Saturday, December 24, 2011

ಇದು ಲವ್ ಅಲ್ಲ... ಜಿಹಾದ್..!


ಚಿಕ್ಕಂದಿನಿಂದ ಹೆತ್ತು ಹೊತ್ತು ಸಾಕಿದ ಆ ಮುಗ್ಧ ತಂದೆ ತಾಯಿ, ಜೊತೆಯಲ್ಲೇ ಆಡುತ್ತ, ಚೇಷ್ಟೆ ಮಾಡುತ್ತ ಬೆಳೆದ ಪ್ರೀತಿಯ ಅಣ್ಣ, ತಮ್ಮ, ಅಕ್ಕ-ತಂಗಿಯರು, ಮೊಮ್ಮಗಳ ಮದುವೆ ನೋಡಲು ಒಂದಿನಿತು ಜೀವ ಹಿಡಿದು ನಿಂತ ಅಜ್ಜ ಅಜ್ಜಿಯರು, ಆತ್ಮೀಯ ಬಂಧು ಬಾಂಧವರು.. ಇಂತಹ ಒಂದು ಜನ್ಮಾಂತರದ ಭಾಂಧವ್ಯವನ್ನು ಕೆಲವೇ ಕ್ಷಣಗಳಲ್ಲಿ ತುಂಡರಿಸಿ ಯಾವುದೋ ಪರಧರ್ಮೀಯ 'ಲವ್ ಜಿಹಾದಿ' ಹುಡುಗನ ಜೊತೆ ಪರಾರಿಯಾದ ಜ್ಯೋತಿ, ರಮ್ಯ, ಪ್ರಿಯಾಂಕ, ಸಹನಾ.......ರವರುಗಳ ಈಗಿನ ಬದುಕು ಎಷ್ಟು ನರಕ ಸದೃಶವಾಗಿದೆ ಎಂಬುದನ್ನು ತಿಳಿಸಲಾದರೂ ಅವರು ಸಮಾಜದ ಮುಂದೆ ಬರುವರೇ..?! ಅವರನ್ನು ಅಗಲಿ ಕಣ್ಣೀರಾಗಿರುವ ಅವರ ಕುಟುಂಬಿಕರ ಮೋರೆ ನೋಡಲಾದರೂ ಬರುವರೇ..?! ಇಲ್ಲ... ಖಂಡಿತ ಬರಲಾರರು..! ಕತ್ತಲ ಕೂಪದಲ್ಲಿರುವ ಅವರುಗಳು ಈಗ ಸಮಾಜದ ಮುಂದೆ ಬರುವಷ್ಟೂ ಸ್ವತಂತ್ರರಾಗಿ ಉಳಿದಿಲ್ಲ...!

ಇವರುಗಳ ಬದುಕನ್ನು ಇಷ್ಟು ಹೀನಾಯವಾಗಿಸಿದ ಆ ಜಾಲದ ಹೆಸರಾದರು ಏನು? ಅದುವೇ 'ಲವ್ ಜಿಹಾದ್'. ಹಿಂದೂ-ಕ್ರಿಶ್ಚಿಯನ್ ತರುಣಿಯರನ್ನು 'ಪ್ರೀತಿ' ಎಂಬ ಎರಡಕ್ಷರದ ಪವಿತ್ರ ಭಾವನೆಯ ಹೆಸರಿನಲ್ಲಿ ನಾಟಕವಾಡಿ ಮತಾಂತರಿಸುವ ಮುಸ್ಲಿಂ ಮತಾಂಧರ ಜಾಲವೇ 'ಲವ್ ಜಿಹಾದ್'. ಒಂದು ವರ್ಷದ ಕೆಳಗೆ ಭಾರಿ ಸುದ್ದಿ ಮಾಡಿದ್ದ ಇದು ನಂತರ ಹಲವು ಪ್ರತಿಭಟನೆ, ಪ್ರತಿರೋಧಗಳ ಮಧ್ಯೆ ನಿಂತಂತೆ ಕಂಡರೂ ಈಗ ಮತ್ತೆ ಮರು ಹುಟ್ಟು ಪಡೆದುಕೊಂಡಿರುವುದು ಆಘಾತಕಾರಿ..!

ಮುಸ್ಲಿಮೇತರ ತರುಣಿಯರನ್ನು ಅವರ ಶಾಲೆ-ಕಾಲೇಜು, ಉದ್ಯೋಗದ ಸ್ಥಳಗಳಲ್ಲಿ ಪರಿಚಯಿಸಿಕೊಂಡು, ಬಣ್ಣ ಬಣ್ಣದ ಮಾತಿನಿಂದ ಮೋಡಿಗೊಳಿಸಿ, ಆಕರ್ಷಕ ಉಡುಗೊರೆಗಳನ್ನು ನೀಡಿ, ಪ್ರೀತಿಸಿ, ರಮಿಸಿ, ಕಾಮಿಸುವ ಲವ್ ಜಿಹಾದಿ (ಮುಸ್ಲಿಂ) ತರುಣರು ಆ ಹುಡುಗಿಯರ ಮನಸ್ಸನ್ನು ಪ್ರೀತಿಯ ಹೆಸರಿನಲ್ಲಿ ಕುರುಡಾಗಿಸಿಬಿಡುತ್ತಾರೆ. (ಇದರಲ್ಲಿ ಹೆಚ್ಚಿನ ಲವ್ ಜಿಹಾದಿ ಮುಸ್ಲಿಂ ತರುಣರು ತಮ್ಮನ್ನು ತಾವು 'ಹಿಂದೂ' ಎಂದು ಪರಿಚಯಿಸಿಕೊಂಡು ಜಾಲ ಹೆಣೆಯುವುದಿದೆ.) ಆದರೆ ಆತನ ಪ್ರೀತಿ ನಿಜವಲ್ಲ ಅದು ತಮ್ಮ ಭವಿಷ್ಯವನ್ನು ಹಾಳುಗೆಡವಲು ಹೆಣೆದಿರುವ ಜಾಲ ಎಂದು ಅರಿವಾಗುವುದು ಆ ಹುಡುಗಿ ತನ್ನ ಮನೆಯವರನ್ನೆಲ್ಲ ಬಿಟ್ಟು ಆ ಮುಸ್ಲಿಂ ಹುಡುಗನ ಜೊತೆ ನಿಖಾ (ಮದುವೆ) ಆಗಿ ಆತನ ಧರ್ಮಕ್ಕೆ ಮತಾಂತರಗೊಂಡ ಮೇಲೆಯೇ, ಇಲ್ಲವೇ ಆ ಹುಡುಗ ಕ್ಲಿಕ್ಕ್ಕಿಸಿದ ಆಕೆಯ ನಗ್ನ-ಅರೆ ನಗ್ನ ಚಿತ್ರಗಳ MMS ಕ್ಲಿಪ್ ಊರಿಡೀ ಹರಿದು ಆಕೆಯ ಮೊಬೈಲಿಗೆ ಬಂದ ಮೇಲೆಯೇ.. ಆದರೆ ಅಷ್ಟೊತ್ತಿಗೆ ಕಾಲ ಮಿಂಚಿ ಹೋಗಿರುತ್ತದೆ..!!


ತನ್ನ 'ಬಲಿ'ಯಾದ ಆ ಹುಡುಗಿಯನ್ನು ಮದುವೆಯಾಗುವ ಆತ ಇಸ್ಲಾಮಿನ ಒಂದೊಂದೇ ನಿಯಮಗಳನ್ನು ಆಕೆಯ ಮೇಲೆ ಹೇರತೊಡಗುತ್ತಾನೆ. ಸಲ್ವಾರ್, ಸೀರೆ, ಪ್ಯಾಂಟ್, ಟೀ-ಶರ್ಟ್ ಎಂದು ಸ್ವತಂತ್ರವಾಗಿ ಉಡುಗೆಗಳನ್ನು ಧರಿಸುತ್ತಿದ್ದ ಆಕೆಯ ಮೇಲೆ ಕರಿ ಬುರ್ಖಾವನ್ನು ಹೇರಲಾಗುತ್ತದೆ. ಆತನನ್ನು ಪ್ರೀತಿಸಿದ ತಪ್ಪಿಗೆ ಆಕೆ ಒಪ್ಪಿಕೊಳ್ಳುತ್ತಾಳೆ. ಮುಂದೆ ಒಂದರ ನಂತರ ಒಂದರಂತೆ ಮಕ್ಕಳನ್ನು ಹುಟ್ಟಿಸುವ ಆತ ಆಕೆಯನ್ನು  ಒಂದು ಹೆರಿಗೆ ಯಂತ್ರವನ್ನಾಗಿ ಮಾಡುತ್ತಾನೆ. ಬರೀ ಅಷ್ಟಕ್ಕೇ ಮುಗಿಯಲಿಲ್ಲ.. ಕೆಲವೇ ದಿನಗಳಲ್ಲಿ ಮನೆಗೆ ಇನ್ನೊಬ್ಬಳು ಸವತಿ ಬರುತ್ತಾಳೆ. ಮುಂದೆ ಮತ್ತೊಬ್ಬಳು.. 3-4 ಮದುವೆಯಾಗುತ್ತಾನೆ. ಅದಕ್ಕಿಂತಲೂ ಹೆಚ್ಚು ಆಗಬಹುದು.! ಆಕೆಯೊಬ್ಬಳನ್ನೇ 'ಪತ್ನಿ' ಯಾಗಿ ಸ್ವೀಕರಿಸಲು ಆತನೇನು 'ಹಿಂದೂ'ವೇ ?!. ಒಬ್ಬಳೇ 'ಧರ್ಮಪತ್ನಿ' ಎಂಬ ಕಟ್ಟು ಪಾಡು, ಕಟ್ಟಲೆಗಳು ಅವನಲ್ಲಾಗಲೀ, ಅವನ ಇಸ್ಲಾಂ ಧರ್ಮದಲ್ಲಾಗಲೀ ಇಲ್ಲ. ಇದನ್ನೆಲ್ಲಾ ಸಹಿಸಿಕೊಂಡು ಕತ್ತಲ ಕೂಪದಲ್ಲಿ ಬದುಕು ಸವೆಸುವ ಆಕೆ ಮುಂದೊಂದು ದಿನ ಬೀದಿಗೆ ಬೀಳಬೇಕಾಗುತ್ತದೆ. ಅಷ್ಟರಲ್ಲಿ ಹೆತ್ತು ಹೆತ್ತು ಹೆರಿಗೆ ಯಂತ್ರವಾಗಿರುವ ಆಕೆ ತನ್ನ ಸೌಂದರ್ಯವನ್ನೆಲ್ಲ  ಕಳಕೊಂಡಿರುತ್ತಾಳೆ. ಆಕೆಯನ್ನು ಮೂಸಿ ನೋಡುವವರು ಯಾರೂ ಇರುವುದಿಲ್ಲ. ಅನಿವಾರ್ಯವಾಗಿ ಆಕೆ ಆ ಮುಸ್ಲಿಂ ಹುಡುಗನೊಂದಿಗೆ ಬದುಕು ಸವೆಸುತ್ತಾಳೆ. ಇಲ್ಲವೇ ಆತ್ಮಹತ್ಯೆಗೆ ಶರಣಾಗಿ ಈ ಪ್ರಪಂಚದಿಂದಲೇ ಬಹುದೂರ ಸಾಗುತ್ತಾಳೆ. ಕೆಲವೊಮ್ಮೆ ಬದುಕಿನ ಅಧಾರಕ್ಕಾಗಿ ವೇಶ್ಯಾವಾಟಿಕೆಗೆ ಮುಖ ಮಾಡುವುದೂ ಇದೆ.. ಇಲ್ಲಿಗೆ ಆ ಲವ್ ಜಿಹಾದಿ ಹುಡುಗನ ಉದ್ದೇಶ ಈಡೇರಿದಂತಾಗುತ್ತದೆ. ಅದೇ ಆ ಹುಡುಗಿಯ ಜೀವನದ ನಿರ್ನಾಮ!!

ಇಂತಹ 10,000 ಕ್ಕೂ ಹೆಚ್ಚು ಪ್ರಕರಣಗಳು ಇಲ್ಲಿಯವರೆಗೆ ಬೆಳಕಿಗೆ ಬಂದಿವೆ. ಕೇರಳದಲ್ಲಿ ಅತೀ ಹೆಚ್ಚಿನ 6000 ದಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದು ನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ಅದರಲ್ಲೂ ಇತ್ತೀಚಿಗೆ ಬೆಳಕಿಗೆ ಬರುತ್ತಿರುವ ಲವ್ ಜಿಹಾದ್ ಪ್ರಕರಣಗಳು ಕರ್ನಾಟಕದಲ್ಲೇ ಆಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ನಮ್ಮ ಬುದ್ಧಿಜೀವಿಗಳೆನಿಸಿಕೊಂಡವರು, ರಾಜಕಾರಣಿಗಳು ಮಾತ್ರ ಈ ಬಗ್ಗೆ ಹೆಚ್ಚಿನ ಚರ್ಚೆಗೆ ಮುಂದಾಗುವುದಿಲ್ಲ. ಅದೇ ಒಬ್ಬ ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿ ಓಡಿ ಹೋಗಿ ವರಿಸಿದ್ದರೆ ಆಕ್ರೋಶಗೊಂಡು ಅದನ್ನು ದೊಡ್ಡ ರಂಪ ಮಾಡಲು ಮಾತ್ರ ನಾ ಮುಂದು ತಾ ಮುಂದು ಎಂದು ಧಾವಿಸುತ್ತಿದ್ದರು. ಜಮ್ಮು ಕಾಶ್ಮೀರದ ಅಮೀನ ಎಂಬ ಮುಸ್ಲಿಂ ಹುಡುಗಿ ರಜನೀಶ ಎಂಬ ಹಿಂದೂ ಹುಡುಗನನ್ನು ಪ್ರೀತಿಸಿ ವರಿಸಿದ್ದಕ್ಕೆ ಏನಾಯಿತು. ಅಲ್ಲಿನ ಇಡೀ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ರಜನೀಶ ಪೋಲಿಸ್ ಕಸ್ಟಡಿಯಲ್ಲೇ ಹೆಣವಾಗಬೇಕಾಯಿತು.. ಆಗ ಇದ್ದ ಮುಸ್ಲಿಂ ಮೌಲ್ವಿಗಳ ಆಕ್ರೋಶ, ಬುದ್ದಿಜೀವಿಗಳ ಕಿಡಿ ನುಡಿಗಳು ಈಗ ಎಲ್ಲಿ ಅವಿತು ಹೋಗಿವೆ..

'ಪ್ರೀತಿ' ಎಂಬ ಎರಡಕ್ಷರದ ಅಮೂಲ್ಯ ಪವಿತ್ರ ಭಾವನೆಯನ್ನೇ ದಾಳವಾಗಿಸಿ ನಡೆಯುವ ಈ ಜಾಲದ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಈ ಬಗ್ಗೆ ಹೆಚ್ಚಿನ ಪ್ರಚಾರವಾಗಬೇಕು. ಎಲ್ಲಾ ಮುಸ್ಲಿಮೇತರ (ಹಿಂದೂ, ಕ್ರಿಶ್ಚಿಯನ್) ತರುಣಿಯರಿಗೆ ಹಾಗು ಅವರುಗಳ ಪೋಷಕರುಗಳಿಗೆ ಈ ಬಗ್ಗೆ ಜ್ನಾನವಿರಬೇಕು. ಯಾವಾಗ ಆ ಜಾಗೃತ ಮನೋಭಾವ ಅವರವರ ಮನದಲ್ಲಿ ಮೂಡುತ್ತೋ ಆಗ ಈ ಮುಂದೊಗಲಿಲ್ಲದ ಮುಸ್ಲಿಂ ಪಡ್ಡೆಗಳ 'ಲವ್ ಜಿಹಾದ್' ಜಾಲ ತನ್ನಿಂತಾನೆ ಇಲ್ಲವಾಗುತ್ತದೆ. 
ಸಹೋದರಿಯರೇ ಜಾಗೃತರಾಗಿರಿ.. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇದೆ ಎಂಬುದನ್ನು ಮರೆಯದಿರಿ..

9 comments:

 1. you are totally wrong ,,what you think ,if you post something like this you will get publicity , no newer , for your publicity don't use Islam,
  ಗೆಳೆಯ ಸಾಧ್ಯವಿದ್ದರೆ ಈ ಜಾತಿ ಭೇಧವನ್ನು ತೊಲಗಿಸಲು ಪ್ರಯತ್ನಿಸು ,,ಈ ರೀತಿ ಉರಿಯುವ ಬೆಂಕಿಗೆ ತುಪ್ಪ ಸುರಿಯವ ಕೆಲಸ ಮಾಡಬೇಡ ....
  ನನ್ನ ಮಾತಿನಿಂದ ಬೇಸರವಾಗಿದ್ದರೆ ಕ್ಷಮಿಸು

  ReplyDelete
 2. ಗೆಳೆಯ Kabeer, ಕೋಮು ಸೌಹಾರ್ದದ ಬಗ್ಗೆ ಮಾತನಾಡುತ್ತಿರುವ ನಿನ್ನನ್ನು ಮೆಚ್ಚುತ್ತೇನೆ. ಆದರೆ ಆ ಮಾತುಗಳು ಕೇವಲ ಬಾಯಿ ಮಾತಿನಲ್ಲಿರದೆ ಕಾರ್ಯ ರೂಪಕ್ಕೆ ಬರಲಿ.. ನಾನು ಯಾವುದೇ ಪ್ರಚಾರಕ್ಕಾಗಿ ಈ ಲೇಖನವನ್ನು ಬರೆದಿಲ್ಲ. ನನ್ನ ಸಮಾಜದ ಒಳಿತಿಗಾಗಿ ಅವರ ರಕ್ಷಣೆಗಾಗಿ ಬರೆದಿರುವೆ.. ಕೆಲ ಮುಸ್ಲಿಂ ಮತಾಂಧರು ನಡೆಸುವ ಲವ್ ಜಿಹಾದ್ ಅನ್ನುವುದು ಕಟ್ಟು ಕಥೆಯಲ್ಲ. ನೀನು ಈ ಪ್ರಪಂಚದಲ್ಲಿ ಇದ್ದೀಯ ಅನ್ನುವುದು ಎಷ್ಟು ನಿಜನೋ ಹಾಗೆಯೇ ಲವ್ ಜಿಹಾದ್ ಕೂಡ.. ಮೊದಲು ಕೋಮು ಸಾಮರಸ್ಯ ಕದಡುವಂತಹ ಲವ್ ಜಿಹಾದ್ ಹಾಗು ಇತರ ಚಟುವಟಿಕೆಗಳನ್ನು ನಿಮ್ಮ ಧರ್ಮದವರು ನಿಲ್ಲಿಸಲಿ. ಆಮೇಲೆ ಸಾಮರಸ್ಯ ತನ್ನಿಂತಾನೆ ಏರ್ಪಡುತ್ತದೆ..!!

  ReplyDelete
 3. ಇಸ್ಲಾಂ ಎನ್ನುವುದು ತುಂಬಾ ಕಟ್ಟುನಿಟ್ಟಾದ ಧರ್ಮ. ಇಸ್ಲಾಂನ ತತ್ವವೊಂದು 'ಅನ್ಯ ಪುರುಷರನ್ನು ನೋಡುವುದಾಗಲಿ, ಅಥವಾ ಅನ್ಯ ಮಹಿಳೆಯರನ್ನಾಗಲೀ ನೋಡುವುದು ಹರಾಮ್(ನಿಷಿದ್ಧ)' ಎನ್ನುತ್ತದೆ. ಧಾರ್ಮಿಕವಾಗಿ ಹೇಳುವುದಾದರೆ ವಿವಾಹ ಪೂರ್ವ ಪ್ರೀತಿ, ಪ್ರೇಮ, ಪ್ರಣಯಕ್ಕಾಗಲಿ ಅವಕಾಶವಿಲ್ಲ. ಹೀಗಿರುವಾಗ ಧರ್ಮದ ಹೆಸರನ್ನು ಹೊತ್ತುಕೊಂಡು ಪವಿತ್ರವಾದ ಶಾಂತಿ ಸ್ಥಾಪನೆಯ ಧರ್ಮನ್ನಾಗಲಿ, ತತ್ವಕ್ಕಾಗಲಿ ಕಪ್ಪುಮಸಿ ಬಳಿಯುವುದನ್ನು ಖಂಡಿತವಾಗಿಯೂ ವಿರೋಧಿಸಲೇಬೇಕು. ಧರ್ಮದ ಒಳಾರ್ಥ, ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಮೌಢ್ಯತೆಯನ್ನು ದೂರವಾಗಿಟ್ಟು ಶಾಂತಿ ಸ್ಥಾಪನೆಯಲ್ಲಿ ಕೈಜೋಡಿಸುವವನೇ ಮುಸ್ಲಿಂ. ಇಲ್ಲವಾದರೆ ನಾಮಧಾರಿ....

  ReplyDelete
 4. ಗೆಳೆಯ ಅಬ್ದುಲ್ ಅವರೇ, '....ಶಾಂತಿ ಸ್ಥಾಪನೆಯಲ್ಲಿ ಕೈಜೋಡಿಸುವವನೇ ಮುಸ್ಲಿಂ. ಇಲ್ಲವಾದರೆ ನಾಮಧಾರಿ....' ಎಂಬ ನಿಮ್ಮ ಮಾತಿನ ಅರ್ಥವಾದರೂ ಏನು ?! 'ನಾಮಧಾರಿ' ಎಂಬುದನ್ನು ಹಿಂದುಗಳಿಗೆ ಉಲ್ಲೇಖಿಸಲಾಗಿದೆ ಅಲ್ಲವೇ.. ಹಾಗಿದ್ದಲ್ಲಿ ಹಿಂದೂಗಳು ಶಾಂತಿ ಪ್ರಿಯರಲ್ಲ ಎಂಬುದು ನಿಮ್ಮ ಮಾತಿನ ಅರ್ಥವೇ..? ರಾಷ್ಟ್ರದಾದ್ಯಂತ ನಡೆದ ಹಲವಾರು ಕೋಮು ಸಂಘರ್ಷಗಳು ಮುಸ್ಲಿಮರಿಂದ ಮೊದಲ್ಗೊಂಡಿವೆಯೇ ಹೊರತು ಹಿಂದುಗಳಿಂದಲ್ಲ..! ನನ್ನ ಈ ಮಾತನ್ನು ವಿರೋಧಿಸುವ ಯಾವುದೇ ಒಂದು ಉದಾಹರಣೆ ಇದ್ದರೆ ದಯವಿಟ್ಟು ತಿಳಿಸಿ.. ಭಾರತದ ಹಾಗು ಭಾರತೀಯ ಹಿಂದೂಗಳ ಮೇಲಿನ ಮುಸ್ಲಿಮರ ಧಾಳಿಗಳು ಮಹಮ್ಮದ್ ಗಜಿನಿ, ಘೋರಿಗಳ ಕಾಲದಿಂದ ಆರಂಭವಾಗಿವೆ.. ಅದು ಇಂದಿನವರೆಗೂ ಬೇರೆ ಬೇರೆ ರೂಪಗಳಲ್ಲಿ ಮುಂದುವರೆದಿದೆ.. ಅಂದಿನಿಂದ ಇಂದಿನವರೆಗೆ ಮುಸ್ಲಿಮರು ಭಾರತವನ್ನು, ಹಿಂದುಗಳನ್ನು ಹರಿದು ಮುಕ್ಕಿದ ಬಗ್ಗೆ ಮಾತನಾಡುವುದಾದರೆ ಬಹಳಷ್ಟು ವಿಷಯಗಳೇ ಇವೆ... ಇಲ್ಲಿ ಮತ್ತೆ ಅವುಗಳನ್ನು ಪ್ರಸ್ತಾಪಿಸಿ ಕೋಮು ಸಾಮರಸ್ಯ ಕದಡುವ ಪ್ರಯತ್ನ ಮಾಡಲಾರೆ.. ಯಾಕೆಂದರೆ ನಾನು 'ಮುಸ್ಲಿಂ'ಮನಲ್ಲ !

  ReplyDelete
 5. ಗೆಳೆಯ ಅಶ್ವಿನ್, ಇದುವೇ ಅಪಾರ್ಥಕ್ಕೆ ಮೂಲ. "ಧರ್ಮದ ಒಳಾರ್ಥ, ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಮೌಢ್ಯತೆಯನ್ನು ದೂರವಾಗಿಟ್ಟು ಶಾಂತಿ ಸ್ಥಾಪನೆಯಲ್ಲಿ ಕೈಜೋಡಿಸುವವನೇ ಮುಸ್ಲಿಂ. ಇಲ್ಲವಾದರೆ ನಾಮಧಾರಿ...." ಇಲ್ಲಿ ನಾಮಧಾರಿ ಅನ್ನುವ ಪದದ ಅರ್ಥ 'ಮುಸ್ಲಿಂ ನಾಮಧಾರಿ. ಅಂದರೆ ಬರೇ ಹೆಸರಿಗಷ್ಟೇ ಮುಸ್ಲಿಂ. ಧಾರ್ಮಿಕ ತತ್ವ ಸಿದ್ಧಾಂತಗಳನ್ನು ತನ್ನ ಜೀವನದಲ್ಲಿ ಅಳವಡಿಸದೆ ಸಮಾಜದಲ್ಲಿ ಖಳನಾಗುವವನು' ಎಂದು. ಈಗ ಮತ್ತೊಮ್ಮೆ ನನ್ನ ಮೇಲಿನ ಕಾಮೆಂಟನ್ನು ಓದಿಕೊಳ್ಳಿ. ಬಹುಶ್ಯಹಾ ಅರ್ಥವಾಗಬಹುದು.

  ನಿಮ್ಮ ಕೊನೆಯ ಮಾತು 'ಕೋಮು ಸಾಮರಸ್ಯ ಕದಡುವ ಪ್ರಯತ್ನ ಮಾಡಲಾರೆ.. ಯಾಕೆಂದರೆ ನಾನು 'ಮುಸ್ಲಿಂ'ಮನಲ್ಲ !' ಅನ್ನುವ ಮಾತು ಹಾಸ್ಯಾಸ್ಪದವಾಗಿದೆ. ಬರೇ ಒಂದೇ ಕೈಯಿಂದ ಚಪ್ಪಾಳೆ ಶಬ್ಧ ಬರುವುದು ಅನ್ನುತ್ತಿದ್ದೀರಿ.

  ReplyDelete
 6. ಹಿಂದೂಗಳು ತಮ್ಮ ಮೇಲಿನ ಧಾಳಿಗೆ ಪ್ರತಿರೋಧ ಒಡ್ಡಿದ, ಪ್ರತಿ ಧಾಳಿ ಮಾಡಿದ ನಿದರ್ಶನಗಳಿವೆಯೇ ಹೊರತು ತಾನಾಗಿಯೇ ಮುಸ್ಲಿಮರ ಮೇಲೆ ಧಾಳಿ ಮಾಡಿ ಕೋಮು ಸಂಘರ್ಷದ ಕಿಡಿ ಹತ್ತಿಸಿದ ನಿದರ್ಶನಗಳಿಲ್ಲ.! ನಿಮ್ಮ ಕೊನೆಯ ಮಾತುಗಳು ನಗು ತರಿಸುವಂತಿದೆ. ಚಪ್ಪಾಳೆ ಒಂದೇ ಕೈಯಿಂದ ಬರುವುದಿಲ್ಲ ನಿಜ.. ಆದರೆ ಚಪ್ಪಾಳೆ ಕೊಡಲು ಮೊದಲು ಯಾವ ಕೈ ಮುಂದೆ ಬರುತ್ತದೆ ಅನ್ನೋದೇ ಇಲ್ಲಿ ಚರ್ಚಾವಿಷಯ.. ಹಿಂದುಗಳೊಂದಿಗೆ ಸಾಮರಸ್ಯದಿಂದ ಬದುಕಿದರೆ 'ಸ್ನೇಹಕ್ಕು ಬದ್ಧ', ಕಾಲು ಕೆರೆದು ಧಾಳಿ ಮಾಡುವ ಪ್ರಯತ್ನಗಳಾದರೆ 'ಸಮರಕ್ಕೂ ಸಿದ್ಧ' ಎಂಬಂತೆ ಬದುಕುವವರು ಹಿಂದೂಗಳು! ಸಹನೆ ನಮ್ಮ ಧರ್ಮ ಭೋಧೆ ಹಾಗೆಯೇ ನಿನ್ನ ಮೇಲೆ ಧಾಳಿ ಮಾಡುವ ದುಷ್ಟರ ಬಿಡಬೇಡ (ದುಷ್ಟ ಶಿಕ್ಷಣ) ಎಂಬುದೂ ಧರ್ಮ ಭೋಧೆ.. ಹಾಗಾಗಿ ನಾವು ಮೊದಲು ಸಹನೆಯನ್ನು ಪಾಲಿಸುತ್ತೇವೆ, ಸಹನೆಯ ಕಟ್ಟೆಯೊಡೆದ ಮೇಲಷ್ಟೇ ದುಷ್ಟರ ಶಿಕ್ಷಣ.!

  ಧನ್ಯವಾದಗಳೊಂದಿಗೆ,
  ಅಶ್ವಿನ್ ಎಸ್.ಅಮೀನ್

  ReplyDelete
 7. JAI HIND....WAKE UP BHARATH...

  ReplyDelete
 8. Superb article bro..:) Hindu sahodariyarige Love Jihad'na shadyanthra ariyalu idu athi upayukthavada lekhana. Abhinandanegalu..:)

  ReplyDelete
 9. ಈ ಮುಸ್ಲಿಂ ಸಹೋದರರ ಕಾಮೆಂಟ್ ಗಳು ಕಿವಿಗಿಂಪು..!! ಮನಸ್ಸಿಗೆ ಮುದ ನೀಡುವಂತಿವೆ..!!
  ಆದರೇನು ..!!??

  ಇಸ್ಲಾಂ ಅವರು ಹೇಳುವಂತೆ ಇಲ್ಲವಲ್ಲಾ..!!
  ಭಾರತದಲ್ಲಿ ಹಿಂದುಗಲೊಡನೆ, ನೈಜೀರಿಯ, ಇಂಡೋನೇಷಿಯಗಳಲ್ಲಿ ಕ್ರೈಸ್ಥರೊಡನೆ, ಮಯನ್ಮಾರ್ ನಲ್ಲಿ ಬೌದ್ಧ ರೊಡನೆ ಕೋಮು ಸಂಘರ್ಷ ನಡೆಸುತ್ತಿರುವುದು ಇದೇ ಈಸ್ಲಾಮ್..!!
  ಈಸ್ಲಾಮ್ ಎಂದರೆ ಶಾಂತಿ., ಹೆಸರಿಗಷ್ಟೇ ಸೀಮಿತ..!!

  ಇಸ್ಲಾಂ ಇರುವಲ್ಲಿ ಶಾಂತಿ ದುರ್ಬೀನು ಹಾಕಿ ಹುಡುಕಿದರೂ ಸಿಗದು (ಶಿಯಾ, ತುರ್ಕಿಗಳನ್ನು ಬಿಟ್ಟು)..!!

  ಯೂರೋಪ್ ನಲ್ಲಿ ಅತೀ ಹೆಚ್ಚು ಮುಸ್ಲಿಮರಿರುವ ದೇಶ ಫ್ರಾನ್ಸ್. ಅಲ್ಲಿನ ಆಡಳಿತ ಮುಸ್ಲಿಂರಿಂದ ಎಷ್ಟು ರೋಸಿ ಹೋಗಿದೆ ಎಂದರೆ ಆ ದೇಶದಲ್ಲಿ ಬುರ್ಖಾ ಧರಿಸುವಂತಿಲ್ಲ., ನಮಾಜ್ ಕದ್ದು ಮುಚ್ಚಿ ಮಾಡಬೇಕು..!! ಇಲ್ಲಾಂದ್ರೆ ಜೈಲು..!!

  ಇಸ್ಲಾಂನಲ್ಲಿರುವ ಭಯೋತ್ಪಾದನಾ ಸಂಘಟನೆಗಳಿಗೆ ಲೆಕ್ಕವೇ ಇಲ್ಲಾ..!!
  ಇಂತಹ ಕನಿಷ್ಟ ನೂರು ಉದಾಹರಣೆಗಳನ್ನು ಕೊಡಬಲ್ಲೆ..!!

  ಇದಕ್ಕೆ ಏನು ಹೇಳುತ್ತೀರಿ..!!??

  ReplyDelete