Sunday, November 20, 2011

ಪ್ರಲಾಪ..

ಸ್ಪೂರ್ತಿಯೇ ಇಲ್ಲದ ಮೇಲೆ ಕವಿತೆಗಳು ಖಾಲಿ ಖಾಲಿ 
ಕನಸ ಗೋಪುರ ಒಡೆದ ಮೇಲೆ ಮನದ ತುಂಬಾ ಸುಂಟರಗಾಳಿ
ಬಾನಿಂದ ಚಂದಿರ ಜಾರಿದ ಮೇಲೆ ಬಾನ ನೋಡಲು ಮನಸಾಗುವುದೇಗೆ
ಈ ಸನಿಹ ವಿರಹದ ಜೂಜಾಟದಲಿ ಪ್ರೀತಿ ಬಡಪಾಯಿಯು...

ಶ್ರುತಿ ತಪ್ಪಿದ ಹಾಡಿನಲಿ ಸರಿಗಮ ಕೇಳುವುದೇ 
ಖುಷಿಯೇ ಇಲ್ಲದ ಬಾಳಿನಲಿ ಅರ್ಥವು ಕಾಣುವುದೇ 
ಮರದಿಂದ ಕಾಯಿ ಉದುರಿದ ಮೇಲೆ ಬಂಧವು ಎಲ್ಲಿದೆ
ಬಂಧವೇ ಇರದ ಬದುಕಿನಲಿ ನಗುವೇ ಕಾಣದೇ...

ಬೆಳದಿಂಗಳ ಹೊಳಪಿಗೆ ಅಮಾವಾಸ್ಯೆ ಬಡಿದಿರೆ 
ಕೋಗಿಲೆ ಗೂಡಲಿ ಕಾಗೆಯು ಹಾಡಿರೆ  
ಒಲವಂಚಿತ ಬದುಕಿನ ಕತ್ತಲ ಜೀವನ
ಪಲ್ಲವಿ ಇಲ್ಲದ  ಚರಣವು...

 

3 comments:

  1. ಕೋಗಿಲೆ ಗೂಡಲಿ ಕಾಗೆಯು ಹಾಡಿರೆ...?! purely imaginary or what??

    ReplyDelete
  2. ನಮಸ್ತೆ.. :) ಆ ಸಾಲುಗಳು ಪರಿಸ್ಥಿತಿಯ ವ್ಯತಾಸವನ್ನು ಸೂಚಿಸುತ್ತಿದೆ.. ಒಂದು ಸುಂದರ ಬದುಕಿನಲ್ಲಿ ಕತ್ತಲು ಕವಿದಾಗಿನ ಸಂದರ್ಭದ ವರ್ಣನೆಯನ್ನು ಆ ಸಾಲುಗಳು ಹೇಳುತ್ತಿವೆ..

    ReplyDelete
  3. ಸುಂದರವಾಗಿದೆ...

    ReplyDelete