Sunday, February 5, 2012

ದ್ವಾರಕನಾಥ್ ರವರೆ, ನಿಮಗೆ 'ಕೇಸರಿ' ಎಂಬ ಕಲರ್ ಕೋಡ್ ಕೊಟ್ಟವರಾರು..

(ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಅವರಿಗೊಂದು ಬಹಿರಂಗ ಪತ್ರ.)

ದ್ವಾರಕನಾಥ್ ಅವರೇ, ನೀವು ಇತ್ತೀಚಿಗೆ ಪ್ರಜಾವಾಣಿಯಲ್ಲಿ ಬರೆದ 'ಪ್ರಾಥಮಿಕ ಪಠ್ಯದಲ್ಲಿ ಕೇಸರೀಕರಣದ ಸ್ಯಾಂಪಲ್' ಎಂಬ ಲೇಖನದ ಬಗ್ಗೆ ಹಲವು ಸಂದೇಹಗಳಿರುವುದರಿಂದ ಈ ಪ್ರತಿಕ್ರಿಯೆಯನ್ನು ನೀಡಲಿಚ್ಚಿಸುತ್ತೇನೆ. 

ಮೊದಲನೆಯದಾಗಿ ನೀವು ಅರ್ಥೈಸಿಕೊಂಡಂತೆ 'ಕೇಸರೀಕರಣ' ಎಂದರೇನು ಎಂದು ತಿಳಿಯಬಯಸುತ್ತೇನೆ. ಭಾರತದ ಮೂಲ ಇತಿಹಾಸವನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು, ಪ್ರಾಚೀನ ಭಾರತದ ಜನರ ಜೀವನ ವಿಧಾನಗಳನ್ನು, ಅವರು ಆಚರಿಸಿಕೊಂಡು ಬರುತ್ತಿದ್ದ ವಿವಿಧ ಆಚರಣೆಗಳನ್ನು ಯಥಾವತ್ತಾಗಿ ತಿಳಿಸಿಕೊಡುವುದು ಕೇಸರೀಕರಣವಾಗುತ್ತದೆಯೇ?.. ಇಷ್ಟಕ್ಕೂ ನಿಮಗೆ ಈ 'ಕೇಸರಿ' ಎಂಬ ಕಲರ್ ಕೋಡ್ ಕೊಟ್ಟವರು ಯಾರು?... ಹಾಗಿದ್ದಲ್ಲಿ ಹಿಂದಿನ ಪಠ್ಯಪುಸ್ತಕಗಳಲ್ಲಿ ಇದ್ದಂತೆ ಭಾರತದ ಮೇಲೆ ಹಲವು ಬಾರಿ ಧಾಳಿ ಮಾಡಿ ಇಲ್ಲಿನ ಹಲವು ವೈಭವೋಪೇತ ದೇಗುಲಗಳನ್ನು ನಾಶ ಮಾಡಿ, ಸಂಪತ್ತನ್ನು ಲೂಟಿಗೈದ ಮಹಮ್ಮದ್ ಗಜಿನಿ, ಮಹಮ್ಮದ್ ಘೋರಿ ಮುಂತಾದ ಲೂಟಿಕೋರರ ವರ್ಣನೆ.. ಭಾರತದ ಮೇಲೆ ದಂಡೆತ್ತಿ ಬಂದ ಅಲೆಕ್ಸಾಂಡರನನ್ನು ಸೋಲಿಸಿ ಓಡಿಸಿದ 'ಭಾರತೀಯ' ದೊರೆ 'ಪೌರವ'ನನ್ನು ವರ್ಣಿಸದೇ ಅಲೆಕ್ಸಾಂಡರನನ್ನು ವರ್ಣಿಸಿರುವುದು.. ಸ್ವಾತಂತ್ರ ಹೋರಾಟದ ಪಾಠಗಳಲ್ಲಿ ಆಜಾದ್, ಸಾವರ್ಕರ್, ನೇತಾಜಿ, ಭಗತ್ ಸಿಂಗ್, ಲಾಲ ಲಜಪತ್ ರಾಯ್ ಯಂತವರನ್ನು ನಾಲ್ಕೈದು ಸಾಲುಗಳಿಗೆ ಸೀಮಿತಗೊಳಿಸಿ ಗಾಂಧೀ-ನೆಹರೂ ಮುಂತಾದ ಕಾಂಗ್ರೆಸ್ಸ್ ನಾಯಕರುಗಳ ಬಗ್ಗೆ ಪುಟಗಟ್ಟಲೆ ಬರೆಯುವುದು.. ಮೌಲಾನ ಅಬ್ದುಲ್ ಕಲಾಮ್ ಅಜಾದರಂತಹ ಗಾಂಧಿಯ ಹಿಂಬಾಲಕರ ಬಗ್ಗೆ ಪಾಠಗಳನ್ನು ಸೃಷ್ಟಿಸಿ, ಅಶ್ಫಾಕುಲ್ಲ ಖಾನ್ ನಂತಹ ಕ್ರಾಂತಿಕಾರಿ ದೇಶಪ್ರೇಮಿಯನ್ನು ಕಡೆಗಣಿಸಿರುವುದು.. ಶಿವಾಜಿ ರಾಜ್ಯ ಕಟ್ಟಿದ ರೀತಿ, ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಅವನು ಪಟ್ಟ ಶ್ರಮದ ಬಗ್ಗೆ ಪಾಠಗಳನ್ನು ರಚಿಸದೇ ಧರ್ಮಾಂಧ ಔರಂಗಜೇಬ, ಟಿಪ್ಪು ಸುಲ್ತಾನ್ ನನ್ನು ಪಠ್ಯದಲ್ಲಿ ವರ್ಣಿಸಿ ಸೇರಿಸಿರುವುದು .. ಇವೆಲ್ಲ ನಿಮಗೆ ಸರಿ ಕಂಡು ಬರುವುದೇ.. ಒಂದರ್ಥದಲ್ಲಿ ಇವೆಲ್ಲ 'ಹಸಿರೀಕರಣ'ವಾಗದೆ?!!!! ಅದಕ್ಕೇಕೆ ನೀವು 'ಹಸಿರು' ಎಂಬ ಕಲರ್ ಕೋಡ್ ಕೊಡುವುದಿಲ್ಲ.? ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಬರೆದರೆ ಅದು ನಿಮಗೆ ಒಪ್ಪಿಗೆಯಾಗುತ್ತದೆ. ಅದೇ ಭಾರತದ ನಿಜವಾದ ಇತಿಹಾಸವನ್ನು ಮಕ್ಕಳಿಗೆ ತೆರೆದಿಟ್ಟರೆ ಅದು ಹೇಗೆ ಕೆಸರೀಕರಣವಾಗುತ್ತದೆ?

ಹೈದರಾಲಿಯನ್ನು ಶತ್ರುವೆಂದು ಬಿಂಬಿಸಲಾಗಿದೆ ಎಂದಿರುವ ನೀವು ಅದು ಹೈದರಾಲಿಯ ಬಗೆಗಿನ ಪಾಠವೋ ಅಥವಾ ರಾಣಿ ಚೆನ್ನಮ್ಮನ ಬಗೆಗಿನ ಪಾಠವೋ ಎಂಬುದನ್ನು ಸ್ಪಷ್ಟಪಡಿಸಿ. ನನಗೆ ಗೊತ್ತಿರುವಂತೆ ಅದು ರಾಣಿ ಚೆನ್ನಮ್ಮನ ಕುರಿತ ಪಾಠವಾಗಿರುವುದರಿಂದ ಅವಳ ವಿರುದ್ಧ ಯುದ್ಧ ಮಾಡಿ ಸೋತ ಹೈದರಾಲಿ 'ಶತ್ರು'ವೇ ಆಗುತ್ತಾನೆ ಹೊರತು ಮಿತ್ರನಾಗುವುದಿಲ್ಲ. ಒಂದು ಕಲ್ಪನೆಯ ಉದಾಹರಣೆ ಕೊಡುವುದಾದರೆ ಒಂದು ವೇಳೆ ಆ ಕಾಲಕ್ಕೆ ಚೆನ್ನಮ್ಮ ಹಾಗು ನನ್ನ ನಡುವೆ ಯುದ್ದವಾಗಿದ್ದರೆ, ಆ ಘಟನೆಯನ್ನು ಚೆನ್ನಮ್ಮ ಕುರಿತ ಪಠ್ಯದಲ್ಲಿ ಅಳವಡಿಸುವಾಗ ನನ್ನನ್ನು 'ಶತ್ರು' ಎಂದೇ ಸಂಭೋಧಿಸಲಾಗುತ್ತಿತ್ತು. ಅದರಲ್ಲಿ ಎದುರಾಳಿ ಮುಸ್ಲಿಂಮನೋ, ಹಿಂದುವೋ ಎಂಬ ಪ್ರಶ್ನೆ ಬರುವುದಿಲ್ಲ. ಇನ್ನು ಚೆನ್ನಮ್ಮನ ಕುರಿತ ವಿಸ್ಕ್ರುತವಾದ ಪಾಠದಲ್ಲಿ 'ಮಂಗಳೂರಿನ ಇಗರ್ಜಿಯೊಂದು ರಾಣಿ ಚೆನ್ನಮ್ಮಾಜಿ ದಾನವಿತ್ತ ನಿವೇಶನದಲ್ಲಿದೆ' ಎಂಬುದು ಅನಗತ್ಯ ಎನಿಸುವುದಿಲ್ಲ. ಅದಕ್ಕೆ ಸಾಕ್ಷ್ಯವಿಲ್ಲ, ಅದು ಸುಳ್ಳು ಎಂಬುವುದಾದರೆ ಮಾತ್ರ ಅದು ಅನಗತ್ಯವಾಗುತ್ತಿತ್ತು. ಅದು ಸತ್ಯವಾದ ಕಾರಣ ನಿಮಗೆ 'ಅನಗತ್ಯ'ವಾಗಿ ಕಂಡು ಬಂದಿದೆ. ಯಾಕೆಂದರೆ ನಿಮಗೆ 'ಸುಳ್ಳಿನ ಇತಿಹಾಸ'ವೇ ಇಷ್ಟವೆನಿಸಿರಬೇಕು.

ಈ ಹಿಂದೆ 
ಪಠ್ಯಗಳಲ್ಲಿ ರಾಮ-ರಹೀಮ ಎಂಬ ಹೆಸರುಗಳನ್ನೂ ಬಳಸಲಾಗುತ್ತಿತ್ತು ಆದರೆ ಈಗಿನ 'ಕುಟುಂಬ, ಸಮುದಾಯ ಮತ್ತು ಸಮಾಜ' ಎಂಬ ಪಾಠದಲ್ಲಿ ಕೇವಲ ಹಿಂದೂ ಕುಟುಂಬವನ್ನಷ್ಟೇ ವಿವರಿಸಲಾಗಿದೆ ಎಂದಿದ್ದೀರಿ. ಅಂದರೆ ನಿಮ್ಮ ಮಾತಿನ ಅರ್ಥ ರಾಮನ ಜತೆ ರಹೀಮನನ್ನೂ ಸೇರಿಸಬೇಕು ಎಂದು. ಆದರೆ ಭಾರತದಲ್ಲಿ ರಾಮ ರಹೀಮ ಒಂದೇ ಕುಟುಂಬದಲ್ಲಿ ಇರುವುದನ್ನು ಎಲ್ಲಾದರೂ ಕಂಡಿದ್ದೀರಾ? ಅಲ್ಲದೆ 'ಕುಟುಂಬ, ಸಮುದಾಯ ಮತ್ತು ಸಮಾಜ' ಎಂಬ ಪಾಠದಲ್ಲಿ ಬಹು ಸಂಖ್ಯಾತ ಸಮುದಾಯದ ಕುಟುಂಬವನ್ನು ವಿವರಿಸದೆ ಅಲ್ಪಸಂಖ್ಯಾತ ಸಮುದಾಯದ ಕುಟುಂಬವನ್ನು ವಿವರಿಸಲಾಗುವುದೇ?

ಇನ್ನು ಪುಟ ೬೭ ರ ಮರು ಮತಾಂತರದ ಬಗ್ಗೆ. 'ಮತಾಂತರವೆಂದರೆ ರಾಷ್ಟ್ರಾಂತರ' ಎಂದು ಸಾವರ್ಕರರು ಬಹಳ ಹಿಂದೆಯೇ ಹೇಳಿದ್ದರು. ಇತ್ತೀಚಿಗೆ ಇಂಡೋನೇಷಿಯ ಧರ್ಮದ ಆಧಾರದ ಮೇಲೆ ವಿಭಜನೆ ಹೊಂದಿದ್ದನ್ನು ನೀವು ಮರೆತಿರಲಾರಿರಿ. ಹಾಗಿರುವಾಗ ಪುಟ ೬೭ ರಲ್ಲಿ ಮರು ಮತಾಂತರವನ್ನು ದೇಶಪ್ರೇಮವೆಂದು ಹೇಳಿರುವುದು ಸರಿಯಾಗಿಯೇ ಇದೆ ಅಲ್ಲವೇ?

ಇನ್ನು'ವೇದಕಾಲದ ಭಾರತ' ಎಂಬ ಪಾಠದಲ್ಲಿ ವೇದಗಳು ಹಾಗು ವೈದಿಕ ಆಚರಣೆಗಳ ಬಗ್ಗೆ ಬರೆಯದೆ ನಮ್ಮ-ನಿಮ್ಮ ಬಗ್ಗೆ ಬರೆಯಲಾಗುವುದೇ.. ಪಾಠದ ಹೆಸರೇ 'ವೇದಕಾಲದ ಭಾರತ' ಎಂದಿರುವಾಗ ನಿಮ್ಮದೇಕೆ ಕೊಂಕುನುಡಿ ಎಂದು ಅರಿವಾಗಲಿಲ್ಲ.

8 ನೇ ತರಗತಿಯ ಸಮಾಜ ವಿಜ್ಞಾನವನ್ನು ತೆರೆಯುತ್ತಿದ್ದಂತೆ ಆಘಾತವಾಗುತ್ತದೆ ಎಂದಿದ್ದೀರಿ.! ಯಾಕೆ ಅದರಲ್ಲಿ ಯಾವುದಾದರೂ ಚೇಳು, ವಿಷಜಂತುಗಳಿತ್ತೆ?! ಅದರಲ್ಲಿರುವ 'ಅಖಂಡ ಭಾರತ'ದ ನಕ್ಷೆ ನೋಡಿ ನಿಮಗೆ ಆಘಾತವಾಗಿದೆ. ಪ್ರಾಚೀನ ಭಾರತದ ಇತಿಹಾಸ ನೋಡಿದರೆ ನಮ್ಮ ಭಾರತ ಆ ನಕ್ಷೆಯಲ್ಲಿರುವಂತೆಯೇ ಇತ್ತು. ಅದರಲ್ಲೇನೂ ಹೊಸದಿಲ್ಲ. ಹಿಂದಿನ ಭಾರತ ಹೇಗಿತ್ತು ಎಂಬುದನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ ಆ ನಕ್ಷೆಯನ್ನು ಹಾಕಲಾಗಿದೆ. ಅದರಲ್ಲಿರುವ ಪಾಕಿಸ್ತಾನ, ಬಾಂಗ್ಲಾ, ಬರ್ಮಾ, ಬೂತಾನ್, ಜೊತೆಗೆ ಮಹಾಭಾರತ ಕಾಲದ ಗಾಂಧಾರ ದೇಶ (ಈಗಿನ ಅಫ್ಘಾನಿಸ್ತಾನ), ಬ್ರಹ್ಮ ದೇಶ, ಶ್ಯಾಮ ದೇಶ ಗಳು ಪ್ರಾಚೀನ ಭಾರತದ ಅಂಗಗಳೇ.. ಅಲ್ಲಿ ಅಮೇರಿಕ, ಜಪಾನ್, ಜರ್ಮನಿಗಳಿದ್ದರೆ ನಿಮ್ಮ ಆಘಾತಕ್ಕೊಂದು ಅರ್ಥವಿರುತ್ತಿತ್ತು..! 

ಇನ್ನು ಪ್ರಜಾಪ್ರಭುತ್ವ ಎಂಬ ಅಧ್ಯಾಯದಲ್ಲಿ ಕಮ್ಯುನಿಷ್ಟ್ ಸರಕಾರಗಳ ಬಗ್ಗೆ ಹೇಳಿರುವುದು ಸರಿಯಾದುದೇ ಆಗಿದೆ.. ಹಾಗೆಯೇ ದ್ವಿಪಕ್ಷ ವ್ಯವಸ್ಥೆಯ ಬಗ್ಗೆ ಚರ್ಚಿಸಲು ಹೇಳಿರುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ರಾಜಕೀಯ ನಾಯಕರುಗಳು ತಮ್ಮ ಸ್ವಾರ್ಥಕ್ಕಾಗಿ ಹುಟ್ಟು ಹಾಕುವ ಪ್ರಾದೇಶಿಕ ಪಕ್ಷಗಳು ರಾಜಕೀಯ ಅಸ್ಥಿರತೆಯನ್ನು ಉಂಟುಮಾಡುತ್ತದೆ. ದೇಶದ ಅಭಿವೃದ್ದಿಯ ದೃಷ್ಟಿಯಿಂದ ಹಾಗು ಹಲವಾರು ಸಕಾರಾತ್ಮಕ ಅಂಶಗಳ ಕಾರಣದಿಂದ ದ್ವಿಪಕ್ಷ ವ್ಯವಸ್ಥೆ ತುಂಬಾ ಉತ್ತಮವಾದದ್ದು. ಉದಾಹರಣೆಗೆ ಬೇಕಾದರೆ ವಿಶ್ವದ ದೈತ್ಯ 'ಅಮೇರಿಕ' ವನ್ನೇ ತೆಗೆದುಕೊಳ್ಳಿ.  ದ್ವಿಪಕ್ಷ ವ್ಯವಸ್ಥೆಯಲ್ಲಿ ಈ ಮೈತ್ರಿ ಸರಕಾರಗಳ ಜಂಜಾಟ ಇರುವುದಿಲ್ಲ, ಕಚ್ಚಾಟಗಳಿರುವುದಿಲ್ಲ, ಅಭಿವೃದ್ದಿಗೆ ಯಾವುದೇ ತೊಡರುಗಳಿರುವುದಿಲ್ಲ. ಇಂತಹ ಒಂದು ದ್ವಿಪಕ್ಷ ವ್ಯವಸ್ಥೆಯ ಬಗ್ಗೆ ಭಾರತದ ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಅರಿವು ಮೂಡಿಸುವ ಯತ್ನಕ್ಕೆ ನಾವು ಸಂತೋಷಪಡಬೇಕಾಗಿದೆ. ಹಾಗೆಯೇ ಅಲ್ಲಿ ಕೇಳಲಾದ 'ವಂಶಪಾರಂಪರ್ಯದ ಆಡಳಿತವನ್ನು ನೀವು ಇಷ್ಟ ಪಡುತ್ತೀರಾ?' ಎಂಬ ಪ್ರಶ್ನೆಯಲ್ಲಿ ಎಲ್ಲೂ ಕಾಂಗ್ರೆಸ್ ಅನ್ನು ಉಲ್ಲೇಖ ಮಾಡಿಲ್ಲ. ಆದರೆ ಆ ಪ್ರಶ್ನೆ ನೇರವಾಗಿ ಕಾಂಗ್ರೆಸ್ ಅನ್ನು ಉಲ್ಲೇಖಿಸಿದಂತಿದೆ ಎಂದು ನೀವು ಭಾವಿಸಿದರೆ ನೀವು ವಂಶಪಾರಂಪರ್ಯದ ಆಡಳಿತವನ್ನು ಇಷ್ಟಪಡುತ್ತೀರೆಂದಾಯಿತು. 

ಈ ಪಠ್ಯಗಳನ್ನು ಓದಿದರೆ ಮಕ್ಕಳು ಮತೀಯವಾದಿಗಳಾಗುತ್ತಾರೆ ಎಂದಿದ್ದೀರಿ. ಆದರೆ ಅದು ಇಲ್ಲಿರುವ ಯಾವ ಅಂಶಗಳಿಂದ ಎಂದು ತಿಳಿಯಲಿಲ್ಲ. ಯಾಕೆಂದರೆ ಇಲ್ಲಿ ಯಾವುದೇ ಒಂದು ಧರ್ಮದ ನಿಂದನೆಯಾಗಲಿ, ಮತ್ತೊಂದು ಧರ್ಮದ ವೈಭವೋಪೇತ ವರ್ಣನೆಯಾಗಲೀ ಇಲ್ಲ. ಬದಲಾಗಿ ಇಲ್ಲಿ ಭಾರತೀಯ ಸಂಸ್ಕೃತಿಯ ವರ್ಣನೆ ಇದೆ, ಭವ್ಯ ಪರಂಪರೆಯ ಸಾಲುಗಳಿವೆ, ಪ್ರಾಚೀನ ಭಾರತದ ಘಮವಿದೆ, ಸ್ವಾತಂತ್ರ್ಯ ಸಂಗ್ರಾಮದ ನೈಜ್ಯ ಚಿತ್ರಣಗಳಿವೆ. ಒಟ್ಟಾರೆಯಾಗಿ ಮಕ್ಕಳಿಗೆ ಕಲ್ಪನಾರಹಿತವಾದ 'ನೈಜ್ಯ' ಇತಿಹಾಸದ ಭೋಧೆಗಳಿವೆ. ಹಾಗಾಗಿ ಇಲ್ಲಿ ಯಾರೂ ಇದರ ವಿರುದ್ಧ ಎಚ್ಚೆತ್ತುಕೊಳ್ಳಬೇಕಾದ, ಪ್ರತಿಭಟಿಸಬೇಕಾದ ಅಗತ್ಯ ಇಲ್ಲ. ಬದಲಾಗಿ ನಿಮ್ಮ ಮನೋಧರ್ಮದ ವಿರುದ್ಧ ನೀವೇ ಪ್ರತಿಭಟಿಸಿ. ಆಗ ನೀವು 'ಕೇಸರಿ' ಎಂದು ಕರೆಯುತ್ತಿರುವ ಬಣ್ಣವು ಶುಭ್ರವಾಗಿ ಕಂಡು ಬರುವುದು.!

ಕೊನೆ ಕುಟುಕು : ದಯವಿಟ್ಟು 'ಕೇಸರಿ'ಯನ್ನು ಪಾಷಾಣ ಎನ್ನಬೇಡಿ. ಮಕ್ಕಳು ಚಿತ್ರ ಬಿಡಿಸುವಾಗ ಪಾಪ ಹೆದರಿಕೊಂಡು 'ಕೇಸರಿ' ಬಣ್ಣವನ್ನೇ ಬಳಸದಿರಬಹುದು..!


10 comments:

  1. ಮತಾಂತರ ಆಗದವರನ್ನು ಹೆದರಿಸಿ ಮತಾಂತರ ಮಾಡುತಿದ್ದ, ಇಲ್ಲದಿದ್ದರೆ ಕೂಲ್ಲುತಿದ್ದ ಟಿಪ್ಪು ಇವರುಗಳ ಕಣ್ಣಿನಲ್ಲಿ "ಮೈಸೂರು ಹುಲಿ ". ಟಿಪ್ಪು ಯಾವತ್ತು ಕನ್ನಡ ಅಭಿಮಾನಿ ಆಗಿರಲಿಲ್ಲ .. ಆದರೆ ಶ್ರೀಕೃಷ್ಣ ದೇವರಾಯ ನ ಆಸ್ಥಾನ ದಲ್ಲಿ ತೆಲುಗು ಕವಿಗಳು ಇದ್ದಿದ್ದರೂ ಅಂತ ಇತಿಹಾಸವನ್ನು ತಿರುಚಿ ಮಕ್ಕಳಿಗೆ ಶ್ರೀಕೃಷ್ಣ ದೇವರಾಯ ಕನ್ನಡ ವಿರೋದಿ ಅನ್ನೋ ಹಣೆಪಟ್ಟಿ ಕಟ್ಟುತ್ತಾರೆ .. ಟಿಪ್ಪು ಅವನ ರಕ್ಷಣೆ ಗಾಗಿ ಹೋರಾಡಿದ್ದ ವಿನಃ ಭಾರತದ ಸ್ವಾತಂತ್ರ ಕಾಗಿ ಅಲ್ಲ ... ಆದ್ರೆ ಇವರು ಗಳು . ಟಿಪ್ಪುವನ್ನು ಒಬ್ಬ ಮಹಾನ ಸ್ವಾತಂತ್ರ ಹೋರಾಟಗಾರ ಅನ್ನೋ ತರ ಮಕ್ಕಳಿಗೆ ಬೋದಿಸುತಾರೆ ..ಇದೆಲ್ಲ ಇವರುಗಳಿಗೆ ಕಾಣುವದಿಲ್ಲ ... ಮತ್ತೆ ಇತ್ತ್ತಿಚೆಗೆ ಸಂಸ್ಕ್ರತದ ಬಗ್ಗೆ ನ್ಯೂಜಿಲಂಡ್ ಸರ್ಕಾರ ವಿಶೇಷ ಆಸಕ್ತಿ ವಹಿಸಿ ಅಲ್ಲಿನ ಮಕ್ಕಳಿಗೆ ಕಲಿಸಲು ಮುಂದಾಗಿದೆ .. ಅಂಥದೊಂದು ಯೋಜನೆ ಭಾರತದಲ್ಲಿ ತಂದರೆ ಇಂಥ ಬುದ್ದಿಜೀವಿಗಳು ಅಂತ ಕರೆಸಿಕೊಳ್ಳುವವರು ದೇಶವೇ ಮುಳುಗಿ ಹೋಯಿತು ಅನ್ನೋತರ ಆಡ್ತಾರೆ ...

    ReplyDelete
  2. dwarakanath avarige sonia gandhi bagge ondu chapter hogali hogali barediddadre sakkath khushiyagbittu haalu paysa kuditidreno.. ivara janmakkishtu! yakagi bharatadalliddaro intha avivekigalu!

    ReplyDelete
  3. ಅಜಿತ್ ಹಾಗು ಶ್ರೀನಾಥ್, ಸರಿಯಾಗಿ ಹೇಳಿದ್ದೀರಿ, ಅಭಿಪ್ರಾಯಕ್ಕಾಗಿ ಧನ್ಯವಾದಗಳು.. ನಮಗೆ ಇಷ್ಟರವರೆಗೆ ಅದೇ ಸುಳ್ಳು ಇತಿಹಾಸವನ್ನೇ ಕಲಿಸಲಾಗಿದೆ ಎಂದು ತಿಳಿಯುವಾಗ ಮೈ ಉರಿಯದೆ..? ಇನ್ನಾದರೂ ಮಕ್ಕಳು ನೈಜ್ಯ ಇತಿಹಾಸವನ್ನು ತಿಳಿಯುವಂತಾಗಲಿ..

    ReplyDelete
  4. ಮಾನ್ಯ ಇತಿಹಾಸ ಮತ್ತು ಪಟ್ಯ ಸಮಿತಿಯ ಏಕೈಕ ಬುದ್ದಿವಂಥರೆಂದು ಕೊಂಡಿಹ ದ್ವಾರಕನಾಥ ಮಹಾತ್ಮರೇ . ಸದರಿ ಪ್ರಜಾವಾಣಿಯ ಸಚಿವರ ಸಂದರ್ಶನದಲ್ಲಿ ೨ನೇ ಪ್ರಶ್ನೆ "ಹೈದರಾಲಿ ಮುಸ್ಲಿಂ ಎನ್ನುವ ಕಾರಣಕ್ಕಾಗಿ ಶತ್ರುವಿಗೆ ಗೆಲುವಾಯಿತು ಎಂದು ಉಲ್ಲೇಖಿಸಲಾಗಿದೆಯೇ ?" ಅದಕ್ಕೆ ನಮ್ಮ ಉತ್ತರ : ಐದನೆ ತರಗತಿ ಸಮಾಜ ವಿಜ್ಜ್ನಾನದ ೬ನೇ ಪುಟದಲ್ಲಿ ಚೆನ್ನಮ್ಮ ಹೈದರಾಲಿ ನಡುವಿನ ಯುದ್ದದ ಬಗ್ಗೆ ಬರೆಯುತ್ತಾ ಹೈದರಾಲಿ ಗೆಲುವನ್ನು 'ಆದರೂ ಶತ್ರುವಿಗೆ ಗೆಲುವಾಯಿತು' ಎಂದಿರುವ ಬಗ್ಗೆ ಆಕ್ಷೇಪಣೆಯ ಪ್ರಶ್ನೆಯಾಗಿದೆ ಆ ಸಂದರ್ಭದಲ್ಲಿ ಹೈದರಾಲಿಯು ವಿನಾಕಾರಣ ತನ್ನ ಸೋದರಿಯಂತಿದ್ದ ಚೆನ್ನಮ್ಮನ ರಾಜ್ಯದ ಮೇಲೆ ದಾಳಿ ಮಾಡಿದ ದಾಳಿಕೋರನು ಚೆನ್ನಮ್ಮನಿಗೆ ಮತ್ತು ಅ ನಾಡಿನ ಪ್ರಜೆಗಳಿಗೆ ಅವನು ಶತ್ರುವಲ್ಲದೆ ಸೋದರೆನೆದುರು ಸೋತಳೆಂದು ಹೇಳಬೇಕಿತ್ತೆ? ನಿಮ್ಮ ಕನ್ನಡ ಜ್ಗ್ಜಾನಕ್ಕೆ ಏನೆನ್ನಬೇಕು ಹೇಳಿ?.

    ಎರಡನೆಯದಾಗಿ ಕುಟುಂಬ ವ್ಯವಸ್ಥೆಯ ಬಗ್ಗೆ ತಿಳಿಸುವಾಗ ಹಿಂದೂ ಮನೆಯ ವಿವರ ನೀಡುತ್ತಾ ಅ ಕುಟುಂಬದ ಎಲ್ಲ ಸದಸ್ಯರ ಹೆಸರು ಹಿಂದೂ ಹೆಸರಾಗಿವೆ ಎಂದಿರುವ ಬಗೆಗಿನ ಆಕ್ಷೇಪ. "ಅಲ್ಲಾ ಪಂಡಿತರೆ ಒಂದು ಹಿಂದೂ ಮನೆಯಲ್ಲಿ ಹಿಂದೂ ಹೆಸರಿನವರಲ್ಲದೆ ಅನ್ಯರ ಹೆಸರು ಬರಲು ಅವರದು ಬೆರಕೆ ಕುಟುಂಬ ಎಂದು ಹೇಳಬೇಕಿತ್ತೆ ? ಕುಟುಂಬ ವ್ಯವಸ್ಥೆಯನ್ನು ವಿವರಿಸುವಾಗ ಕೂಡು ಕುಟುಂಬವನ್ನು ವಿವರಿಸಿದರೆ ಅದೊಂದು ಸಮಗ್ರ ಚಿತ್ರಣವನ್ನು ನೀಡುವುದೆಂದು ಕೇಂದ್ರೀಯ ಆದಾಯಕರ (ಇಂಕಂ ಟ್ಯಾಕ್ಷ್ ) ಸಂಸ್ಥೆಯೂ ಸೇರಿದಂತೆ ಹಲವಾರು ಸಂಸ್ಥೆಗಳು ಮಾನ್ಯ ಮಾಡಿರುವ ಹಿಂದೂ ಅವಿಭಜಿತ ಕುಟುಂಬದ(HUF) ವಿವರಣೆ ನೀಡಿದ್ದಾರೆ ಬೇರಾರೂ ಈ ಬಗ್ಗೆ ಹೇಳದೆ ಕಲಿಕೆಯಲ್ಲಿ ಮಗ್ನರಾಗಿ ಕೌಟುಂಬಿಕ ಮೌಲ್ಯಗಳನ್ನು ಸಹಬಾಳ್ವೆಯನ್ನೂ ತೆಗೆದು ಕೊಂಡರೆ, ಹಳದಿ ಕಣ್ಣಿನ ನೀವು ಅದನ್ನು ಮತ್ತೊಂದು ರೀತಿ ನೋಡಿ ಹಾಲೆಲ್ಲ ಹಳದಿ ಎಂದರೆ ನಿಮ್ಮ ರೋಗಕ್ಕೆ ಮದ್ದು ನೀವೇ ಮಾಡಿಕೊಳ್ಳಬೇಕಿದೆಯೇ ಹೊರತು ಉಳಿದೆಲ್ಲರ ಮೈ ಪರಚುವುದು ಅಪರಾಧವಾಗುತ್ತದೆ.

    ಸ್ವಾತಂತ್ರ ಪೂರ್ವ ಇತಿಹಾಸ ವಿವರಣೆಯಲ್ಲಿ ಅಖಂಡ ಭಾರತವನ್ನು ತಿಳಿಸುವಾಗ ಅದರ ಚಿತ್ರಣವನ್ನು ನೀಡಿದ್ದು ಅದನ್ನು ಈಗ ಕಿತ್ತೋಗಿರುವ ಭಾರತವನ್ನೇ ನೀಡಬೇಕಿತ್ತೆ ನೀವು ಒಪ್ಪದಿದ್ದರೂ ಅಂದು ಇದ್ದದ್ದು ಅದೇ ಭಾರತ ಸ್ವಾಮಿ, ಬೇಕಿದ್ದರೆ ನಿಮ್ಮವರೇ ಆದ ಅಕ್ಬರನ ಪುಸ್ತಕ ಮತ್ತು ಬ್ರಿಟೀಷರ ಪುಸ್ತಕಗಳಲ್ಲಿ ಮತ್ತೊಮ್ಮೆ ಕಣ್ಣು ತೆರೆದು ನೋಡಿ. ಸತ್ಯ ಇತಿಹಾಸ ತಿಳಿಸುವುದು ಆಕ್ರಮಣತೆಯ ಬೋಧನೆಯೇ? ಜಗತ್ತಿನ ಇತಿಹಾಸಗಳಲ್ಲಿ ಯುದ್ಧಗಳ ಬಗ್ಗೆ ಹೇಳಿರುವುದೆಲ್ಲಾ ಆಕ್ರಮಣಥೆಯನ್ನು ಬೆಳೆಸಲಿಕ್ಕಾಗಿಯೇ ಆಗಿದೆಯೇ? ಯುದ್ಧಗಳನ್ನು ಬಿಟ್ಟು ಇತಿಹಾಸವನ್ನು ಕಟ್ಟು ಕಥೆ ಮಾಡಲು ಅದೇನು ನಿಮ್ಮ ನಮ್ಮ ಸ್ವಂತ ಜೀವನ ಚರಿತ್ರೆಯೇ? ಅಲ್ಲದೆ ನಿಮ್ಮ ಇದೇ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರತಿದಿನ ಕ್ರೈಂ ಸುದ್ದಿಗಳನ್ನು ಪ್ರಕಟಿಸುವುದು ಎಲ್ಲರೂ ಅವನ್ನು ಕಲಿಯಲೆಂದೇ ?

    ಇನ್ನು ಕಾನೂನು ಅರಿವಿನ ಬಗ್ಗೆ ಆಕ್ಷೇಪಣೆ ಮಾಡಿದ್ದೀರಿ ಅದನ್ನು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಶಾಲೆಗಳಲ್ಲಿನ ಕಾರ್ಯಕ್ರಮಗಳಿಗೂ ಮಾಡಿ ಅಲ್ಲಿನ ಮೂಢ ನ್ಯಾಯಾಧೀಶರು ನಿಮ್ಮಷ್ಟು ಬುದ್ದಿವಂತರಲ್ಲ ಎಂದು ಸಾಬೀತು ಮಾಡಬೇಕೆಂದು ಮನವಿ ಮಾಡುತ್ತೇವೆ.

    ಇಡೀ ಭಾರತ ದೇಶದ ಅಭಿಪ್ರಾಯದಂತೆ ಪ್ರಜಾಪ್ರಭುತ್ವ ಉಳಿದೆಲ್ಲಾ ಪ್ರಭುತ್ವಗಳಿಗಿಂತ ಶ್ರೇಷ್ಠ ಎಂಬ ಅಭಿಪ್ರಾಯ ಇರುವುದರಿಂದಲೇ ಅದನ್ನು ಒಪ್ಪಿಕೊಂಡು ಅಪ್ಪಿಕೊಂಡಿರುವ ದೇಶದವರಾಗಿ ಇರುವುದರಿಂದಲೇ ಹಾಗೆ ಹೇಳಿರಬಹುದು, ಇನ್ನು ನಿಮ್ಮ ಅಭಿಪ್ರಾಯ ಬೇರೆ ಇದ್ದರೆ ನಿಮ್ಮ ಲೇಖನ ಇಲ್ಲ ನಿಮ್ಮ ಅಭಿಪ್ರಾಯ ಇರುವ ದೇಶದಲ್ಲಿ ಯಾರೂ ಆಕ್ಷೇಪ ವ್ಯಕ್ತ ಪಡಿಸುವುದಿಲ್ಲ ನೀವು ಅಲ್ಲಿ ಈ ಪ್ರಚಾರ ಮಾಡುವುದು ಒಳಿತು.

    ಧನ್ಯವಾದಗಳೊಂದಿಗೆ

    ರ. ಶಿವಶಂಕರ
    ಅಧ್ಯಕ್ಷರು : ಸಂಸ್ಕೃತಿ ಸೇವಾ ವಾರಿಧಿ (ಸಂಸೇವಾ)

    ReplyDelete
  5. ಅಶ್ವಿನ್ ಅಣ್ಣ.. ಪಕ್ಕಾ ಉತ್ತರ..!!!!
    ತಮ್ಮ ಭ್ರಮೆಗಳನ್ನೇ ಸತ್ಯ ಅಂತ ಅನ್ಕೊಂಡ್ರೆ ಏನ್ ಮಾಡಕ್ಕಾಗುತ್ತೆ..
    ಅವರ "ಅಜ್ಞಾನ"ಕ್ಕೆ ನನ್ನದೊಂದು ಮರುಕವಿದೆ..

    ReplyDelete
    Replies
    1. ಧನ್ಯವಾದಗಳು ಭೀಮಸೇನ್ ಜಿ..

      Delete
  6. ಟಿಪ್ಪು ತನ್ನ ಆಡಳಿತ ಅವಧಿಯಲ್ಲಿ ಎಷ್ಟೋ ಗ್ರಾಮಗಳ ಹೆಸರುಗಳು,ಹಿಂದೂ ಹೆಸರಿನಲ್ಲಿದ್ದವು,ಅವುಗಳನ್ನು ಮುಸ್ಲಿಂ ಹೆಸರನ್ನಿಟ್ಟು ಬದಲಾಯಿಸಿದ್ದಾನೆ... ಮಂಜರಬಾದ್,ನಜರಬಾದ್,ಯುಸುಫಾಬಾದ್... ಹೀಗೆ...
    ಅಶ್ವಿನ್ ನಿಮ್ಮ ಅಭಿಪ್ರಾಯಕ್ಕೆ ನನ್ನ ಅಭಿಮತ ಇದೆ ...

    ReplyDelete
  7. ಪುಣ್ಯಾತ್ಮ ದ್ವಾರಕನಾಥ..!!

    ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದಾಗ ಆ ಹುದ್ದೆಗೊಂದು ನ್ಯಾಯ ಒದಗಿಸಲು ಅವನಿಂದ ಆಗಿರಲಿಲ್ಲ..!!

    ಹಿಂದುಳಿದ ವರ್ಗಗಳೆಂದರೆ SC-ST ಮತ್ತು ಸಿದ್ಧರಾಮಯ್ಯನ ಅ-ಹಿಂದೂ ಕಾರ್ಯಕರ್ತರಷ್ಟೇ ಎಂದುಕೊಂಡವ..!! ಮೇಲ್ವರ್ಗದವರ ಮೇಲೆ ಸದಾ ಕಿಡಿ ಕಾರುತ್ತಾ ರಾಜಕೀಯ ಮಾಡಿಕೊಂಡು ತನಗೆ ಈ ಹುದ್ದೆ ದಯಪಾಲಿಸಿದ ಕಾಂಗ್ರೆಸ್ಸಿನ ಮನೆ ಕಾಯುತ್ತಿದ್ದ (ಅ)ನಿಷ್ಟಾವಂಥ (ದ್ವಾರ-ಕ-ನಾಥ..!!)..!!

    ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಡಿಯಲ್ಲಿ ಕೇವಲ SC-STಗಳಲ್ಲದೆ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಸೇರಿದಂತೆ ಎಲ್ಲಾ ಸಮುದಾಯಗಳ ಆರ್ಥಿಕವಾಗಿ ಹಿಂದುಳಿದ ಜನ ಬರುತ್ತಾರೆ. ನಿಜ ಹೇಳಬೇಕೆಂದರೆ ಇದು SC-ST ಗಳಿಗೆ ಮಾತ್ರ ಇರುವುದಲ್ಲ.!!

    SC-ST ಗಳಿಗೆ ಪ್ರತ್ಯೇಕವಾಗಿ ಸಮಾಜ ಕಲ್ಯಾಣ ಇಲಾಖೆಯೇ ಇದೆ. ಈ ಸಮುದಾಯಗಳನ್ನು ಬಿಟ್ಟು ಇತರ ಆರ್ಥಿಕವಾಗಿ ಹಿಂದುಳಿದ ಜಾತಿಗಳ ಅಭಿವೃದ್ಧಿಗಾಗಿ ಇರುವುದೇ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಆಯೋಗ..

    ಪುಣ್ಯಾತ್ಮ ದ್ವಾರಕನಾಥನಿಗೆ ಇವೆಲ್ಲ ಗೊತ್ತೆ ಇರಲಿಲ್ಲ..!! ಮಾತೆತ್ತಿದರೆ ಕೋಮುವಾದ-ಜಾತ್ಯತೀತತೆ ಎನ್ನುತ್ತಿದ್ದ..!! ಯಾವ So-Called ಬುದ್ಧಿ ಜೀವಿಗೂ ಕಡಿಮೆ ಇಲ್ಲದಂತೆ ವರ್ತಿಸುತ್ತಿದ್ದ ..!!

    ReplyDelete
  8. ಸಾಕ್ಷಿ ಪ್ರಜ್ಞೆ, ದಲಿತ ಪರ, ಅಲ್ಪಸಂಖ್ಯಾತ ಸ೦ವೇದನೆ, ಪ್ರಗತಿಪರ, ಜಾತ್ಯತೀತ ಇತ್ಯಾದಿಗಳೊಳಗೆ ಗುರ್ತಿಸಿಕೊಳ್ಳಲು ಇತ್ತೀಚೆಗೆ ಭಾರೀ ಪೈಪೋಟಿ ನಡೆಯುತ್ತಿರುವುದು ಸಾಮಾನ್ಯ ಎಲ್ಲರೂ ಗಮನಿಸಿರಬಹುದು. ಕಳೆದ ಚುನಾವಣೆಯ ಸಮಯದಲ್ಲಂತೂ ಕನ್ನಡದ ೨ ಮುಖ್ಯ ಪತ್ರಿಕೆಗಳು (ಬಹುಶ ಇತರವುಗಳೂ ಇರಬಹುದು, ನಾನು ಓದಿದ ಪೈಕಿ ಇವೆರಡು) ಹೆಚ್ಚು ಕಮ್ಮಿ ಕಾಂಗ್ರೆಸ್ ಮುಖವಾಣಿಗಳಾಗಿ ಬದಲಾಗಿದ್ದವು. ದಿಲ್ಲಿಯಿಂದ ಒಬ್ಬರು ಡೈರಿ ಬರೆದು ಕರ್ನಾಟಕಕ್ಕೇ ಯಾಕೆ ಸಿದ್ದು/ಖರ್ಗೆ ಮುಂಅ. ಆಗಬೇಕೆಂದು ವಾರ ವಾರ ಅಪ್ಪಣಿಸುತ್ತಿದ್ದರು. ಇತ್ಲಾಗಿ ವಾರ ವಾರ ಅನಾವರಣಗೊಳ್ಳುತ್ತಿದ ಇನ್ನೊಬ್ಬರು ಕರ್ನಾಟಕ ಚುನಾವಣೆಗೆ ಸಂಬಂಧವೇ ಇಲ್ಲದ ನರೇಂದ್ರ ಮೋದಿ ಯಾ ಬಗೆಗ್ ಇಲಾಲ್ದ್ಸಲ್ಲದ್ದು ಬರೆಯುವುದು ಸುಖಾ ಸುಮಮ್ನೆ ಜಾತಿ ಸಂಖೆ ವಿಶ್ಲೇಷಣೆ ಇತ್ಯಾದಿ ಮಾಡಿದರು. ಸಂಘ ಪರಿವಾರದವರಿಂದಾಗಿ ಹಿಂದೂ ಹುಡುಗಿಯರಿಗೆ ಮಿಡಿ ಧರಿಸಿ ಒಡಾಡಲಾಗುತ್ತಿಲ್ಲವೆಂದೂ ಅವರ ಮುಸಲ್ಮಾನ ಸಹಪಾಟಿಗಳ ಜೊತೆ ತಿರುಗಾಡುವುದು ಕಷ್ಟವಾಗಿದೆಎಂದೂ ಮನ ಮಿಡಿದು ಮರುಗಿದರು. ಅವರಿಗಂತೂ ಕ್ಯಾಬಿನೆಟ್ ಸಚಿವ ಸ್ಥಾನ ಮಾನ ಸಿಕ್ಕಿತು.. ಉಳಿದವರು ಬಹುಶ ತಮಗೆ ಸಿಗಲಿರುವ ಬಹುಮಾನಗಳ ಬಹ್ಹೆ ಮನದಲ್ಲಿ ನೆನೆನೆನೆದು ಸುಖಿಸುತ್ತಿದ್ದಾರೋ ಎನೋ..

    ಈ ಪಟ್ಯ ಕೇಸರೀಕರಣದ ಬೊಬ್ಬೆಯೂ ಅಷ್ಟೆ.. ಶತಾಯ ಗತಾಯ ಮಹಾಮತೆಯ ಕೃಪೆಗೆ ಪಾತ್ರರಾಗಿ ಸಿಗುವ ಪ್ರತಿಫಲ ಮೊಗೆದುಕೊಳ್ಳುವ ಉದ್ದೇಶ ಬಿಟ್ಟು ಬೇರೆ ಏನೂ ಇಲ್ಲವೆಂಬ ಸಂದೇಹ ನನಗೆ..

    ReplyDelete