Thursday, June 23, 2011

ಪ್ರೀತಿಯೆಂಬ ಕುಂಚದಲಿ..


ತುಂತುರು ನೀರಧಾರೆಯಲಿ ಮೈನೆನೆಯಲು ಸುರಿದಿದೆ ಬಾಷ್ಪ
ಮಳೆನೀರ ನಡುವೆ ಕಣ್ಣೀರು ಕಾಣಸಿಗುವುದೇ..

ನೀನೆಲ್ಲೋ ನಾನೆಲ್ಲೋ ಅಂತರವಿರುವಾಗ 
ನನ್ನೆದೆ ಮಿಡಿತದ ಕೂಗು ಕೇಳಲಾಗುವುದೇ..

ನಿನ್ನ ನಾಮದ ಧ್ಯಾನದಲಿ ಮುಳುಗಿ ಹೋಗಿಹೆನು 
ಕಸುಬಿಲ್ಲದ ಹುಚ್ಚ ನಾನೆಂದುಕೊಳಬೇಡ..

ರವಿವರ್ಮನ ಮೀರಿಸಿ ನಿನ್ನ ಚಿತ್ರಿಸಬಲ್ಲೆ 
ಪ್ರೀತಿಯೆಂಬ ಕುಂಚದಲಿ ನನ್ನ ಹೃದಯದ ಮೇಲೆ..

ಅಗೆದಗೆದು ನೋಡು ನೀ ಹುದುಗಿರೋ ಪ್ರೇಮವನು
ಸಿಂಚನಕೆ ಕಾಯುತ್ತಿದೆ ನಿನ್ನೊಲವು ಕೂಡಿದಾಕ್ಷಣ..

ನನ್ನಂತರಂಗದ ಅನುರಾಗವ ಒಮ್ಮೆ ಕಂಡು ಹೋಗು ನೀ 
ನನ್ನ ಹೃದಯವು ಕಾದು ಅಸ್ತಮಿಸೋ ಮುನ್ನ..


1 comment:

  1. ವಿರಹದ ನವಿರಾದ ಭಾವಗಳನ್ನು ಹದವಾಗಿ ಬೆರೆಸಿ ಪ್ರೀತಿಯನ್ನೂ ಸಮ್ಮಿಳಿತಗೊಳಿಸಿ ಹೊಸೆ ಚೆಂದದ ಕವಿತೆ.. ಅದುಮಿಟ್ಟುಕೊಳ್ಳಲಾಗದ ಸಾಗರದಷ್ಟು ಪ್ರೀತಿಯನ್ನು ನಲ್ಲೆಯ ಮೇಲಿ ಸಿಂಚಿಸುವ ಪ್ರೀತಿಯ ವರ್ಷಧಾರೆಯ ಪಡಿಯಚ್ಚಿನಂತೆ ಮೂಡಿದೆ ಕವಿತೆ..
    ರವಿವರ್ಮನ ಮೀರಿಸಿ ನಿನ್ನ ಚಿತ್ರಿಸಬಲ್ಲೆ
    ಪ್ರೀತಿಯೆಂಬ ಕುಂಚದಲಿ ನನ್ನ ಹೃದಯದ ಮೇಲೆ..
    ಈ ಉಪಮೆಯ ಪ್ರಯೋಗ ನನಗೆ ತುಂಬಾ ಹಿಡಿಸಿತು..:)

    ReplyDelete