Tuesday, February 1, 2011

ರಶ್ಮಿ

ವಸಂತಕಾಲದ ತಣ್ಣನೆ ಮುಂಜಾವಲಿ ಭೂಮಿಗೆ ಬಿದ್ದ ಮಂಜೇನು ನೀ
ಜಲಧಾರೆಯ ಸುತ್ತ ಚಿಲಿಪಿಲಿಗುಟ್ಟುವ ಹಿಂಡುಹಕ್ಕಿಗಳ ಕಲರವವೇ ನೀ

ತಾಯಮಡಿಲಲಿ ಕಾಲಲೊದೆಯುವ ಹಸುಗಂದನ ನಗುವೇ ನೀ
ನೀನಾಗಿ ಹೇಳಲೇಕೆ ಸಂಕೋಚ, ನನ್ನ ವರ್ಣನೆಯೇ ಬೇಕೇನು..?

ಪ್ರತಿ ಸಂತೋಷವು, ಪ್ರತಿ ಸೌಂದರ್ಯವು ನೀನಾಗಿ ಕಾಣುತಿಹುದು
ಭ್ರಮೆಯೇನು.... ತಿಳಿಯೆ ನಾ.... ಹೇಳಬಾರದೆ ನೀನು

ಇರುಳುಗವಿದ, ಮಂಜು ಮುಸುಕಿದ, ಕಗ್ಗತ್ತಲ ಈ ಬಾಳಲಿ
ಬೆಳಕಾಗಿ ಬಂದ ಸೂರ್ಯ ರಶ್ಮಿ ನೀನೆ ಏನು....

No comments:

Post a Comment