Monday, October 10, 2011

'ಮೌನಿ..'


ಮೌನಿ ನಾನು ಮೌನವೇಣಿ ನೀನು ಮಾತಾಡದೆ
ಸ್ವರವಿಲ್ಲದೆ ಹೃದಯ ಹೇಳಲೆತ್ನಿಸುತ್ತಿದೆ ಮತ್ತೆ ಮೌನವಾಗಿ
ಸೂಜಿಯೊಂದು ಎದೆಯೊಳ ನುಗ್ಗಿದಂತೆ ಮರುಗೋಯಾತನೆಯು ಈ ಮೌನದಿ
ಅಂತರಂಗವು ಕಾದು ಕುದಿಯುತ್ತಿದೆ ಒಲವಿನ ಪುಟಗಳ ನಿನಗರುಹದೆ..

ಮೌನದ ಮಾತುಗಳ ಗೀಚಿರುವೆ ಹಾಳೆಯಲಿ
ಮಳೆನೀರ ಹನಿಗಳು ಬಿದ್ದು ಕಾಣದಾಗಿದೆಯೇಕೋ
ಪ್ರೇಮ ಕಾವ್ಯವ ಚಿತ್ರಿಸಿರುವೆ ಕಡಲತಡಿಯ ಮರಳ ಮೇಲೆ
ನಶಿಸಿ ಹೋಗಿದೆಯೀಗ ಅಲೆಗಳ ಮತ್ಸರಕೆ ಬಲಿಯಾಗಿ..

ಮೌನದ ಮೌನದಿ ಮಾತು ಮರೆತುಹೋಗಿ 
ಕಟ್ಟಿದ ಕನಸುಗಳು ಅಸುನೀಗುತ್ತಿವೆ
ಪ್ರೇಮದ ವೃಕ್ಷಕೆ ಕಾಯಿಲೆ ಬಂದಂತೆ
ಕನಸುಗಳುದುರುತ್ತಿವೆ ಎಲೆಗಳುದುರಿದಂತೆ..

ಮೌನ ಮಧುರವಲ್ಲ ಕವಿಗದರ ಅರಿವಿಲ್ಲ 
ಮೌನ ಕೊಲೆಗಡುಕ ಇಂಚಿಂಚೆ ಸಾಯಿಸುತ 
ಅತೀ ಮೌನ ಪ್ರೀತಿಗೆ ಸಲ್ಲ ಆದರೂ ನಾ ಮೌನಿಯು 
ಮೌನದಿಂದಲೇ ಕೊನೆಯಾಗಲಿ ಈ ಮೌನದೊಳಗಿನ ಪ್ರೇಮವು..

ಮೌನಿ ನಾನು ಮೌನವೇಣಿ ನೀನು ಮಾತಾಡದೆ
ಸ್ವರವಿಲ್ಲದೆ ಹೃದಯ ಹೇಳಲೆತ್ನಿಸುತ್ತಿದೆ ಮತ್ತೆ ಮೌನವಾಗಿ......


7 comments:

  1. ಮಾತಿಗೊಂದೇ ಭಾವ ಮೌನಕೆ ನೂರಾರು...:-)
    try to enjoy the silence...

    ReplyDelete
  2. ತುಂಬಾ ಒಳ್ಳೆಯ ಮಾತು...:) ಆದರೆ ಮೌನ ಎಲ್ಲ ಕಡೆ ಸಲ್ಲುವುದಿಲ್ಲ.. ಮೌನದ ಮಿತಿ ಮೀರಿದ ಅತೀ ಮೌನ ಒಳ್ಳೆಯದಲ್ಲ..!!! :)

    ಧನ್ಯವಾದಗಳು ನಳಿನಿ ಅವರೆ..:) ನಿಮ್ಮ ಹಾರೈಕೆ ಸದಾ ಇರಲಿ..:)

    ReplyDelete
  3. Thanq ರಾಜ್..:) ಅಭಿಮಾನಿಗಳನ್ನು ಪಡೆಯುವಷ್ಟು ದೊಡ್ಡವ ನಾನಲ್ಲ..:) :) ಎಲ್ಲ ತಮ್ಮ ದೊಡ್ಡ ಗುಣ.. thanq again..:)

    ReplyDelete
  4. ಅದ್ಭುತ! ಸೊಗಸಾದ ಮನಮುಟ್ಟುವ ಕವಿತೆ. ಮಧುರ ಸಾಲುಗಳನ್ನ ಹೀಗೇ ಉಣಬಡಿಸುತ್ತಿರಿ...

    ReplyDelete
  5. ಮನದಲ್ಲಿನ ವಿರಹದ ಭಾವಗಳನ್ನು ಗುಡ್ಡೆ ಹಾಕಿದಂತಿದೆ ಕವಿತೆಯ ಭಾವ.. ಪ್ರೀತಿಯನ್ನು ಕಳೆದುಕೊಂಡ ಹುಡುಗನ ಮನದ ಹತಾಶೆ, ನಿರಾಸೆ ಮತ್ತು ಯಾತನೆಗಳು ಅವನಲ್ಲಿ ಒಬ್ಬ ಮೌನಿಯನ್ನು ಹುಟ್ಟುಹಾಕಿ.. ಮೌನವೀಣೆಯನ್ನು ನುಡಿಸುತ್ತಿದೆ ಕವಿತೆ.. ಅವನ ಚಡಪಡಿಕೆಗಳಿಗೆ ಧ್ವನಿ ನೀಡುವ ಪ್ರಯತ್ನ ಮಾಡಿದೆ ನಿಮ್ಮ ಕವಿತೆ.. ಮೌನದ ಆಳವನ್ನು ಅಳೆಯುವ ಪ್ರಯತ್ನ ಮಾಡಿದೆ ಮತ್ತು ಪ್ರೀತಿಯ ಮತ್ತಿನಲ್ಲಿ ತೇಲಿಸುತ್ತದೆ ಕವಿತೆ.. ಹಿಡಿಸಿತು..:) ಮುಂದುವರೆಯಲಿ ನಿಮ್ಮ ಕವನಗಳ ಜಾತ್ರೆ..:)))

    ReplyDelete