ತೊರೆದು ಹೋಗದಿರಿ ಭಾವಗಳೇ...
ಈ ಮನವಾ...
ನಿರ್ಭಾವುಕ ಮನಕೆ ಉಸಿರೆಲ್ಲಿದೇ...
ಬದುಕೆಲ್ಲಿದೇ...
ಕಾನನದ ಈ ಜಗದಿ
ಭರವಸೆಯ ಬೆಳಕಾಗಿ...
ಜೀವ ತುಂಬಿದಿರೀ ನೀವು...
ತೊರೆದು ಹೋಗದಿರೀ ಭಾವಗಳೇ...
ಈ ಬದುಕಾ...
ಪರ ಮನಸುಗಳ ನಗಿಸಿದಿರಿ.
ನಿಮ್ಮ ನೋವನು ಅದುಮಿಡುತಾ...
ನಗುವ ಚೆಲ್ಲಿದಿರಿ ನೀವು...
ತೊರೆದು ಹೋಗದಿರೀ ಭಾವಗಳೇ...
ಈ ಖುಷಿಯಾ...
ಬರಡು ಮನಗಳಿಗೆಲ್ಲಾ.
ಒಲವ ಚಿಲುಮೆಯಾಗಿ
ಪ್ರೀತಿ ಸುರಿಸಿದಿರಿ ನೀವು...
ತೊರೆದು ಹೋಗದಿರೀ ಭಾವಗಳೇ.
ಈ ಒಲವಾ...
ತೊರೆದು ಹೋಗದಿರಿ ಭಾವಗಳೇ...
ಈ ಮನವಾ...
ನಿರ್ಭಾವುಕ ಮನಕೆ ಉಸಿರೆಲ್ಲಿದೇ...
ಬದುಕೆಲ್ಲಿದೇ...
ಉಸಿರೆಲ್ಲಿದೇ...ಬದುಕೆಲ್ಲಿದೇ...