭಾರತೀಯರಲ್ಲಿ ಒಬ್ಬನೇ ಒಬ್ಬ ಸಮಾಜ ಸುಧಾರಕ ಸರಕಾರಕ್ಕೆ ನಡುಕ ಹುಟ್ಟಿಸಬಲ್ಲವನಾದರೆ ನಾವೆಲ್ಲಾ ಒಂದಾಗಿ ಹೋರಾಟಕ್ಕೆ ಇಳಿದರೆ ಏನಾಗಬಹುದು ಊಹಿಸಿ.. --ಸರಿಯಾಗಿ ಹೇಳಿದ್ರಿ....ನಮ್ಮ ಜನರಲ್ಲಿ ಒಗ್ಗಟಿಲ್ಲ ಅಂತ ನಮ್ಮರಾಜಕಾರಣಿಗಳು advantage ತಗೋತ ಇದಾರೆ...ಹೀಗ ನೋಡಲಿ ನಮ್ಮ ಒಗ್ಗಟ್ಟು ಎಂತಹದು ಅಂತ.....ನಿಜ ರಾಜಕೀಯರಹಿತ ಹೋರಾಟವೇ ಬೇಕಾಗಿದೆ....ಅಣ್ಣಾ ಹಜಾರೆ ಅವರಿಗೆ ಯುವಕರಾದ ನಮ್ಮಿಂದ ಬೆಂಬಲ ಕಂಡಿತವಾಗಿಯು ಇರಬೇಕು...ಇದೆ...ಇರುತ್ತದೆ...

    ReplyDelete