ಗುಂಗುರು ಕೂದಲು ಅವಳದಲ್ಲ ಬಳುಕೋ ದೇಹವು ಅವಳಿಗಿಲ್ಲ ನೀಲಿ ಕಣ್ಗಳ ಚೆಲುವೆಯಲ್ಲ ನೀಳ ನಾಸಿಕದ ಒಡತಿಯಲ್ಲ ಆದರೂ ಅವಳು ನನಗಿಷ್ಟ ಆವಳು ನನ್ನುಸಿರು ನನ್ನ ಪ್ರಾಣ ಮೈ ಬಣ್ಣ ಹಾಲಿನದಲ್ಲ ಮಾತಲಿ ಮುತ್ತು ಉದುರುವುದಿಲ್ಲ ನಗುವಲಿ ಹುಣ್ಣಿಮೆ ಅರಳುವುದಿಲ್ಲ ಸ್ವರದಲಿ ಸರಿಗಮ ಕೇಳುವುದಿಲ್ಲ ಆದರೂ ಅವಳು ನನಗಿಷ್ಟ ಅವಳು ನನ್ನುಸಿರು ನನ್ನ ಪ್ರಾಣ
No comments:
Post a Comment