Sunday, May 22, 2011

ಕನವರಿಸದಿರು ಎನ್ನ..

ಅನುರಾಗದ ಅನುಬಂಧಕೆ ನಾನಲ್ಲ ನಲ್ಲನು 
ಅಳಿಸಿ ಬಿಡು ಎನ್ನ ನಿನ್ನ ಮನದಿಂದ..

ನಿನ್ನೊಲವು ಎನಗಲ್ಲ ಆ ಭಾಗ್ಯ ನನಗಿಲ್ಲ
ಕನವರಿಸದಿರು ಎನ್ನ ನೀ ಪ್ರತಿದಿನ..

ಕೈಗೂಡದ ನಿನ್ನೊಲವ ಹಿಸುಕಿ ಕೊಂದು ಬಿಡು
ವಿರಹದಿ ಒಲವು ಅಸುನೀಗೋ ಮುನ್ನ..

ನಲುಗದ ಮಲ್ಲಿಗೆಗೆ ಮುಳ್ಳಿನ ಸಂಗವೇಕೆ
ನೀ ನಲಿಯುತಿರು ಎಂದೂ ನಲುಗದಂತೆ..

ಮರುಗಿ ಬೆರಗಾಗೋ ಮುನ್ನ ಕರಗಿಸು ನಿನ್ನೊಲವ 
ಮುಂದೊಮ್ಮೆ ಹೃದಯ ಭಾರವೆನಿಸದಂತೆ..

ಹಗಲ ಬಾವಿಗೆ ಇರುಳು ಬೀಳುವ ಹಾಗೆ
ಕುರುಡಾಗದಿರು ಇದು ಕುರುಡು ಪ್ರೀತಿಯು..

3 comments:

  1. ನೋವು ಹೀಗೂ ವ್ಯಕ್ತ ಪಡಿಸಬಹುದು ಎಂದು ತೋರಿಸಿದ್ದೀರ.. ಉತ್ತಮ ಪದ ಜೋಡಣೆ.. ಇಷ್ಟ ಆಯಿತು..

    ReplyDelete
  2. ಪ್ರೀತಿಯಲ್ಲಿ ಇಂತಹ ವಿಶಿಷ್ಟವಾದ ರಚನೆಗಳು ಮನಸ್ಸೆಳೆಯುತ್ತವೆ.. ಅವ್ಯಕ್ತವಾದ ಮನಸ್ಸಿನ ದುಗುಡ ಅಸ್ಪಷ್ಟ ರೀತಿಯಲ್ಲಿ ವ್ಯಕ್ತವಾದ ಬಗೆ ಹಿಡಿಸಿತು.. ಮತ್ತೆ ನನ್ನ ಮನಸ್ಸನ್ನು ನಿನ್ನ ಪ್ರೀತಿಯೆಡೆಗೆ ಸೆಳೆದು ಮನಸ್ಸು ಮತ್ತೊಮ್ಮೆ ಈ ವಿರಹದ ಬೇಗೆಯಲ್ಲಿ ಬೀಳುವಂತೆ ಮಾಡಬೇಡ ಎಂಬ ಮಾರ್ಮಿಕ ಅಭಿವ್ಯಕ್ತಿಗಳು ಮನಸ್ಸನ್ನು ಗೆಲ್ಲುತ್ತವೆ.. ಚೆನ್ನಾಗಿದೆ ಕವಿತೆ..

    ReplyDelete
  3. ನಲುಗದ ಮಲ್ಲಿಗೆಗೆ ಮುಳ್ಳಿನ ಸಂಗವೇಕೆ
    ನೀ ನಲಿಯುತಿರು ಎಂದೂ ನಲುಗದಂತೆ............ಸುಂದರ ಕವಿತೆ.ಪದಗಳು ಇಂಪಾಗಿ ಬಿಂಬಿತಗೊಂಡು ಸೌಂದರ್ಯ ಹೆಚ್ಚಿಸಿವೆ.
    .......................

    ReplyDelete