Saturday, December 24, 2011

ಇದು ಲವ್ ಅಲ್ಲ... ಜಿಹಾದ್..!


ಚಿಕ್ಕಂದಿನಿಂದ ಹೆತ್ತು ಹೊತ್ತು ಸಾಕಿದ ಆ ಮುಗ್ಧ ತಂದೆ ತಾಯಿ, ಜೊತೆಯಲ್ಲೇ ಆಡುತ್ತ, ಚೇಷ್ಟೆ ಮಾಡುತ್ತ ಬೆಳೆದ ಪ್ರೀತಿಯ ಅಣ್ಣ, ತಮ್ಮ, ಅಕ್ಕ-ತಂಗಿಯರು, ಮೊಮ್ಮಗಳ ಮದುವೆ ನೋಡಲು ಒಂದಿನಿತು ಜೀವ ಹಿಡಿದು ನಿಂತ ಅಜ್ಜ ಅಜ್ಜಿಯರು, ಆತ್ಮೀಯ ಬಂಧು ಬಾಂಧವರು.. ಇಂತಹ ಒಂದು ಜನ್ಮಾಂತರದ ಭಾಂಧವ್ಯವನ್ನು ಕೆಲವೇ ಕ್ಷಣಗಳಲ್ಲಿ ತುಂಡರಿಸಿ ಯಾವುದೋ ಪರಧರ್ಮೀಯ 'ಲವ್ ಜಿಹಾದಿ' ಹುಡುಗನ ಜೊತೆ ಪರಾರಿಯಾದ ಜ್ಯೋತಿ, ರಮ್ಯ, ಪ್ರಿಯಾಂಕ, ಸಹನಾ.......ರವರುಗಳ ಈಗಿನ ಬದುಕು ಎಷ್ಟು ನರಕ ಸದೃಶವಾಗಿದೆ ಎಂಬುದನ್ನು ತಿಳಿಸಲಾದರೂ ಅವರು ಸಮಾಜದ ಮುಂದೆ ಬರುವರೇ..?! ಅವರನ್ನು ಅಗಲಿ ಕಣ್ಣೀರಾಗಿರುವ ಅವರ ಕುಟುಂಬಿಕರ ಮೋರೆ ನೋಡಲಾದರೂ ಬರುವರೇ..?! ಇಲ್ಲ... ಖಂಡಿತ ಬರಲಾರರು..! ಕತ್ತಲ ಕೂಪದಲ್ಲಿರುವ ಅವರುಗಳು ಈಗ ಸಮಾಜದ ಮುಂದೆ ಬರುವಷ್ಟೂ ಸ್ವತಂತ್ರರಾಗಿ ಉಳಿದಿಲ್ಲ...!

ಇವರುಗಳ ಬದುಕನ್ನು ಇಷ್ಟು ಹೀನಾಯವಾಗಿಸಿದ ಆ ಜಾಲದ ಹೆಸರಾದರು ಏನು? ಅದುವೇ 'ಲವ್ ಜಿಹಾದ್'. ಹಿಂದೂ-ಕ್ರಿಶ್ಚಿಯನ್ ತರುಣಿಯರನ್ನು 'ಪ್ರೀತಿ' ಎಂಬ ಎರಡಕ್ಷರದ ಪವಿತ್ರ ಭಾವನೆಯ ಹೆಸರಿನಲ್ಲಿ ನಾಟಕವಾಡಿ ಮತಾಂತರಿಸುವ ಮುಸ್ಲಿಂ ಮತಾಂಧರ ಜಾಲವೇ 'ಲವ್ ಜಿಹಾದ್'. ಒಂದು ವರ್ಷದ ಕೆಳಗೆ ಭಾರಿ ಸುದ್ದಿ ಮಾಡಿದ್ದ ಇದು ನಂತರ ಹಲವು ಪ್ರತಿಭಟನೆ, ಪ್ರತಿರೋಧಗಳ ಮಧ್ಯೆ ನಿಂತಂತೆ ಕಂಡರೂ ಈಗ ಮತ್ತೆ ಮರು ಹುಟ್ಟು ಪಡೆದುಕೊಂಡಿರುವುದು ಆಘಾತಕಾರಿ..!

ಮುಸ್ಲಿಮೇತರ ತರುಣಿಯರನ್ನು ಅವರ ಶಾಲೆ-ಕಾಲೇಜು, ಉದ್ಯೋಗದ ಸ್ಥಳಗಳಲ್ಲಿ ಪರಿಚಯಿಸಿಕೊಂಡು, ಬಣ್ಣ ಬಣ್ಣದ ಮಾತಿನಿಂದ ಮೋಡಿಗೊಳಿಸಿ, ಆಕರ್ಷಕ ಉಡುಗೊರೆಗಳನ್ನು ನೀಡಿ, ಪ್ರೀತಿಸಿ, ರಮಿಸಿ, ಕಾಮಿಸುವ ಲವ್ ಜಿಹಾದಿ (ಮುಸ್ಲಿಂ) ತರುಣರು ಆ ಹುಡುಗಿಯರ ಮನಸ್ಸನ್ನು ಪ್ರೀತಿಯ ಹೆಸರಿನಲ್ಲಿ ಕುರುಡಾಗಿಸಿಬಿಡುತ್ತಾರೆ. (ಇದರಲ್ಲಿ ಹೆಚ್ಚಿನ ಲವ್ ಜಿಹಾದಿ ಮುಸ್ಲಿಂ ತರುಣರು ತಮ್ಮನ್ನು ತಾವು 'ಹಿಂದೂ' ಎಂದು ಪರಿಚಯಿಸಿಕೊಂಡು ಜಾಲ ಹೆಣೆಯುವುದಿದೆ.) ಆದರೆ ಆತನ ಪ್ರೀತಿ ನಿಜವಲ್ಲ ಅದು ತಮ್ಮ ಭವಿಷ್ಯವನ್ನು ಹಾಳುಗೆಡವಲು ಹೆಣೆದಿರುವ ಜಾಲ ಎಂದು ಅರಿವಾಗುವುದು ಆ ಹುಡುಗಿ ತನ್ನ ಮನೆಯವರನ್ನೆಲ್ಲ ಬಿಟ್ಟು ಆ ಮುಸ್ಲಿಂ ಹುಡುಗನ ಜೊತೆ ನಿಖಾ (ಮದುವೆ) ಆಗಿ ಆತನ ಧರ್ಮಕ್ಕೆ ಮತಾಂತರಗೊಂಡ ಮೇಲೆಯೇ, ಇಲ್ಲವೇ ಆ ಹುಡುಗ ಕ್ಲಿಕ್ಕ್ಕಿಸಿದ ಆಕೆಯ ನಗ್ನ-ಅರೆ ನಗ್ನ ಚಿತ್ರಗಳ MMS ಕ್ಲಿಪ್ ಊರಿಡೀ ಹರಿದು ಆಕೆಯ ಮೊಬೈಲಿಗೆ ಬಂದ ಮೇಲೆಯೇ.. ಆದರೆ ಅಷ್ಟೊತ್ತಿಗೆ ಕಾಲ ಮಿಂಚಿ ಹೋಗಿರುತ್ತದೆ..!!


ತನ್ನ 'ಬಲಿ'ಯಾದ ಆ ಹುಡುಗಿಯನ್ನು ಮದುವೆಯಾಗುವ ಆತ ಇಸ್ಲಾಮಿನ ಒಂದೊಂದೇ ನಿಯಮಗಳನ್ನು ಆಕೆಯ ಮೇಲೆ ಹೇರತೊಡಗುತ್ತಾನೆ. ಸಲ್ವಾರ್, ಸೀರೆ, ಪ್ಯಾಂಟ್, ಟೀ-ಶರ್ಟ್ ಎಂದು ಸ್ವತಂತ್ರವಾಗಿ ಉಡುಗೆಗಳನ್ನು ಧರಿಸುತ್ತಿದ್ದ ಆಕೆಯ ಮೇಲೆ ಕರಿ ಬುರ್ಖಾವನ್ನು ಹೇರಲಾಗುತ್ತದೆ. ಆತನನ್ನು ಪ್ರೀತಿಸಿದ ತಪ್ಪಿಗೆ ಆಕೆ ಒಪ್ಪಿಕೊಳ್ಳುತ್ತಾಳೆ. ಮುಂದೆ ಒಂದರ ನಂತರ ಒಂದರಂತೆ ಮಕ್ಕಳನ್ನು ಹುಟ್ಟಿಸುವ ಆತ ಆಕೆಯನ್ನು  ಒಂದು ಹೆರಿಗೆ ಯಂತ್ರವನ್ನಾಗಿ ಮಾಡುತ್ತಾನೆ. ಬರೀ ಅಷ್ಟಕ್ಕೇ ಮುಗಿಯಲಿಲ್ಲ.. ಕೆಲವೇ ದಿನಗಳಲ್ಲಿ ಮನೆಗೆ ಇನ್ನೊಬ್ಬಳು ಸವತಿ ಬರುತ್ತಾಳೆ. ಮುಂದೆ ಮತ್ತೊಬ್ಬಳು.. 3-4 ಮದುವೆಯಾಗುತ್ತಾನೆ. ಅದಕ್ಕಿಂತಲೂ ಹೆಚ್ಚು ಆಗಬಹುದು.! ಆಕೆಯೊಬ್ಬಳನ್ನೇ 'ಪತ್ನಿ' ಯಾಗಿ ಸ್ವೀಕರಿಸಲು ಆತನೇನು 'ಹಿಂದೂ'ವೇ ?!. ಒಬ್ಬಳೇ 'ಧರ್ಮಪತ್ನಿ' ಎಂಬ ಕಟ್ಟು ಪಾಡು, ಕಟ್ಟಲೆಗಳು ಅವನಲ್ಲಾಗಲೀ, ಅವನ ಇಸ್ಲಾಂ ಧರ್ಮದಲ್ಲಾಗಲೀ ಇಲ್ಲ. ಇದನ್ನೆಲ್ಲಾ ಸಹಿಸಿಕೊಂಡು ಕತ್ತಲ ಕೂಪದಲ್ಲಿ ಬದುಕು ಸವೆಸುವ ಆಕೆ ಮುಂದೊಂದು ದಿನ ಬೀದಿಗೆ ಬೀಳಬೇಕಾಗುತ್ತದೆ. ಅಷ್ಟರಲ್ಲಿ ಹೆತ್ತು ಹೆತ್ತು ಹೆರಿಗೆ ಯಂತ್ರವಾಗಿರುವ ಆಕೆ ತನ್ನ ಸೌಂದರ್ಯವನ್ನೆಲ್ಲ  ಕಳಕೊಂಡಿರುತ್ತಾಳೆ. ಆಕೆಯನ್ನು ಮೂಸಿ ನೋಡುವವರು ಯಾರೂ ಇರುವುದಿಲ್ಲ. ಅನಿವಾರ್ಯವಾಗಿ ಆಕೆ ಆ ಮುಸ್ಲಿಂ ಹುಡುಗನೊಂದಿಗೆ ಬದುಕು ಸವೆಸುತ್ತಾಳೆ. ಇಲ್ಲವೇ ಆತ್ಮಹತ್ಯೆಗೆ ಶರಣಾಗಿ ಈ ಪ್ರಪಂಚದಿಂದಲೇ ಬಹುದೂರ ಸಾಗುತ್ತಾಳೆ. ಕೆಲವೊಮ್ಮೆ ಬದುಕಿನ ಅಧಾರಕ್ಕಾಗಿ ವೇಶ್ಯಾವಾಟಿಕೆಗೆ ಮುಖ ಮಾಡುವುದೂ ಇದೆ.. ಇಲ್ಲಿಗೆ ಆ ಲವ್ ಜಿಹಾದಿ ಹುಡುಗನ ಉದ್ದೇಶ ಈಡೇರಿದಂತಾಗುತ್ತದೆ. ಅದೇ ಆ ಹುಡುಗಿಯ ಜೀವನದ ನಿರ್ನಾಮ!!

ಇಂತಹ 10,000 ಕ್ಕೂ ಹೆಚ್ಚು ಪ್ರಕರಣಗಳು ಇಲ್ಲಿಯವರೆಗೆ ಬೆಳಕಿಗೆ ಬಂದಿವೆ. ಕೇರಳದಲ್ಲಿ ಅತೀ ಹೆಚ್ಚಿನ 6000 ದಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದು ನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ಅದರಲ್ಲೂ ಇತ್ತೀಚಿಗೆ ಬೆಳಕಿಗೆ ಬರುತ್ತಿರುವ ಲವ್ ಜಿಹಾದ್ ಪ್ರಕರಣಗಳು ಕರ್ನಾಟಕದಲ್ಲೇ ಆಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ನಮ್ಮ ಬುದ್ಧಿಜೀವಿಗಳೆನಿಸಿಕೊಂಡವರು, ರಾಜಕಾರಣಿಗಳು ಮಾತ್ರ ಈ ಬಗ್ಗೆ ಹೆಚ್ಚಿನ ಚರ್ಚೆಗೆ ಮುಂದಾಗುವುದಿಲ್ಲ. ಅದೇ ಒಬ್ಬ ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿ ಓಡಿ ಹೋಗಿ ವರಿಸಿದ್ದರೆ ಆಕ್ರೋಶಗೊಂಡು ಅದನ್ನು ದೊಡ್ಡ ರಂಪ ಮಾಡಲು ಮಾತ್ರ ನಾ ಮುಂದು ತಾ ಮುಂದು ಎಂದು ಧಾವಿಸುತ್ತಿದ್ದರು. ಜಮ್ಮು ಕಾಶ್ಮೀರದ ಅಮೀನ ಎಂಬ ಮುಸ್ಲಿಂ ಹುಡುಗಿ ರಜನೀಶ ಎಂಬ ಹಿಂದೂ ಹುಡುಗನನ್ನು ಪ್ರೀತಿಸಿ ವರಿಸಿದ್ದಕ್ಕೆ ಏನಾಯಿತು. ಅಲ್ಲಿನ ಇಡೀ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ರಜನೀಶ ಪೋಲಿಸ್ ಕಸ್ಟಡಿಯಲ್ಲೇ ಹೆಣವಾಗಬೇಕಾಯಿತು.. ಆಗ ಇದ್ದ ಮುಸ್ಲಿಂ ಮೌಲ್ವಿಗಳ ಆಕ್ರೋಶ, ಬುದ್ದಿಜೀವಿಗಳ ಕಿಡಿ ನುಡಿಗಳು ಈಗ ಎಲ್ಲಿ ಅವಿತು ಹೋಗಿವೆ..

'ಪ್ರೀತಿ' ಎಂಬ ಎರಡಕ್ಷರದ ಅಮೂಲ್ಯ ಪವಿತ್ರ ಭಾವನೆಯನ್ನೇ ದಾಳವಾಗಿಸಿ ನಡೆಯುವ ಈ ಜಾಲದ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಈ ಬಗ್ಗೆ ಹೆಚ್ಚಿನ ಪ್ರಚಾರವಾಗಬೇಕು. ಎಲ್ಲಾ ಮುಸ್ಲಿಮೇತರ (ಹಿಂದೂ, ಕ್ರಿಶ್ಚಿಯನ್) ತರುಣಿಯರಿಗೆ ಹಾಗು ಅವರುಗಳ ಪೋಷಕರುಗಳಿಗೆ ಈ ಬಗ್ಗೆ ಜ್ನಾನವಿರಬೇಕು. ಯಾವಾಗ ಆ ಜಾಗೃತ ಮನೋಭಾವ ಅವರವರ ಮನದಲ್ಲಿ ಮೂಡುತ್ತೋ ಆಗ ಈ ಮುಂದೊಗಲಿಲ್ಲದ ಮುಸ್ಲಿಂ ಪಡ್ಡೆಗಳ 'ಲವ್ ಜಿಹಾದ್' ಜಾಲ ತನ್ನಿಂತಾನೆ ಇಲ್ಲವಾಗುತ್ತದೆ. 
ಸಹೋದರಿಯರೇ ಜಾಗೃತರಾಗಿರಿ.. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇದೆ ಎಂಬುದನ್ನು ಮರೆಯದಿರಿ..

Sunday, December 11, 2011

ಮನದ ಪರಿಧಿಯ ದಾಟಿ..

 
ಓ ಪ್ರಾಣವೇ.. ನಾ ಕಾಣದಾಗಿಹೆ 
ನಿನ್ನೊಲವಿನಾಳದಲಿ ಕರಗಿ ಹೋಗುತಲಿ
ಪದೇ ಪದೇ ನನ್ನ ಮನಸು ಕನವರಿಸುತ್ತಿದೆ ನಿನ್ನೇ
ನನ್ನೇ ಮರೆಯುತ.. ಬರೀ ನಿನ್ನೇ ನೆನೆಯುತ..

ಪರಿ ಪರಿಯಲಿ ಕಾಡುತಿಹೆ
ನೀ ಮನದ ಪರಿಧಿಯ ದಾಟಿ
ನಿನ್ನನುರಾಗಕೆ ಏನ ಕೊಡಲಿ ನಾ
ನಿನ್ನನೇ ಹೃದಯದಲಿಟ್ಟ ನಾ ಬರಿಗೈ ದಾಸನು..

ಕಣ್ಣ ಮುಚ್ಚೋ ಘಳಿಗೆಯಲ್ಲಿ
ಕನಸ ತುಂಬಾ ನೀನಿರುವೆ
ಮನದ ತುಂಬಾ ನಿನದೇ ಮಂದಹಾಸ
ಮಂದಗಾಮಿ ನಾ ನಿನ್ನ ಒಲವಿಗೆ.. ಬರೀ ನಿನ್ನನೇ ಕಾಣುತ..

ನವಿರಾದ ಹಾಡ ಹಿಂದೆ ನಿನ್ನದೇ ರಾಗವ ಕಂಡೆ
ನನ್ನೆದೆಯ ಬಡಿತದಲಿ ನಿನ್ನದೇ ಮಿಡಿತವ ಕಂಡೆ
ನೀನೇನೆ ನನ್ನ ಪ್ರಾಣ.. ನಿನಗಾಗಿಯೇ ನನ್ನ ಧ್ಯಾನ
ನಾ ಋಣಿಯು ನಿನ್ನ ಪ್ರೀತಿಗೆ ನಿನ್ನನೇ ಪ್ರೇಮಿಸುತ..  



Sunday, November 20, 2011

ಪ್ರಲಾಪ..

ಸ್ಪೂರ್ತಿಯೇ ಇಲ್ಲದ ಮೇಲೆ ಕವಿತೆಗಳು ಖಾಲಿ ಖಾಲಿ 
ಕನಸ ಗೋಪುರ ಒಡೆದ ಮೇಲೆ ಮನದ ತುಂಬಾ ಸುಂಟರಗಾಳಿ
ಬಾನಿಂದ ಚಂದಿರ ಜಾರಿದ ಮೇಲೆ ಬಾನ ನೋಡಲು ಮನಸಾಗುವುದೇಗೆ
ಈ ಸನಿಹ ವಿರಹದ ಜೂಜಾಟದಲಿ ಪ್ರೀತಿ ಬಡಪಾಯಿಯು...

ಶ್ರುತಿ ತಪ್ಪಿದ ಹಾಡಿನಲಿ ಸರಿಗಮ ಕೇಳುವುದೇ 
ಖುಷಿಯೇ ಇಲ್ಲದ ಬಾಳಿನಲಿ ಅರ್ಥವು ಕಾಣುವುದೇ 
ಮರದಿಂದ ಕಾಯಿ ಉದುರಿದ ಮೇಲೆ ಬಂಧವು ಎಲ್ಲಿದೆ
ಬಂಧವೇ ಇರದ ಬದುಕಿನಲಿ ನಗುವೇ ಕಾಣದೇ...

ಬೆಳದಿಂಗಳ ಹೊಳಪಿಗೆ ಅಮಾವಾಸ್ಯೆ ಬಡಿದಿರೆ 
ಕೋಗಿಲೆ ಗೂಡಲಿ ಕಾಗೆಯು ಹಾಡಿರೆ  
ಒಲವಂಚಿತ ಬದುಕಿನ ಕತ್ತಲ ಜೀವನ
ಪಲ್ಲವಿ ಇಲ್ಲದ  ಚರಣವು...

 

Monday, October 31, 2011

ತಾಯಿ ಭುವನೇಶ್ವರಿಯ ನಲ್ಮೆಯ ಮಕ್ಕಳಾದ ಕರುನಾಡಿಗರಿಗೆ 'ಕನ್ನಡ ರಾಜ್ಯೋತ್ಸವ'ದ ಈ ಶುಭ ಸಂದರ್ಭದಲ್ಲಿ ಶುಭಾಶಯಗಳನ್ನು ಸಲ್ಲಿಸುತ್ತ, ಆ ದೇವಿ ಭುವನೇಶ್ವರಿಯು ಸನ್ಮಂಗಳವನ್ನುಂಟು ಮಾಡಲೆಂದು ಪ್ರಾರ್ಥಿಸುತ್ತೇನೆ.

"ಜೈ ಭುವನೇಶ್ವರಿ - ಜೈ ಕರ್ನಾಟಕ"

Monday, October 10, 2011

'ಮೌನಿ..'


ಮೌನಿ ನಾನು ಮೌನವೇಣಿ ನೀನು ಮಾತಾಡದೆ
ಸ್ವರವಿಲ್ಲದೆ ಹೃದಯ ಹೇಳಲೆತ್ನಿಸುತ್ತಿದೆ ಮತ್ತೆ ಮೌನವಾಗಿ
ಸೂಜಿಯೊಂದು ಎದೆಯೊಳ ನುಗ್ಗಿದಂತೆ ಮರುಗೋಯಾತನೆಯು ಈ ಮೌನದಿ
ಅಂತರಂಗವು ಕಾದು ಕುದಿಯುತ್ತಿದೆ ಒಲವಿನ ಪುಟಗಳ ನಿನಗರುಹದೆ..

ಮೌನದ ಮಾತುಗಳ ಗೀಚಿರುವೆ ಹಾಳೆಯಲಿ
ಮಳೆನೀರ ಹನಿಗಳು ಬಿದ್ದು ಕಾಣದಾಗಿದೆಯೇಕೋ
ಪ್ರೇಮ ಕಾವ್ಯವ ಚಿತ್ರಿಸಿರುವೆ ಕಡಲತಡಿಯ ಮರಳ ಮೇಲೆ
ನಶಿಸಿ ಹೋಗಿದೆಯೀಗ ಅಲೆಗಳ ಮತ್ಸರಕೆ ಬಲಿಯಾಗಿ..

ಮೌನದ ಮೌನದಿ ಮಾತು ಮರೆತುಹೋಗಿ 
ಕಟ್ಟಿದ ಕನಸುಗಳು ಅಸುನೀಗುತ್ತಿವೆ
ಪ್ರೇಮದ ವೃಕ್ಷಕೆ ಕಾಯಿಲೆ ಬಂದಂತೆ
ಕನಸುಗಳುದುರುತ್ತಿವೆ ಎಲೆಗಳುದುರಿದಂತೆ..

ಮೌನ ಮಧುರವಲ್ಲ ಕವಿಗದರ ಅರಿವಿಲ್ಲ 
ಮೌನ ಕೊಲೆಗಡುಕ ಇಂಚಿಂಚೆ ಸಾಯಿಸುತ 
ಅತೀ ಮೌನ ಪ್ರೀತಿಗೆ ಸಲ್ಲ ಆದರೂ ನಾ ಮೌನಿಯು 
ಮೌನದಿಂದಲೇ ಕೊನೆಯಾಗಲಿ ಈ ಮೌನದೊಳಗಿನ ಪ್ರೇಮವು..

ಮೌನಿ ನಾನು ಮೌನವೇಣಿ ನೀನು ಮಾತಾಡದೆ
ಸ್ವರವಿಲ್ಲದೆ ಹೃದಯ ಹೇಳಲೆತ್ನಿಸುತ್ತಿದೆ ಮತ್ತೆ ಮೌನವಾಗಿ......


Sunday, October 9, 2011

ಶೋಕವೇ ಬರೀ ಶೋಕವೇ..



ಕ್ಷಮೆ ಕೋರುತಿಹ ನನ್ನೊಳ ಉಸಿರಿನ ದನಿ ಕೇಳದೇನೆ
ಈ ಬಡಪಾಯಿಯ ಬಡ ಹೃದಯವನು ಕ್ಷಮಿಸಲಾಗದೇನೆ
ಕಣ್ಣಂಚಲಿ ಧುಮುಕಲೋಗುತಿಹ ಕಣ್ಣೀರ ತಡೆ ನನ್ನ ಚೆಲುವೆ
ನಿನ್ನ ನೋಯಿಸೆನು ನನ್ನ ಪ್ರಾಣವೇ ನನ್ನಂತ್ಯದವರೆಗೂ..

ಸವಿ ಶೃತಿಯ ನುಡಿಸಿರುವೆ ನೀ ನನ್ನಂತರಂಗದಲಿ
ಅಂತರಂಗದ ತಾಳ ತಪ್ಪಿಸದಿರು ಸವಿ ಶೃತಿ ಕೇಳಿಬರದಂತೆ
ಕತ್ತಲ ಕಾನನದೊಳು ಬೆಳಕ ಕಂಡಿರುವೆ ನಿನ್ನಿಂದಲೇ ನನ್ನಾತ್ಮವೇ 
ನನ್ನಾತ್ಮದ ಬಳಿಯೀಗ ಬರೀ ಕತ್ತಲೇಕೆ ನಗು ನೀ ಮತ್ತೆ ಬೆಳಕಿನೊಡೆ..

ಪಿಸುಮಾತ ಪ್ರೀತಿ ಕೇಳಲಿಲ್ಲವೇಕೋ ಅಂದು ನಿನಗೆ
ಅಂಬರದಾಚೆಗಿನ ಲೋಕಕೂ ಅರಿವಿದೆ, ಬಳಿಯಲ್ಲಿನ ನಿನ್ನ ಬಿಟ್ಟು
ಜೋರಾಗಿ ಕಿರುಚುತ್ತಿರುವೆನಿಂದು ನಾ ನಿನ್ನೇ ಪ್ರೀತಿಸಿರುವೆ
ನಾ ನಿನ್ನೇ ಪ್ರೀತಿಸಿರುವೆ ಓಲವೇ ನನ್ನೆದೆಯ ಗುಡಿಯಲಿಟ್ಟು..

ನಿನಗೆ ತಂಪೆರೆವೆ ನಿನ್ನ ಬದುಕಿನಲಿ ಬಿಸಿಬೇಗೆಯ ನಾ ಸಹಿಸುತ
ನಿನ್ನ ಖುಷಿಯಲೇ ಜೀವಿಸುವೆ ಸದಾ ಕಹಿಯ ನಾ ಹೀರುತ
ನೋವ ಮರೆತು ಜಾಗವಿಡು ಎನ್ನ ಅಲೆಮಾರಿ ಹೃದಯಕೆ
ಮಗದೊಮ್ಮೆ ಕಿರುಚಲೇನೆ ಓಲವೇ, ನಾ ನಿನ್ನೇ ಪ್ರೀತಿಸಿರುವೆ..

 

Wednesday, September 21, 2011

ಕುರುಡಾಗದಿರು ಭಾರತೀಯ ನಿನ್ನ ಕಣ್ಣುಗಳಿರುವ ತನಕ..


ಕೋಮುವಾದ, ಜಾತಿವಾದ, ಇವುಗಳ ನಡುವಿನ ಸಂಘರ್ಷಗಳು ಯಾವ ದೇಶದಲ್ಲಿ ಎಷ್ಟರವರೆಗೆ ಇರುತ್ತವೆಯೋ ಅಲ್ಲಿಯ ತನಕ ಆ ದೇಶದ ಬೆಳವಣಿಗೆ ಕುಂಠಿತವಾಗಿ ಸಾಗುತ್ತದೆ. ಅದರಲ್ಲೂ ಆಳುವ ಸರಕಾರಗಳು ನಡೆಸುವ ಒಂದು ಸಮುದಾಯದವರ ಓಲೈಕೆ ಅದು ಅಲ್ಪಸಂಖ್ಯಾತರನ್ನಾಗಲೀ, ಬಹುಸಂಖ್ಯಾತರನ್ನಾಗಲೀ ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ನಮ್ಮೀ ಭಾರತ ಇದೆಲ್ಲ ಸಮಸ್ಯೆಗಳಿಂದ ಹೊರತಾಗಿಲ್ಲ.. ಬಹುಶಃ ಈ ತರಹದ ಕೋಮು ವಿಂಗಡಣೆ, ಜಾತಿ ವಿಂಗಡಣೆ ರಾಜಕೀಯ ಭಾರತದಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಸಿಗದು..! ತಾಜಾ ಉದಾಹರಣೆಯಾಗಿ ಕೇಂದ್ರದ NAC ಸಿದ್ದಪಡಿಸಿದ ಕೋಮು ಸಂಘರ್ಷ ನಿಯಂತ್ರಣಾ ಕಾಯಿದೆಯ ಕರಡು ರೂಪದಲ್ಲೊಮ್ಮೆ ಕಣ್ಣಾಡಿಸಿ. ಇಲ್ಲಿ ಕಾಣಸಿಗುವುದು ಅಲ್ಪ ಸಂಖ್ಯಾತ, ಬಹು ಸಂಖ್ಯಾತ, ಪರಿಶಿಷ್ಟ ವರ್ಗ - ಪಂಗಡಗಳೆಂಬ ವಿಂಗಡಣಾ ರಾಜಕೀಯ.

ಕೋಮು ಸಂಘರ್ಷಗಳಲ್ಲಿ ತಪ್ಪಿತಸ್ಥರಾದವರಿಗೆ ಎಲ್ಲರಿಗೂ ಶಿಕ್ಷೆಯಾಗುವುದಾದರೆ ಈ ಕೋಮು ಸಂಘರ್ಷ ನಿಯಂತ್ರಣ ಕಾಯಿದೆ ಸ್ವಾಗತಾರ್ಹವಾಗುತಿತ್ತು. ಇಡೀ ಭಾರತಕ್ಕೆ ಭಾರತವೇ NAC ಯ ಮುಖ್ಯಸ್ಥೆ ಸೋನಿಯಾ ಗಾಂದಿಯವರನ್ನು ಅಭಿನಂದನೆಗಳಿಂದ ಮುಳುಗೇಳಿಸುತ್ತಿತ್ತು. ಆದರೆ ಹಾಗಾಗಲಿಲ್ಲ..! ಕಾರಣ ಇಲ್ಲಿ ಕೇವಲ ಬಹುಸಂಖ್ಯಾತರಿಗಷ್ಟೇ ಶಿಕ್ಷೆ.. ಅಲ್ಪಸಂಖ್ಯಾತರು ಯಾವುದೇ ಗಲಬೆಗಳಲ್ಲಿ ಪಾಲ್ಗೊಂಡರೂ ಈ ಕಾಯಿದೆಯಡಿ ಶಿಕ್ಷೆಯಿಲ್ಲ. ಅದರಲ್ಲೂ ಬೆಂಕಿಗೆ ತುಪ್ಪ ಸುರಿದಂತೆ ಬಹುಸಂಖ್ಯಾತ ಹಿಂದೂ ಧರ್ಮದಿಂದ ಪರಿಶಿಷ್ಟ ವರ್ಗ-ಪಂಗಡಗಳನ್ನು ಬೇರ್ಪಡಿಸಿರುವುದು..! ಪರಿಶಿಷ್ಟ ವರ್ಗ-ಪಂಗಡಗಳಿಗೆ ಸೌಲಭ್ಯ ಕಲ್ಪಿಸಿರುವುದು ಒಳ್ಳೆಯದೇ ಆಗಿದೆ. ಆದರೆ ಇಲ್ಲಿ ಭಾರತದ ಮೂಲ ಧರ್ಮವಾದ ಸನಾತನ ಹಿಂದೂ ಧರ್ಮವನ್ನು ಒಡೆಯುವ ಷಡ್ಯಂತ್ರ ಅಡಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಇನ್ನು ಬಹುಸಂಖ್ಯಾತರ ಪರ ಎಂದು ಗುರುತಿಸಿಕೊಳ್ಳುತ್ತಿರುವ ಬಿಜೆಪಿ ತಾನೇನು ಕಡಿಮೆಯಿಲ್ಲ. ತಾನು ಹಿಂದೂಗಳ ಪರ ಎಂದು ಹೇಳಿಕೊಂಡು, ದೇಶದ ಅತೀ ಸೂಕ್ಷ್ಮ ವಿಷಯಗಳಾದ ಅಯೋಧ್ಯೆ, ಕಾಶ್ಮೀರ ಇವುಗಳ ಮೂಲಕ ರಾಜಕೀಯವಾಗಿ ಮೇಲೇರುತ್ತ ಬಂದ ಈ ಪಕ್ಷ ಹಿಂದೂಗಳಿಗಾಗಿ ಮಾಡಿದ್ದೇನೂ ಇಲ್ಲ. ಅತ್ತ ಅಯೋಧ್ಯೆ ಮಂದಿರವು ಇಲ್ಲ, ಈಗ ಅವರಿಗೆ ಆ ವಿಷಯ ಕೂಡ ನೆನಪಾಗುತ್ತಿಲ್ಲ. ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಅಯೋಧ್ಯೆಯ ಹಿಂದೂ ಪರ ಮಂಚ್ ಗೆ ನೀಡಿದ್ದ ಎಕರೆಗಟ್ಟಲೆ ಭೂಮಿಯನ್ನು ಕೂಡ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಅಂದಿನ ಸರಕಾರ ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದ ವಾಪಸು ಪಡೆದುಕೊಂಡಿತು. ಕರ್ನಾಟಕದ ವಿಷಯಕ್ಕೆ ಬಂದರೆ ಸ್ವತಃ ಬಿಜೆಪಿಯವರೇ ಹೇಳಿಕೊಳ್ಳುವಂತೆ ಹಿಂದಿನ 60  ವರ್ಷಗಳಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್ಸ್ ಸರಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನೀಡಿದ್ದು ಕೇವಲ 30 ರಿಂದ  60  ಕೋಟಿ. ಆದರೆ ಬಿಜೆಪಿ ಸರಕಾರ ಕೇವಲ ಮೂರೇ ಮೂರು ವರ್ಷಗಳಲ್ಲಿ ಅಲ್ಪಸಂಖ್ಯಾತರಿಗೆ ೩೦೦-೪೦೦ ಕೋಟಿ ನೀಡಿದೆ..!! ಬಹುಶಃ ಇದನ್ನು ನೋಡಿದ ಮೇಲೆ ಹಿಂದೂಗಳಿಗೆ ಬಿಜೆಪಿಗಿಂತ ಕಾಂಗ್ರೆಸ್ಸೇ Better ಅನಿಸದಿರದು. ಆದರೆ ಇಲ್ಲಿ ಹೇಳಬೇಕಾಗಿರುವ ವಿಷಯ ಈ ತರಹದ ಸಮುದಾಯ ಓಲೈಕೆ ಅಗತ್ಯವೇ.. ಒಂದು ಸಮುದಾಯಕ್ಕೆ ಮಾತಿನ ಭರವಸೆಯ ಓಲೈಕೆ, ಮತ್ತೊಂದು ಸಮುದಾಯಕ್ಕೆ ನಿಜವಾದ ಫಲದ ಓಲೈಕೆ.. ಇದರಿಂದ ದೇಶಕ್ಕೇನು ಲಾಭವಿದೆ. ಕೊಡುವುದಾದರೆ ತಾರತಮ್ಯವಿಲ್ಲದೆ ಕೊಡಲಿ. ಭಾರತೀಯರಲ್ಲೇ ತಾರತಮ್ಯವೇಕೆ..?


ಇನ್ನು ಜಾತಿವಾದ..! ಧರ್ಮದ ಭದ್ರ ಬುನಾದಿಯನ್ನು ನಿಶ್ಯಬ್ದವಾಗಿ ಅಲುಗಾಡಿಸುವ ಇದು ಇಂದು ಎಲ್ಲಾ ಪಕ್ಷಗಳಿಂದ ಹಿಡಿದು, ಪ್ರತಿ ಸಂಘ ಸಂಸ್ಥೆ, ಸಂಘಟನೆಗಳಲ್ಲೂ ಬೇರೂರಿದೆ. ಈಗಿನ ರಾಜಕೀಯ ಹೆಚ್ಚು ಕಡಿಮೆ ಜಾತಿ ಸಮೀಕರಣವನ್ನೇ ಅವಲಂಬಿಸಿದೆ. ಒಬ್ಬ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ಸ್ಥಾನದವರೆಗಿನ ಆಯ್ಕೆ ಜಾತಿ ಪ್ರಾಬಲ್ಯತೆಯನ್ನೇ ನೆಚ್ಚಿಕೊಳ್ಳುವಂತಾಗಿರುವುದು ವಿಪರ್ಯಾಸವೇ ಸರಿ.. ಇತ್ತೀಚೆಗಿನ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನೇ ಗಮನಿಸಿದರೆ ಸಾಕು. ಕೇಸರಿ ಪರ ಎಂದು ಗುರ್ತಿಸಿಕೊಳ್ಳುತ್ತಿರುವ ಪಕ್ಷವೇ ಕೇಸರಿಯನ್ನು ಜಾತಿ ಸಮೀಕರಣದಿಂದ ಒಡೆಯುತ್ತಿರುವುದು ಕಂಡು ಬರುತ್ತದೆ. ಕೋಮು ಸಂಘರ್ಷ ನಿಯಂತ್ರಣ ಕಾಯಿದೆಯಡಿ ಪರಿಶಿಷ್ಟ ವರ್ಗ-ಪಂಗಡಗಳನ್ನು ಹಿಂದೂ ಧರ್ಮದಿಂದ ಬೇರ್ಪಡಿಸಿರುವುದಕ್ಕೆ ಹಿಂದೂಗಳನ್ನು ಒಡೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಕೇಸರಿ ಪಕ್ಷ ನಿಜವಾಗಿ ಮಾಡುವುದೇನು..? ಪರಿಶಿಷ್ಟರ ಅಭಿವೃದ್ದಿಗೆ ಏನಾದರು ಮಾಡಿದೆಯೇನು..?

ಉಳಿದಂತೆ ಹಿಂದೂ ಪರ ಸಂಘಟನೆಗಳಾದ ವಿಹಿಂಪ, ಬಜರಂಗ ದಳ, ರಾಮ ಸೇನೆ, ಹಿಂದೂ ಯುವ ಸೇನೆ, ಜಾಗರಣ ವೇದಿಕೆ ಇವೆಲ್ಲ ಹಿಂದೂಗಳ ಶ್ರೆಯೋಭಿಲಾಷೆಗಾಗಿ ಸ್ಥಾಪನೆಗೊಂಡಂತವುಗಳು. ಆದರೆ ಇವುಗಳನ್ನೂ ಜಾತೀಯತೆ ಬಿಟ್ಟಿಲ್ಲ. ಪ್ರಮುಖ ಜವಾಬ್ದಾರಿಯ ಸ್ಥಾನಗಳೆಲ್ಲವು ಮೇಲ್ವರ್ಗದವರಿಗೆ ಹೋಗುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಒಂದು ಹಿಂದೂ ಪರ ಸಂಘಟನೆಯಲ್ಲಿ ದಲಿತನನ್ನು ಮುಖ್ಯಸ್ಥನನ್ನಾಗಿ ಮಾಡಿದ್ದಿದೆಯೇನು..? ಹಿಂದೂ ಧರ್ಮೊದ್ಧಾರಕರೆನಿಸಿಕೊಂಡ ಈ ಸಂಘಟನೆಗಳು ದ್ವೇಷವನ್ನು ಬೆಳೆಸುತ್ತವೆಯೇ ಹೊರತು ನಮ್ಮ ಧರ್ಮದಲ್ಲಿರುವ ಒಳ್ಳೆಯತನಗಳನ್ನು, ನಮ್ಮದೇ ಹಿಂದೂಗಳನ್ನು ಪ್ರೀತಿಸುವುದನ್ನು ಕಲಿಸುವುದಿಲ್ಲ. ನಮ್ಮ ಧರ್ಮದ ಅದೆಷ್ಟೋ ಗೊತ್ತಿರದ ವಿಷಯಗಳ ಬಗ್ಗೆ ಸ್ವಧರ್ಮೀಯ ಜನರಿಗೆ ತಿಳಿ ಹೇಳುವ ಕಾರ್ಯಗಳನ್ನು ಮಾಡುವುದಿಲ್ಲ. ಹಿಂದೂ ಧರ್ಮದಲ್ಲಿ ಹಿಂದುಳಿದವರೆನಿಸಿಕೊಂಡವರ, ಪರಿಶಿಷ್ಟರೆನಿಸಿಕೊಂಡವರ ಅಭಿವೃದ್ದಿಗೆ ಶ್ರಮಿಸಿದ್ದು ಇದುವರೆಗೂ ಇಲ್ಲ. ಕೇವಲ ಸಭೆಗಳಲ್ಲಿ, ಸಮಾಜೋತ್ಸವಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಜಾತೀಯತೆ ವಿರುದ್ಧ ಮಾರುದ್ದದ ಭಾಷಣ ಬಿಗಿಯುವ ಹಿಂದೂ ನಾಯಕರುಗಳು ತಮ್ಮ ಮಾತಿನ ಕಾರ್ಯ ರೂಪಕ್ಕೆ ಇಳಿದಿದ್ದಾರೆಯೇ. ಇಂದು ಭಾರತದಲ್ಲಿ ದಲಿತರ ಮತಾಂತರ, ಭೌದ್ಧ ಧರ್ಮ ಸ್ವೀಕಾರ ಇವುಗಳೆಲ್ಲ ಎಗ್ಗಿಲ್ಲದೆ ನಡೆಯುತ್ತಿದ್ದು ಇದನ್ನು ತಡೆಯುವ ಸಲುವಾಗಿ ದಲಿತರ ಹಿಂದುಳಿದವರ ಅಭಿವೃದ್ದಿಗೆ ಶ್ರಮಿಸಿದ್ದಾರೆಯೇ..?  ಇವೆಲ್ಲವನ್ನೂ ಮಾಡದೆ ದಲಿತರನ್ನು ಹಿಂದೂಗಳಿಂದ ಬೇರ್ಪಡಿಸಲಾಗುತ್ತಿದೆ ಎಂದು ಪ್ರತಿಭಟಿಸಲು ಇವರಿಗೆ ಯಾವ ಅಧಿಕಾರವಿದೆ..



ರಾಜಕೀಯವಾಗಿ ಜಾತಿ ವಿಂಗಡಣೆ, ಕೋಮು ವಿಂಗಡಣೆಗಳು ಎಂದಿಗೂ ಅಭಿವೃದ್ದಿಗೆ ಪೂರಕವಲ್ಲ. ಸ್ವಾತಂತ್ರ್ಯ ಪೂರ್ವದ ಪಕ್ಷ ಎಂಬ ಹಣೆಪಟ್ಟಿ ಹೊಂದಿರುವ ಕಾಂಗ್ರೆಸ್ಸ್ ಮುಸ್ಲಿಮರ ಓಲೈಕೆ ಮಾಡಿ ಹಿಂದೆ ಗಾಂಧೀಜಿ ಮಾಡಿದ್ದ ತಪ್ಪನ್ನೇ ಮುಂದುವರೆಸುತ್ತಿದೆ. ಇನ್ನು ಬಿಜೆಪಿಯವರದು ಬಹುಸಂಖ್ಯಾತ ಹಿಂದೂಗಳ ಓಲೈಕೆ. ಚುನಾವಣೆಗಳು ಹತ್ತಿರ ಬರುವಾಗ ಮಾತ್ರ ಅಲ್ಲಲ್ಲಿ ಹಿಂದೂ ಸಮಾಜೋತ್ಸವಗಳನ್ನು ನಡೆಸುವ ಬಿಜೆಪಿಯವರು ಉಳಿದ ಸಂದರ್ಭಗಳಲ್ಲಿ ಸಮಾಜೋತ್ಸವ ನಡೆಸುವುದಿಲ್ಲ. ಅಲ್ಲಿಗೆ ಇದು ಚುನಾವಣಾ ಗಿಮಿಕ್ ಎಂದು ಸಾಬೀತಾಗುತ್ತದೆ.. ಈ ಎರಡೂ ಕೋಮು ವಿಭಜನಾ ರಾಜಕೀಯದ ಮದ್ಯೆ ನಲುಗಿ ಹೋಗುತ್ತಿರುವುದು ಮಾತ್ರ ನಮ್ಮೀ ಭಾರತ ಮತ್ತು ಭಾರತೀಯರುಗಳಾದ ನಾವುಗಳು.! ರಾಜಕೀಯ ಪಕ್ಷಗಳು, ಸಂಘಟನೆಗಳು ಭಾರತದ ಅಭಿವೃದ್ದಿಗೆ ಹಿಡಿದ ಶಾಪಗಳಾದ ಈ ಕೋಮುವಾದ ಜಾತಿವಾದಗಳನ್ನು ಮೊದಲು ತೊಲಗಿಸಲಿ. ಹೊಸದಾಗಿ ರಾಜಕೀಯಕ್ಕೆ ಬರುವವರು ಜಾತಿರಹಿತನಾಗಿ ಬರಲಿ, ಕೇವಲ ಒಬ್ಬ ಭಾರತೀಯನಾಗಿರಲಿ ಎಂಬುದೇ ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಅಭಿಲಾಷೆ. ನೀವೂ ಅವರಲ್ಲೊಬ್ಬರು ಎಂದುಕೊಳ್ಳುತ್ತೇನೆ..

"ವಂದೇ ಮಾತರಂ"